ಶುಕ್ರವಾರ, ಏಪ್ರಿಲ್ 19, 2013

ಚರಿತ್ರೆ ಪುಟಗಳಲ್ಲಿ ಮಂಜನಾಡಿ ಸೈಯದ್ ಇಸ್ಮಾಯಿಲ್ ಬುಖಾರಿ ವಲಿಯುಲ್ಲಾಹ್(ರ)


ಕರ್ನಾಟಕ ರಾಜ್ಯದ ಮಂಗಳೂರು ನಗರದಿಂದ ಉತ್ತರಕ್ಕೆ ಸುಮಾರು 25 ಕಿ.ಮಿ. ದೂರದಲ್ಲಿ,ಉಳ್ಳಾಲದಿಂದ ಸುಮಾರು 15 ಕಿ.ಮಿ ದೂರದಲ್ಲಿರುವ ಸೈಯದ್ ಇಸ್ಮಾಈಲ್ ಬುಖಾರಿ ವಲಿಯುಲ್ಲಾಹ್(ರ) ದರ್ಗಾ ದರ್ಶನವಾಗುತ್ತಾದೆ. ಮಂಜನಾಡಿ ಈ ಪ್ರದೇಶ ಬಹಳ ಹಿಂದಿನಿಂದಲೇ ಇಸ್ಲಾಮಿ ಸಂಸ್ಕೃತಿ, ಅಧ್ಯಾತ್ಮಿಕ ಚಟುವಟಿಕೆಗಳಿಗಾಗಿ ಈ ಊರು ಪ್ರಸಿದ್ಧಿಯನ್ನು ಪಡೆದಿದೆ. ಇಲ್ಲಿನ ಪರಿಸರ, ಮಸ್ಜಿದ್, ದರ್ಗಾ ನಾಡಿನ ಇತಿಹಾಸ ಹಾಗೂ ಪ್ರಚಲಿತ ಮುಸ್ಲಿಂ ಜನಸಂಖ್ಯೆ, ಅವರ ಜೀವನ, ಸಂಸ್ಕೃತಿಗಳನ್ನು ಅವಲೋಕಿಸುವಾಗ ಬಹಳ ಹಿಂದಿನ ಕಾಲದಿಂದಲೇ ಇಸ್ಲಾಮಿನ ನಂಟು, ಆಧ್ಯಾತ್ಮಿಕ ಪ್ರಭಾವಕ್ಕೊಳಗಾದ ಊರು. ಮಂಜನಾಡಿಯಲ್ಲಿ ಅಂತ್ಯ ವಿಶ್ರಮಗೊಂಡಿರುವ ಅಸ್ಸಯ್ಯಿದ್ ಇಸ್ಮಾಯಿಲ್(ರ.ಆ) ಇತಿಹಾಸ ಪ್ರಸಿದ್ದರೂ ಖಾದ್ರಿಯಾ ತರೀಖತ್ ಮುಂದಾಳುವೂ ಆಗಿದ್ದ ಅಸ್ಸಯ್ಯಿದ್ ಅಹ್ಮದ್ ಜಲಾಲುದ್ದೀನ್ ಬುಖಾರಿ(ರ.ಆ)ರ ವಂಶಸ್ಥರು. ಪ್ರವಾದಿ ಮುಹಮ್ಮದ್ ಮುಸ್ತಫಾ ಸಲ್ಲಲ್ಲಾಹು ಅಲೈಹಿ ವಸಲ್ಲವಮರ 28ನೇ ತಲೆಮರಿನವರದ ಇವರು ಅನೇಕ ಕರಾಮತ್(ಪವಾಡ)ಗಳನ್ನು ಪ್ರದರ್ಶಿಸಿದ ಅದ್ಬುತ ಸಂತರಾಗಿದ್ದಾರೆ.
ಅವರಿಂದ ಪ್ರಕಟಗೊಂಡ ಒಂದು ಆದ್ಬುತ ಕರಾಮತ್(ಪವಾಡ) ನಿಮ್ಮ ಮುದಿಟ್ಟಿದೆನೇ ಕ್ರಿ.ಶ ಸುಮಾರು 1500ರಲ್ಲಿ ಸಯ್ಯಿದ್ ವಂಶಸ್ಥರನೇಕರು ಪರ್ಷಿಯಾದಲ್ಲಿ ದೀನ್ ಪ್ರಚಾರದಲ್ಲಿ ತೊಡಗಿದ್‌ದರು. ಇಸ್ಲಾಂ ಧರ್ಮದ ಕೀರ್ತಿ ಜಗದಗಲ ಹರಡುತ್ತಿದ್ದ ಆ ಕಾಲದಲ್ಲಿ ಆನೇಕರು ಇಸ್ಲಾಮಿನತ್ತ ಹರಿಯತೊಡಗಿದ್ದರು. ಅದರೆ ಇಸ್ಲಾಮಿನ ಈ ಅಮೋಘ ಯಶಸ್ವಿಯನ್ನನು ಬ್ರಿಟಿಷರಿಗೆ ಸಹಿಸಲಾಗಲಿಲ್ಲ. ಮತ್ಸರದ ಬೇಗೆಯಲ್ಲಿ ಕುದಿಯತೊಡಗಿದ ಬ್ರಿಟಿಷರು ಇಸ್ಲಾಮಿನ ಪ್ರಚಾರವನ್ನು ತಡೆಯಲು ನಾನಾ ವಿಧ ತಂತ್ರಕುತಂತ್ರಗಳನ್ನು ಹೆಣೆದರು. ಯುದ್ದಗಳನ್ನೂ ಮಾಡಿದರು. ಅದರೆ ಯಶಸ್ವಿಯಗಲಿಲ್ಲ. ಕೊನೆಗೆ ಮುಸಲ್ಮಾನರಲ್ಲೇ ಇದ್ದ ಸೂಫೀ ಪಂಥದ ವಿರೋಧಿಗಳನ್ನು ಸಂಘಟಿಸಿ, ದೀನೀ ಪ್ರಚಾರದ ಮುಂಚೂಣಿಯಲ್ಲಿದ್ದ ಅಹ್ಮದ್ ಜಲಾಲುದ್ದೀನ್(ರ)ರನ್ನೇ ಕೊಲ್ಲುವ ಸಂಚು ಹೂಡಿದರು. ಅದೂ ಸಾಮಾನ್ಯ ಕೊಲೆಯಲ್ಲ, ಜೀವಂತವಾಗಿ ದಹಿಸಿ, ಸುಟ್ಟು ಕರಕಲಾಗುವ ದೃಶ್ಯವನ್ನು ನೋಡಿ ಅನಂದಿಸಲು ನಿಶ್ಚಯಿಸಿದರು.
ಸೂಕ್ತ ಸ್ಥಳವೊಂದರಲ್ಲಿ ಗುಟ್ಟಾಗಿ ಅಗ್ನಿ ಕುಂಡ ಸಿದ್ದವಾಯಿತು. ಕಟ್ಟಿಗೆಗಳನ್ನೂ ರಾಶಿ ಮಾಡಲಾಯಿತು. ಒಂದು ದಿನ ಹೊಂಚು ಹಾಕಿ ಆ ಮಹಾನುಭಾವರನ್ನು ಹಿಡಿದು ಚಿತೆಯಲ್ಲಿ ಹಾಕಿ ಬೆಂಕಿ ಕೊಟ್ಟೇ ಬಿಟ್ಟರು! ಚಿತೆಯಿಂದ ಭಾರೀ ಹೊಗೆ ಎದ್ದಿತು! ತಮ್ಮ ವಿರೋಧಿಯೊಬ್ಬ ಜೀವಂತವಾಗಿ ಸುಟ್ಟು ಕರಕಲಾಗುತ್ತಿರುವ ದೃಶ್ಯವನ್ನು ಸವಿಯಲು ದುಷ್ಟರು ಸಾಲುಗಟ್ಟಿ, ನಿಂತಿದ್ದಾರೆ. ಅಷ್ಟರಲ್ಲಿ ಅಗ್ನಿಯಿಂದ ಹೊಗೆಯು ಇನ್ನಷ್ಷು ಪ್ರಬಲವಾಗಿ ವ್ಯಾಪಿದಿ ಸುತ್ತ ನೆರೆದಿದ್ದವರನ್ನು ಉಸಿರುಗಟ್ಟಿಸಿತು. ಜನ ದಿಕ್ಕಾ ಪಲಾಗಿ ಓಡತೊಡಗಿದರು. ಆದರೆ ಹೊಗೆಯು ಊರಿಡೀ ಅವರಿಸಿದ್ದರಿಂದ ಜನ ಪಾರಾಗಲು ಮತ್ತಷ್ಷು ಪಾಡು ಪಡಬೇಕಾಯಿತು. ಅಷ್ಷರಲ್ಲಿ ಏನದ್ಬುತ! ಸಯ್ಯಿದ್ ಜಲಾಲುದ್ದೀನ್(ರ.ಆ)ರವರು ಪ್ರಸ್ನವದನರಾಗಿ ಅವರ ಮುಂದೆ ಪ್ರತ್ಯಕ್ಷರಾದರು! ವೈರಿಗಳು ತಮ್ಮ ಕಣ್ಣುಗಳನ್ನೇ ನಂಬದಾದರು! ಭಯಗ್ರಸ್ತರಾಗಿ ನಾನಾ ಕಡೆ ಓಡತೊಡಗಿದರು. ಪ್ರವಾದಿ ಇಬ್ರಾಹೀಂ(ಅ) ಆಗ್ನಿ ಕುಂಡದಿಂದ ಪಾರಾದಂತೆ ಮಹಾನುಭಾವರೂ ಪಾರಾಗಿದ್ದರು! ವೈರಿಗಳು ಸೋಲೊಪ್ಪಿಕೊಂಡರು. ಮಂದೆ ಶೈಖ್‌ರವರ ಯಾವುದೇ ತಂಟೆಗೆ ಬಾರದೆ ಸುಮ್ಮನಾದರು. ಶೈಖ್‌ರವರನ್ನು ಸುಡಲು ಕೊಟ್ಟ, ಬೆಂಕಿಯ ಹೊಗೆಯು ಆನೇಕ ದಿನಗಳ ಕಾಲ ಆ ಪರಿಸರದಲ್ಲಿ ಉಳಿದುಕೊಂಡಿತ್ತು. ಇಂದು ಕೂಡಾ ಆ ಪರಿಸರವು ಹೊಗೆಯ ಛಾಯೆಯಿರುವ ಸ್ಥಳವಾಗಿದೆ! ಅರಬಿಯಲ್ಲಿ ಹೊಗೆಗೆ (ಬುಖಾರಾ) ಎನ್ನಲಾಗುತ್ತಿದ್ದು ಈ ಅವಿಷ್ಮರಣೀಯ ಘಟನೆಯಿಂದಲೇ ಪ್ರಸ್ತುತ ಸಯ್ಯಿದ್‌ವಂಶಸ್ಥರಿಗೆ ಬುಖಾರಿಯ್ಯ ವಂಶ ಪರಂಪರೆ ಎಂದು ಹೆಸರು ಬಂತು.
ಅಪಾರ ಪಾಂಡಿತ್ಯರ ತುಂಬುಕೊಡವಾಗಿದ್ದ ಸಯ್ಯಿದ್ ಜಲಾಲುದ್ದೀನ್(ರ)ರವರು ಭಾರತಕ್ಕೂ ಬಂದರು. ಪರ್ಶಿಯಾದಿಂದ ಸಮುದ್ರ ಮರ್ಗವಾಗಿ ಭಾರತಕ್ಕೆ ತಲುಪಿದ ಮಹಾನುಭಾವರು ತನ್ನ ಮೂರು ಗಂಡು ಮತ್ತು ಒಂದು ಹೆಣ್ಣು ಮಕ್ಕಳೊಂದಿಗೆ ಕೇರಳದ ಕಣ್ಣೂರು ಸಮೀಪದ ವಲಪಟ್ಟಣಂ ಎಂಬಲ್ಲಿ ಬಂದಿಳಿದರು. ಇವರ ಖ್ಯಾತಿಯನ್ನು ಮೊದಲೇ ಅರಿತಿದ್ದ ಸ್ಥಳೀಯರಿಂದ ಶೈಖ್‌ರವರಿಗೆ ಆತ್ಮೀಯ ಸ್ವಾಗತ, ಆದರಾತಿಥ್ಯಗಳು ದೊರೆತುವು. ಸ್ಥಳೀಯರು ಶೈಖ್‌ರವರಿಗೆ ವಸಕ್ಕೆ ಯೋಗ್ಯವಾದ ಒಂದು ಮನೆಯನ್ನು ಒದಗಿಸಿದರು. ಇಂದಿಗೂ ಕೂಡಾ ಈ ಮನೆಯು ಸುಸ್ಥಿತಿಯಲ್ಲಿದ್ದು (ವಲಪಟ್ಟಣಂ ತಂಙಳ್ ವೀಡ್) ಎಂದು ಗುರುತಿಸಲ್ಪಡುತ್ತಿದೆ. ಇವರು ಇಲ್ಲಿ ಬರುವ ಹೊತ್ತಿಗೆ ಈ ಪ್ರದೇಶದಲ್ಲಿ ಅಬೂಬಕರ್ ಸಿದ್ದೀಕ್ ತಂಙಳ್(ರ)ರವರ 21ನೇ ತಲೆಮಾರಿನ ಸಯ್ಯಿದ್ ಇಬ್ರಾಹೀಂ ಸೀದಿ(ಖಾಳಿ)ರವರು ಖಾಝಿ ಸ್ಥಾನವನ್ನು ಅಲಂಕರಿಸಿದ್ದ್ರು. ಇವರಿಬ್ಬರು ಪರಸ್ಪರ ಪರಿಚಿತರಾದರು. ಇಬ್ರಾಹೀಂ ಸೀದೀ ಖಾಳಿಯವರಿಗೆ ಸಯ್ಯದ್ ಜಲಾಲುದ್ದೀನ್(ರ)ರವರ ಪಾಂಡಿತ್ಯ ಸ್ಥಾನಮಾನಗಳನ್ನು ಗ್ರಹಿಸಿಕೊಳ್ಳಲು ಹೆಚ್ಚು ಹೊತ್ತು ಬೇಕಾಗಲಿಲ್ಲ. ತನ್ನ ಖಾಝಿ ಸ್ಥಾನವನ್ನೇ ಅವರಿಗೆ ವಹಿಸಿಕೊಟ್ಟ್ರು. ಮುಂದೆ ಸೆಯ್ಯಿದ್ ಜಲಾಲುದ್ದೀನ್(ರ)ರವರೇ ಖಾಝಿಯಾಗಿ ಮುಂದುವರೆದರು. ಇಂದಿಗೂ ಕೂಡಾ ಈ ಖಾಳೀ ಪಟ್ಟಣವು ಸಯ್ಯದ್‌ರವರ ವಂಶಪರಂಪರೆ ಉಳಿದುಕೊಂಡಿದೆ!
ಜಲಾಲುದ್ದೀನ್(ರ)ರವರ ಕಾಲಾನಂತರ ಇವರ ಮಕ್ಕಳಲ್ಲಿ ಒರ್ವರು ಕೊಚ್ಚಗೂ, ಮತ್ತೊಬ್ಬರು ಆಜ್ಞಾನ ಸ್ಥಳಕ್ಕೂ ಹೊರಟರು. ಮತ್ತೋರ್ವರು ವಲಪಟ್ಟಣದಲ್ಲಿಯೇ ಸ್ಥಿರವಾಗಿ ಜೀವಿಸಿ ತಮ್ಮ ಹಿರಿಯರ ಕಾರ್ಯವ್ಯಪಿಯಲ್ಲಿ ಮುನ್ನಡೆದರು. ಹೆಣ್ಣು ಮಗಳು ವಲಪಟ್ಟಣದಲ್ಲೇ ಮರಣ ಹೊಂದಿದರು. ಇಂತಹ ಪವಿತ್ರ ಮತ್ತು ಅದರ್ಶ ಪರಂಪರೆಯಿಂದ ಬಂದವರೇ ನಮ್ಮ ಕಥಾ ಪುರುಷರಾದ ಸಯ್ಯಿದ್ ಇಸ್ಮಾಯಿಲ್(ರ)ರವರು
ಕಿ.ಶ. 19ನೆಯ ಶತಮಾನ ಪ್ರಾರಂಭದಲ್ಲಿ ವಲಪಟ್ಟಣಂನ ಸಯ್ಯಿದ್ ವಂಶಸ್ಥರು ಆಗಾಗ ತಮ್ಮ ಶಿಷ್ಯರು, ಕುಟುಂಬಸ್ಥರೊಂದಿಗೆ ಮಂಜನಾಡಿಗೆ ಬಂದು ಹೊಗುತ್ತಿದ್ದರು. ನಾಡಿನ ಜನರ ಧಾರ್ಮಿಕ ಆಶೋತ್ತರಗಳಿಗೆ ಸ್ಪಂದಿಸುತ್ತಾ, ಜನರ ಸಂಕಷ್ಟಗಳಿಗೆ ಪರಿಹಾರವೊದಗಿಸುತ್ತಾ ಧಾರ್ಮಿಕ ಬೋಧನೆ, ಮಾರ್ಗದರ್ಶನಗಳನ್ನು ನೀಡುತ್ತಿದ್ದರು. ವಲಪಟ್ಟಣಂನ ಶೈಖ್‌ಗಳು ಇಲ್ಲಿಗೆ ಆಗಮಿಸುವುದೆಂದರೆ ಊರಲ್ಲಿ ಸಂಭ್ರಮದ ವಾತಾವರಣವೇ ನಿರ್ಮಣವಾಗುತ್ತಿತ್ತು. ಅವರ ಅಗಮನವು ಊರಿನವರಿಗೆ ಭಾಗ್ಯದ ಕದ ತೆರೆದಂತೆ ಭಾಸವಾಗುತ್ತು. ಬಂದ ಶೈಖ್‌ರವರೂ ಇಲ್ಲಿನ ಜನತೆಯ ಸ್ನೇಹಪರತೆ, ಧಾರ್ಮಿಕ ನಿಷ್ಠೆಯನ್ನು ಕಂಡು ಸಂತೃಪ್ತರಾಗುತ್ತಿದ್ದರು. ಇದೇ ಸಮಯದಲ್ಲಿ ಸಯ್ಯಿದ್ ಇಸ್ಮಾಯಿಲ್(ರ)ರವರೂ ತನ್ನ ಹಿರಿಯರೊಂದಿಗೆ ಮಂಜನಾಡಿಗೆ ಆಗಗ ಆಗಮಿಸುತ್ತಿದ್ದರು. ತಮ್ಮ ಪಾರಂಪರ್ಯ ರೂಢಿ ಎಂಬಂತೆ ಹುಟ್ಟಿನಲ್ಲೇ ಮಿಲಾಯತ್ ಸ್ಥಾನ ಪಡೆದ ಮಹಾನುಭಾವರಿವರು.
ಬಾಲ್ಯದಲ್ಲೇ ಬಹಳ ದೈವಭಕ್ತರೂ, ಚುರುಕು ಬುದ್ದಿಯವರೂ ಆಗಿದ್ದ ಇವರು ತಮ್ಮಹಿರಿಯರಿಗೆ ಅಚ್ಚುಮೆಚ್ಚಿನವರಾಗಿದ್ದರು. ಅವರನ್ನು ಜೊತೆಯಲ್ಲಿ ಕರಕೊಂಡು ಬರುವುದೆಂದೆರೆ ಬಹಳ ತ್ರಾಸದಾಯಕ ಕಾರ್ಯವೆಂದು ಅವರೆ ಹಿರಿಯರು ಹೇಳುತ್ತಿದ್ದರು. ಯಾಕೆಂದರೆ ಹುಡುಗ ಇಸ್ಮಾಯಿಲ್(ರ)ರವರು ತಾನು ಕಂಡ, ಕಂಡ ವಸ್ತುಗಳು, ಕೇಳಿದ ವಿಷಯಗಳ ಬಗ್ಗೆ ಕೆದಕಿ ಕೆದಕಿ ಹಿರಿಯರಲ್ಲಿ ವಿವರಣೆ ಕೆಳುತ್ತಿದ್ದರು. ಅವರ ಅದ್ಬುತ ವರ್ತನೆಗಳು ಹಿರಿಯರನ್ನು ಮೂಕ ಮಿಸ್ಮಿತರನ್ನಾಗಿಸುತ್ತಿತ್ತು. ಊರ ಜನತೆಯು ಇನ್ನೂ ಪ್ರಬುದ್ಧಕ್ಕೆ ತಲುಪಿರದ ಹುಡುಗನ ಅದ್ಭುತ ಸಿದ್ಧಿಗಳನ್ನು ಕಂಡು ಚಕಿತರಾಗುತ್ತಿದ್ದರು. ಮಂಜನಾಡಿಯನ್ನು ಆತಿಯಾಗಿ ಮೆಚ್ಚಿದ ಸಯ್ಯಿದ್ ಇಸ್ಮಾಯಿಲ್(ರ)ರವರು ಮಂಜನಾಡಿಯಲ್ಲೇ ಶಾಶ್ವತ ನೆಲೆಸುವ ಇಚ್ಛೆಯನ್ನು ತನ್ನ ಹಿರಿಯರ ಮುಂದಿಟ್ಟರು. ಅವರ ಅನುಮತಿ ಪಡೆದು ಇಲ್ಲೇ ನೆಲೆಸತೊಡಗಿದರು.
ಮಂಜನಾಡಿ ಮತ್ತು ಪರಿಸರದಲ್ಲಿ ಧಾರ್ಮಿಕ ಕ್ರಾಂತಿಯ ಕಹಳೆಯನ್ನೇ ಊದಿದ ಶೈಖ್‌ರವರು ಜನ ಸೇವೆಯಲ್ಲೇ ನಿರತರಾದರು. ಧಾರ್ಮಿಕ ಶಿಕ್ಷಣ, ಆಧ್ಯಾತ್ಮಿಕತೆಯತ್ತ ಜನರನ್ನು ಆಕರ್ಷಿಸುವಲ್ಲಿ ಸಫಲರಾದರು. ಜನರುದೀನೀ ಚಟುವಟಿಕೆಗಳಲ್ಲಿ ಹೆಚ್ಚಿನ ಒಲವು ತೋರಿಸತೊಡಗಿದರು. ತರೀಖತ್‌ನ ಹಾದಿಯಲ್ಲೇ ಆಧ್ಯಾತ್ಮಿಕ ಉನ್ನತಿಯನ್ನು ಗಳಿಸಿಕೊಂಡಿದ್ದ ಇವರು ಅದನ್ನೇ ಜನರಿಗೂ ಬೋದಿಸಿದರು. ಇಷ್ಟರಲ್ಲೇ ಇವರ ಕೀರ್ತಿಯು ನಾನಾ ಕಡೆ ಹಬ್ಬಿತು.
ಬೇರೆ ಬೇರೆ ಊರುಗಳಿಂದ ಜನ ಜಾತಿ, ಮತ ಭೇದವಿಲ್ಲದೆ ಇವರನ್ನು ಸಂದರ್ಶಿಸತೊಡಗಿದರು. ಮಹಾನುಭಾವರ ಬರ್ಕತ್ತಿನಿಂದ ಬಂದವರ ಇಚ್ಚಾ ಕಾರ್ಯಗಳು ಕೈಗೂಡುತ್ತಿತ್ತು. ನಾನಾ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುತ್ತಾ ಬರುತ್ತದ್ದ ಜನರು ಸಂತೃಪ್ತಿಯಿಂದ ಮರಳುತ್ತಿದ್ದರು. ಅರೋಗ್ಯ, ವ್ಯಾಪಾರ, ಕೈಟುಂಬಿಕ ಸಮಸ್ಯೆ ಇತ್ಯಾದಿ ಯಾವುದೇ ವಿಷಯಗಳಿಗೂ ತಕ್ಕುದಾದ ಪರಿಹಾರವನ್ನು ಒದಗಿಸಿಕೊಡುತ್ತಿದ್ದರು. ಆನೇಕ ವರ್ಷಗಳಿಂದ ಪರಸ್ಪರ ಹಗೆತನ ಹೊದಿದ್ದ ಕುಟುಂಬಗಳು ತಮ್ಮ ವೈಷಮ್ಮವನ್ನು ಮರೆತು ಅನ್ಯೋನ್ಯವಾಗಿ ಬಾಳತೊಡಗಿದರು. ಊರಿಡೀ ಸ್ನೇಹದ ವಾತಾವರಣ ನೆಲೆಗೊಂಡಿತು. ವಿವಿಧ ಮತಸ್ಥರವರು ಸೌಹಾರ್ದಯುತ ಬಾಳನ್ನು ಅನುಸರಿಸುವಂತಾಯಿತು. ಸಯ್ಯಿದ್ ಇಸ್ಮಾಯಿಲ್(ರ)ರವರ ಹೆಸರಿನಲ್ಲಿ ಎರಡು ವರ್ಷಕೊಮೆ ನಡೆಸಿ ಬರುವ ಉರುಸ್ ನೆರ್ಚೆ ಮಂಜನಾಡಿಯಲ್ಲಿ ಎಪ್ರಿಲ್ 11 ಪ್ರಾರಂಭಗೊಂಡಿದೆ ಎಪ್ರಿಲ್ 20ರಂದು ಸಮಾರೋಪ ಸಮಾರಂಭಗೊಳಲಿದೆ. 
 ಎಂ.ಆರೀಫ್ ಕಲ್ಕಟ್ಟ