ವೈದ್ಯಕೀಯ ಕ್ಷೇತ್ರದ ವಾಣಿಜ್ಯೀಕರಣವೂ...ಆಮಿರ್‌ಖಾನ್ ಹೇಳಿದ ಕಹಿ ಸತ್ಯವೂ...
‘ಸತ್ಯಮೇವ
ಜಯತೆ’ ರಿಯಾಲಿಟಿ ಶೋದಲ್ಲಿ ಆಮಿರ್ ಖಾನ್ ವೈದ್ಯಕೀಯ ಲೋಕದ ಹುಳುಕುಗಳ ಕುರಿತಂತೆ ಬೆಳಕು
ಚೆಲ್ಲಿದಾಗ ವೈದ್ಯ ಸಮೂಹ ಗರಂ ಆಗಿತ್ತು.ಅಷ್ಟಕ್ಕೂ ಅಮೀರ್ ಖಾನ್ ಹೇಳಿದ್ದರಲ್ಲಿ
ತಪ್ಪೇನಿದೆ? ಇಂದು ವೈದ್ಯ ಕೀಯ ಕ್ಷೇತ್ರ ಯಾವ ಪರಿಯಲ್ಲಿ ವಾಣಿಜ್ಯೀಕರಣ ಗೊಂಡಿದೆ
ಎಂಬುದನ್ನು ಓರ್ವ ಅರೆವೈದ್ಯಕೀಯ ವೃತ್ತಿಪರನಾಗಿ (Practicing Medical Laboratory Technologist)
ನನ್ನ ಅರಿವಿನ ವ್ಯಾಪ್ತಿಯಲ್ಲಿರುವ ಕೆಲವು ವಿಚಾರಗಳನ್ನು ಇಲ್ಲಿ
ಹಂಚಿಕೊಳ್ಳುತ್ತೇನೆ.ಸುಮಾರು ನಾಲ್ಕು ವರ್ಷಗಳ ಹಿಂದೆ ನನ್ನ ಸಂಬಂಧಿಕರೋರ್ವರು ಮಲೇರಿಯಾ
ರೋಗದ ಚಿಕಿತ್ಸೆಗಾಗಿ ಮಂಗಳೂರು ಹೊರವಲಯದ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದರು. ನಾಲ್ಕು
ದಿನಗಳ ಬಳಿಕ ಚೇತರಿಸಿಕೊಂಡ ಅವರು ಇನ್ನೇನು ಡಿಸ್ಚಾರ್ಜ್ ಆಗಬೇಕು ಎನ್ನುವಷ್ಟರಲ್ಲಿ
ಅವರಿಗೆ ಹೊಟ್ಟೆನೋವು ಕಾಣಿಸಿಕೊಂಡಿತು. ಅವರನ್ನು ಪರೀಕ್ಷಿಸಿದ ತಜ್ಞ ವೈದ್ಯನೊಬ್ಬ
ಅಲ್ಟ್ರಾಸೋನೋಗ್ರಫಿ (ಸ್ಕ್ಯಾನಿಂಗ್) ಮಾಡಿಸಿ ಎಂದು ಚೀಟಿ ಬರೆದು ಕೊಟ್ಟ.ಅದಾಗಿ ಕೆಲವು
ನಿಮಿಷಗಳಲ್ಲಿ ನಾನು ಆ ರೋಗಿಯನ್ನು ಸಂದರ್ಶಿಸಲು ಆಸ್ಪತ್ರೆಗೆ ತೆರಳಿದ್ದೆ. ಅವರು ತನ್ನ
ಅನಾರೋಗ್ಯದ ವಿಚಾರಗಳನ್ನು ನನಗೆ ತಿಳಿಸಿದ ಬಳಿಕ ವೈದ್ಯರು ಸ್ಕ್ಯಾನಿಂಗ್ ಮಾಡಿಸಲು
ಬರೆದುಕೊಟ್ಟ ಚೀಟಿಯನ್ನು ತೋರಿಸಿದರು.
ನಾನು
ಅವರ ಹೊಟ್ಟೆ ನೋವಿನ ಲಕ್ಷಣಗಳನ್ನು ವಿಚಾರಿಸಿ ಬರೇ 50 ಪೈಸೆ ಬೆಲೆಯ ಒಂದು
್ಕಚ್ಞಠಿಚ್ಚ150ಞಜ ಎಂಬ ಗ್ಯಾಸ್ಟ್ರಿಕ್‌ನ ಒಂದು ಮಾತ್ರೆ ತಂದು ಕೊಟ್ಟು ಹೇಳಿದೆ;
ಮುಕ್ಕಾಲು ಗಂಟೆ ಕಾದು ನೋಡಿ ಕಡಿಮೆ ಯಾಗದಿದ್ರೆ ಆ ಬಳಿಕ ಸ್ಕ್ಯಾನಿಂಗ್ ಮಾಡಿಸಿ ಮಾತ್ರೆ
ಸೇವಿಸಿ ಅರ್ಧಗಂಟೆಯಲ್ಲಿ ಹೊಟ್ಟೆ ನೋವು ಮಾಯವಾಗಿಬಿಟ್ಟಿತ್ತು. ಇದು ಒಂದು
ಉದಾಹರಣೆಯಷ್ಟೆ. ಕೇವಲ 50ಪೈಸೆ ಬೆಲೆಯ ಒಂದು ಗ್ಯಾಸ್ಟ್ರಿಕ್‌ನ ಮಾತ್ರೆಯಲ್ಲಿ ಮುಗಿಸ
ಬಹುದಾಗಿದ್ದ ಒಂದು ಕ್ಷುಲ್ಲಕ ಸಮಸ್ಯೆಗೆ 400 ರೂಪಾಯಿಯ ಸ್ಕ್ಯಾನಿಂಗ್ ಮಾಡಿಸಿ ಎಂದರೆ ಈ
ವೈದ್ಯನ ಹಿಕಮತ್ತೇನಿರಬಹುದು? ವೈದ್ಯಕೀಯದಲ್ಲಿ ಸ್ನಾತಕೋತ್ತರ ಎಂ.ಡಿ. ಪದವಿಗಳಿಸಿರುವ
ವೈದ್ಯನಿಗೆ ಇಂತಹ ಬೇಸಿಕ್ ವಿಚಾರ ತಿಳಿದಿರಲಿಲ್ಲವೆಂದೇನಲ್ಲ. 400 ರೂಪಾಯಿಯ ಒಂದು
ಸ್ಕ್ಯಾನಿಂಗ್ ಮಾಡಿಸಿ ದರೆ ಕನಿಷ್ಠ 20%ದಂತೆ ವೈದ್ಯನಿಗೆ ಪುಗಸಟ್ಟೆ ಯಾಗಿ 80ರೂಪಾಯಿ
ಕಮಿಷನ್ ದಕ್ಕುತ್ತದೆ..!
ಇದೇ ರೀತಿ ಯಾವುದೇ ವಿಶೇಷ ಪರೀ ಕ್ಷೆಯ ಅಗತ್ಯವಿಲ್ಲದ
ಸಂದರ್ಭಗಳಲ್ಲಿ ರೋಗಿ ಗಳನ್ನು ಪರೀಕ್ಷಾ ಕೇಂದ್ರಗಳಿಗೆ ಕಳುಹಿಸಿ ಹತ್ತಾರು ಪರೀಕ್ಷೆ
ಸ್ಕ್ಯಾನಿಂಗ್ ಅದೂ ಇದೂ ಎಂದು ಮಾಡಿಸಿ ಅನಗತ್ಯವಾಗಿ ರೋಗಿಗಳ ಜೇಬು ಬೋಳಿಸುವ ಚಾಳಿ
ನಗರಪ್ರದೇಶಗಳ ಕೆಲವು ತಜ್ಞ ವೈದ್ಯರಿಗಿದೆ. ವೈದ್ಯಕೀಯ ಕ್ಷೇತ್ರವು ಯಾವ ಪರಿ ಕೆಟ್ಟು
ಕೆರ ಹಿಡಿದು ಹೋಗಿದೆಯೆಂದರೆ ಅಲ್ಲಿ ಮಾನವೀಯ ಮೌಲ್ಯಗಳಿಗೆ ಕಿಲುಬು ಕಾಸಿನ ಬೆಲೆಯೂ
ಇಲ್ಲ. ಯಾವುದೇ ಪರೀಕ್ಷೆ ಮಾಡಿಸಿ ದರೂ ಕೆಲವು ವೈದ್ಯರಿಗೆ 20-40%ವರೆಗೆ ಕಮಿಷನ್
ಸಿಗುತ್ತದೆ.
ಇನ್ನು ಕೆಲವು ವೈದ್ಯರಿಗೊಂದು ಕೆಟ್ಟ ಚಾಳಿ ಯಿದೆ. ಅವರು ಸೂಚಿಸಿದ
ಪರೀಕ್ಷಾ ಕೇಂದ್ರ ಗಳಲ್ಲೇ ಪರೀಕ್ಷೆ ಮಾಡಿಸಬೇಕು. ಒಂದು ವೇಳೆ ರೋಗಿ ತನಗೆ ಆರ್ಥಿಕ
ಮತ್ತು ಇತರ ಅನುಕೂಲ ತೆಗಳಿವೆ ಎಂಬ ಕಾರಣಕ್ಕೆ ಬೇರೆ ಯಾವುದಾದರೂ ಪರೀಕ್ಷಾ
ಕೇಂದ್ರಗಳಲ್ಲಿ ಪರೀಕ್ಷೆ ಮಾಡಿಸಿ ವರದಿ ತಂದರೆ ಅದನ್ನು ಯಾವ ಮುಲಾಜೂ ಇಲ್ಲದೇ
ತಿರಸ್ಕರಿಸಿ ಪುನಃ ತಾನು ಸೂಚಿಸಿದಲ್ಲಿಯೇ ಮಾಡಿ ಸಲು ನಿರ್ಬಂಧಿಸುವ ವೈದ್ಯರೂ ಇದ್ದಾರೆ.
ವೈದ್ಯನಿಗೆ ಕಮಿಷನ್ ನೀಡದ ಪರೀಕ್ಷಾ ಕೇಂದ್ರ ಗಳ ವರದಿಗಳು ಯಾವತ್ತೂ ಇಂತಹ ವೈದ್ಯರಿಗೆ
ಸರಿಯಿರುವುದಿಲ್ಲ (ಕಮಿಷನ್ ಪಡೆಯದೆ ಅಗತ್ಯ ಪರೀಕ್ಷೆಗಳನ್ನು ಮಾಡಿಸುವ ವೈದ್ಯರ
ಕ್ಷಮೆಯಿರಲಿ) ಈ ವರದಿಯ ಆಧಾರದಲ್ಲಿ ಚಿಕಿತ್ಸೆ ನೀಡಿ ಏನಾದರೂ ಹೆಚ್ಚು ಕಡಿಮೆಯಾದರೆ
ಪ್ರಾಣಕ್ಕೆ ಅಪಾಯವಾದರೆ ತಾನು ಜವಾಬ್ದಾರನಲ್ಲವೆಂದು ಕೆಲವು ವೈದ್ಯರು ರೋಗಿಗಳನ್ನು
ಹೆದರಿಸುವುದೂ ಇದೆ.
ಇನ್ನು
ಔಷಧಿಗಳನ್ನು ಬರೆಯುವಲ್ಲಿಯ ಲಾಭ ಬಡುಕುತನಕ್ಕೆ ಕೈ ಹಾಕುವ ವೈದ್ಯರೂ ಇದ್ದಾರೆ. ತನಗೆ
ಯಾವ ಕಂಪೆನಿಯಿಂದ ಹೆಚ್ಚು ಉಡುಗೊರೆಗಳು,ಫ್ಯಾಮಿಲಿ ಫಾರಿನ್ ಟೂರ್ ಪ್ಯಾಕೇಜ್
ಗಿಫ್ಟ್‌ಗಳು ದೊರೆಯುತ್ತವೋ ಅದೇ ಕಂಪೆನಿಯ ಔಷಧಿಗಳನ್ನು ಬರೆದು ರೋಗಿಗಳಿಗೆ ತೊಂದರೆ
ನೀಡುವ ವೈದ್ಯರುಗಳೂ ಇದ್ದಾರೆ.ಒಂದೇ ಔಷಧಿಯನ್ನು ಬೇರೆ ಬೇರೆ ಕಂಪೆನಿಗಳು ತಯಾರಿ
ಸುತ್ತದೆ.ಬೇರೆ ಬೇರೆ ಕಂಪೆನಿಗಳ ದರಗಳಲ್ಲಿಯೂ ವ್ಯತ್ಯಾಸವಿರುತ್ತದೆ.ಒಂದು ಕಂಪೆನಿ
ತಯಾರಿಸಿದ ಮಾತ್ರೆಗೆ ಐದು ರೂಪಾಯಿ ಬೆಲೆಯಿದ್ದರೆ, ಇನ್ನೊಂದು ಕಂಪೆನಿ ತಯಾರಿಸುವ ಅದೇ
ಔಷಧಿ ಹೊಂದಿರುವ ಮಾತ್ರೆಗೆ ಹತ್ತು ರೂಪಾಯಿ ಇರುತ್ತದೆ.
ಸಾಮಾನ್ಯವಾಗಿ ಒಂದೇ ಔಷಧಿ ಹೊಂದಿರುವ ಬೇರೆ ಬೇರೆ ಕಂಪೆನಿಗಳು ತಯಾರಿ ಸುವ ಮಾತ್ರೆಗಳಲ್ಲಿನ ದರಗಳಲ್ಲಿನ ವ್ಯತ್ಯಾಸಗಳನ್ನು ಸೋಂಕು ನಿವಾರಕಗಳಲ್ಲಿ (Antibiotics) ಕಾಣಲು
ಸಾಧ್ಯ. ಇವುಗಳಲ್ಲಿ ಯಾವ ಕಂಪೆ ನಿಯ ಮಾತ್ರೆ ಸೇವಿಸಿದರೂ ಫಲಿತಾಂಶ ಒಂದೇ
ರೀತಿಯಿರುತ್ತದೆ.ಇಂತಹ ಸಂದರ್ಭಗಳಲ್ಲಿ ಕೆಲವು ಕಮರ್ಶಿಯಲ್ ದೃಷ್ಟಿಕೋನದ ವೈದ್ಯರು ತಮ್ಮ
ವೈಯಕ್ತಿಕ ಲಾಭಕ್ಕಾಗಿ ರೋಗಿಗೆ ದುಬಾರಿ ಬೆಲೆಯ ಮಾತ್ರೆ ಬರೆದು ಕೊಟ್ಟು ತೊಂದರೆ
ನೀಡುವುದೂ ಇದೆ. ಕೆಲವು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳು, ಹೈಟೆಕ್ ಆಸ್ಪತ್ರೆಗಳು
ವೈದ್ಯರಿಗೆ, ಅರೆವೈದ್ಯಕೀಯ ವೃತ್ತಿಪರರಿಗೆ ದೊಡ್ಡ ದೊಡ್ಡ ಕಮಿಷನ್ ಪ್ಯಾಕೇಜುಗಳನ್ನು
ನೀಡುತ್ತವೆ.
ಓರ್ವ
ರೋಗಿಗೆ ಇಂತಹ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಿರಿ ಎಂದು ತನ್ನ ಸಂಸ್ಥೆಯ ಮೊಹರು
ಹಾಕಿ ಒಂದು ಚೀಟಿ ಬರೆದು ಕೊಟ್ಟರೆ ರೋಗಿಯ ಚಿಕಿತ್ಸೆಗೆ ಆಸ್ಪತ್ರೆಗಳು ವಿಧಿಸುವ ಶುಲ್ಕದ
20% ದುಡ್ಡನ್ನು ರೆಫರ್ ಮಾಡಿದವನಿಗೆ ತಲುಪಿಸುವ ವ್ಯವಸ್ಥೆಯೂ ಇದೆ.ಈ ಕಮೀಷನ್ ನೀಡುವ
20% ಮೊತ್ತವನ್ನು ಬೇರೆ ಬೇರೆ ಸೇವೆಗಳ ಹೆಸರಲ್ಲಿ ಒಂದಕ್ಕೆರಡು ಸೇರಿಸಿಯೇ ಅಂತಹ ಹೈಟೆಕ್
ಆಸ್ಪತ್ರೆಗಳು ಬಿಲ್ ಮಾಡು ತ್ತವೆ.ಸ್ವಂತ ಆಸ್ಪತ್ರೆಗಳನ್ನು, ಡಯೋಗ್ನೊಸ್ಟಿಕ್
ಸೆಂಟರ್‌ಗಳನ್ನು ಹೊಂದಿರುವ ವೈದ್ಯರ ಬಳಿಗೆ ಅತೀ ಸಾಮಾನ್ಯ ಖಾಯಿಲೆಗೆ ಚಿಕಿತ್ಸೆಗೆ
ಹೋದರೆ ರೋಗಿಯನ್ನು ಅನಗತ್ಯವಾಗಿ ಅಡ್ಮಿಟ್ ಮಾಡು ವುದು, ಅನಗತ್ಯ ಪರೀಕ್ಷೆ ಮಾಡಿಸುವ ಮಹಾ
(?) ವೈದ್ಯರೂ ಇದ್ದಾರೆ.
ಸಿಸೇರಿಯನ್ ಹೆರಿಗೆಯಂತೂ ಇತ್ತೀಚಿನ ದಿನಗಳಲ್ಲಿ
ಒಂದು ಬೃಹತ್ ದಂಧೆಯೇ ಆಗಿ ಬಿಟ್ಟಿದೆ.ಗರ್ಭಿಣಿಗೆ ನೋವು
ಇದೆಯೆಂದೋ,ನಿಶ್ಶಕ್ತಿಯಿದೆಯೆಂದೋ ಆಸ್ಪತ್ರೆಗಳಿಗೆ ಕೊಂಡೊಯ್ದರೆ ಎಂಟು ತಿಂಗಳಿಗೆ ಆಕೆಯ
ಹೊಟ್ಟೆ ಸಿಗಿಯಲು ಅನೇಕ ವೈದ್ಯರು ಸಿದ್ಧರಾಗುತ್ತಾರೆ.ಗರ್ಭಿಣಿಯ ಸಂಬಂಧಿಕರನ್ನು ಮತ್ತು
ಸ್ವತಃ ಗರ್ಭಿಣಿಯನ್ನೂ ಬ್ಲ್ಯಾಕ್‌ಮೇಲ್ ಮಾಡುತ್ತಾರೆ. ಮಗುವಿನ ಹೊಕ್ಕುಳ ಬಳ್ಳಿ
ಕುತ್ತಿಗೆಗೆ ಸುತ್ತು ಬಿದ್ದಿದೆ, ಮಗುವಿನ ಹೃದಯ ಬಡಿತ ಕಡಿಮೆ ಇದೆ, ಗರ್ಭಕೋಶದ ಬಾಯಿ
ತೆರೆಯುವ ಸಾಧ್ಯತೆ ಕಡಿಮೆ ಇದೆ, ಮಗು ಹೊಟ್ಟೆಯೊಳಗೆ ಮಲವಿಸರ್ಜಿಸಿದೆ, ಗರ್ಭಿಣಿಗೆ
ಅತಿಯಾಗಿ ದ್ರವ ವಿಸರ್ಜನೆ (fluid discharge)
ಆಗಿದೆ, ಸಿಸೇರಿಯನ್ ಮಾಡದಿದ್ದರೆ ಮಗು ಜೀವಂತ ಸಿಗದಿದ್ದರೆ ನಾವು ಜವಾಬ್ದಾರರಲ್ಲ ಹೀಗೆ
ಏನೇನೋ ಕಾರಣ ನೀಡಿ ಗರ್ಭಿಣಿಯನ್ನೂ ಆಕೆಯ ಸಂಬಂಧಿಕರನ್ನು ಹೆದರಿಸಿ ಅವರು ಸಿಸೇರಿಯನ್
ಹೆರಿಗೆಗೆ ಒಪ್ಪುವಂತೆ ಮಾಡುತ್ತಾರೆ.
ಎಷ್ಟೇ
ವಿದ್ಯಾವಂತ ಪ್ರಜ್ಞಾ ವಂತನಾದರೂ ಪ್ರಾಣಾಪಾಯವಿದೆ ಎಂದರೆ ಹೆದರುತ್ತಾನೆ.ಸರಕಾರಿ
ಆಸ್ಪತ್ರೆಗಳಲ್ಲಿ ಸಿಸೇರಿಯನ್ ಹೆರಿಗೆ ಪ್ರಕರಣಗಳ ಪ್ರಮಾಣವನ್ನು ಗಮನಿಸಿದರೆ ಸಿಸೇರಿಯನ್
ಹೆರಿಗೆಗಳ ಅಗತ್ಯ ಎಷ್ಟು ಎಂದು ಅರಿವಾಗುತ್ತದೆ.ಖಾಸಗಿ ನರ್ಸಿಂಗ್ ಹೋಮ್‌ಗಳಲ್ಲಿ ಇತ್ತೀ
ಚಿನ ವರ್ಷಗಳಲ್ಲಿ 70% ಹೆರಿಗೆಗಳು ಸಿಸೇರಿ ಯನ್ ಮೂಲಕವೇ ನಡೆಯುತ್ತದೆ.ಆದರೆ ಸರಕಾರಿ
ಆಸ್ಪತ್ರೆಗಳಲ್ಲಿ ಸಿಸೇರಿಯನ್ ಹೆರಿಗೆಗಳ ಪ್ರಮಾಣ 5% ಮಾತ್ರ. ಸಾಮಾನ್ಯ ಹೆರಿಗೆಗೆ
ಮಧ್ಯಮ ಮಟ್ಟದ ಆಸ್ಪತ್ರೆಗಳಲ್ಲಿ 10ರಿಂದ 12ಸಾವಿರ ರೂಪಾಯಿ ಖರ್ಚಾಗುತ್ತದಾದರೆ
ಸಿಸೇರಿಯನ್ ಹೆರಿಗೆಗೆ 35-40 ಸಾವಿರ ರೂಪಾಯಿವರೆಗೆ ತಗಲುತ್ತದೆ. ಸಿಸೇರಿಯನ್ ಎಂಬ
ಹಗಲುದರೋಡೆಯ ಕಷ್ಟ ಅನು ಭವಿಸಿದವರೆಲ್ಲರಿಗೂ ಗೊತ್ತಿರುವ ಸತ್ಯ.
ಚಿಕ್ಕ ವೈದ್ಯರಿಗೆ ಕಮಿಷನ್ ನೀಡಿ ರೋಗಿಗಳನ್ನು ತಮ್ಮ ಬಳಿಗೆ ರೆಫರ್ ಮಾಡುವಂತಹ ತಜ್ಞ ವೈದ್ಯರುಗಳ ದಂಧೆಯೂ ಇದೆ. ಇಂತಹ ಮೋಸದ ಒಂದು ಉದಾಹರಣೆ:ಸುಮಾರು
ಐದು ವರ್ಷಗಳ ಹಿಂದೆ ನನ್ನ ಹತ್ತಿರದ ಸಂಬಂಧಿ ಅಸ್ತಮಾ ರೋಗಿಯೊಬ್ಬರಿಗೆ ಅಸ್ತಮಾ
ಉಲ್ಬಣಿಸಿತ್ತು.ಅವರ ಕುಟುಂಬ ಸ್ನೇಹಿತನೂ ಮತ್ತು ಕುಟುಂಬ ವೈದ್ಯನೂ ಆಗಿರುವ ಎಂ.ಬಿ.
ಬಿ.ಎಸ್.ವೈದ್ಯನ ಬಳಿಗೆ ತುರ್ತು ಚಿಕಿತ್ಸೆಗೆ ಕೊಂಡೊಯ್ದರು. ಆ ವೈದ್ಯ ಮಹಾಶಯ
ರೋಗಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿ ಮಂಗಳೂರಿನ ಓರ್ವ (ಕು)ಖ್ಯಾತ
ಶಸ್ತ್ರ ಚಿಕಿತ್ಸಕ ವೈದ್ಯನಿಗೆ ರೋಗಿಯನ್ನು ರೆಫರ್ ಮಾಡಿದ. ಸಾಮಾನ್ಯ ಜನರಿಗೆ ಯಾವ
ವೈದ್ಯ ಯಾವ ವಿಷಯದಲ್ಲಿ ತಜ್ಞ ಎಂಬ ಬಗ್ಗೆ ದೊಡ್ಡ ಜ್ಞಾನವೇನೂ ಇರುವುದಿಲ್ಲ.
ಅಸ್ತಮಾ
ರೋಗಿಯೊಬ್ಬನನ್ನು ಓರ್ವ ಫಿಸಿಶಿಯನ್‌ಗೋ, ಅಥವಾ ಶ್ವಾಸಕೋಶ ಸಂಬಂಧೀ ಖಾಯಿಲೆಗಳ ಕುರಿತ
ನುರಿತ ವೈದ್ಯನಿಗೋ ರೆಫರ್ ಮಾಡುವುದು ಬಿಟ್ಟು ಓರ್ವ ಶಸ್ತ್ರ ಚಿಕಿತ್ಸಕ(General Sergen)ನಿಗೆ
ರೆಫರ್ ಮಾಡುವುದರ ಹಿಂದಿನ ಉದ್ದೇಶ ಕಮಿಷನ್ ಗಳಿಸಲು ಎಂಬುದು ಸ್ಪಷ್ಟ.
ಶಸ್ತ್ರಚಿಕಿತ್ಸಕ ಆ ರೋಗಿಯನ್ನು ಇನ್ನೋರ್ವ ಪಿಸಿಶಿಯನ್‌ಗೆ ರೆಫರ್ ಮಾಡಿದ.ರೋಗಿಗೆ
ನಿಜವಾಗಿ ಚಿಕಿತ್ಸೆ ನೀಡುತ್ತಿರುವವನು ಫಿಸಿಶಿಯನ್ ಆದರೂ ರೋಗಿ ಆಸ್ಪತ್ರೆಯಲ್ಲಿರುವಷ್ಟು
ಕಾಲ ಶಸ್ತ್ರಚಿಕಿತ್ಸಕನೂ ದಿನಕ್ಕೆರಡು ಬಾರಿ ರೌಂಡ್ಸ್‌ಗೆ ಬಂದು ಸುಖಾಸುಮ್ಮನೆ ರೋಗಿಯ
ರಕ್ತದೊತ್ತಡ ಮತ್ತು ದೇಹದ ಉಷ್ಣಾಂಶ ಪರೀಕ್ಷಿಸಿ ಹೋಗುತ್ತಿದ್ದ.ಒಂದು ವಿಸಿಟ್‌ಗೆ 200
ರೂಪಾಯಿಯಂತೆ ತನ್ನ ಶುಲ್ಕವನ್ನೂ ಪಡೆಯುತ್ತಿದ್ದ. ಮಾತ್ರವಲ್ಲದೇ ಇಂತಹ ವೈದ್ಯರುಗಳು
ತಾವು ರೆಫರ್ ಮಾಡಿದ ವೈದ್ಯರುಗಳಿಂದಲೂ ಕಮಿಷನ್ ಗಿಟ್ಟಿಸುತ್ತಾರೆ. ಮತ್ತು ತಮಗೆ ರೆಫರ್
ಮಾಡಿದ ಚಿಕ್ಕ ವೈದ್ಯರಿಗೂ ಕಮಿಷನ್ ನೀಡುತ್ತಾರೆ. ವೈದ್ಯಕೀಯ ಜಗತ್ತಿನಲ್ಲಿ ಇದೊಂದು
ಹಳೆಯ ದಂಧೆ.
ಇನ್ನು ಅನೇಕ ಬಾರಿ ಬಡರೋಗಿಗಳು ದುಡ್ಡಿನ ಮುಖ ನೋಡದೇ ಅತ್ಯುತ್ತಮ
ಚಿಕಿತ್ಸೆ ಬಯಸಿ ದುಬಾರಿ ದುಡ್ಡು ಪೀಕಿಸುವ ದೊಡ್ಡ ದೊಡ್ಡ ವೈದ್ಯರ ಬಳಿಗೆ ಹೋಗುತ್ತಾರೆ.
ಇಂತಹ ಸಂದರ್ಭಗಳಲ್ಲಿ ಚಿಕಿತ್ಸೆಯ ಬಳಿಕ ಬಡರೋಗಿ ಡಾಕ್ಟ್ರೇ ಎಷ್ಟಾಯಿತು? ಎಂದು
ಕೇಳಿದರೆ ಮುಖ ಸಿಂಡರಿಸುವ ವೈದ್ಯ ಮಹಾಶಯರೂ ಇದ್ದಾರೆ. ಯಾಕೆ ಗೊತ್ತೇ? ಇದೇ ವೈದ್ಯ
ಮಹಾಶಯರುಗಳ ಬಳಿಗೆ ಬರುವ ಕೆಲವು ಶ್ರೀಮಂತ ರೋಗಿಗಳು ಫೀಸು ಎಷ್ಟೆಂದು ವಿಚಾರಿಸದೇ ಸಾವಿರ
ರೂಪಾಯಿಯ ಗರಿಗರಿ ನೋಟನ್ನು ಎಸೆದು ಬಾಕಿ ಪಡೆಯದೇ ಗತ್ತಿನಿಂದ ಹೋಗುತ್ತಾರೆ.
ಇಂತಿರುವಾಗ ಬಡರೋಗಿಗಳು ಮಡಿಕೆ ಮಡಿಕೆಯಾದ ಹತ್ತರ ನೋಟುಗಳನ್ನು ಎಣಿಸಿಕೊಡುವುದು ಕೆಲವು
ವೈದ್ಯ ಮಹಾಶಯರ ಪಾಲಿಗೆ ಅವಮಾನವೆಂಬಂತೆನಿಸುತ್ತದೆ.
ಇನ್ನು ವೈದ್ಯಕೀಯ
ಕಾಲೇಜುಗಳಲ್ಲಿನ ಹುಳುಕಿನ ಒಂದು ಪುಟ್ಟ ಸ್ಯಾಂಪಲ್ ಇಂತಿದೆ. ಕೋಟ್ಯಂತರ ರೂಪಾಯಿ
ಡೊನೇಶನ್ ಪಡೆಯುವ ಕೆಲವು ವೈದ್ಯಕೀಯ ಕಾಲೇಜುಗಳು ಸೂಕ್ತ ಮತ್ತು ಅಗತ್ಯವಿರುವ
ಸಿಬ್ಬಂದಿಗಳನ್ನು ನೇಮಿಸುವುದೂ ಇಲ್ಲ. ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ದೊಡ್ಡ
ಮನುಷ್ಯರು ತಪಾಸಣೆಗೆ ಬರುವಾಗ ಮುಂಚಿತವಾಗಿ ತಿಳಿಸಿಯೇ ಬರುತ್ತಾರೆ. ಆ ಸಂದರ್ಭಗಳಲ್ಲಿ
ಕೆಲವು ಬಾಡಿಗೆ ಸಿಬ್ಬಂದಿಗಳನ್ನು ಎರಡು ದಿನಗಳ ಕಾಲಕ್ಕೆ ತಾತ್ಕಾಲಿಕವಾಗಿ ನೇಮಕ
ಮಾಡಿಕೊಳುತ್ತಾರೆ. ಹೀಗೆ ಎರಡು ದಿನಗಳ ಮಟ್ಟಿಗೆ ಬಾಡಿಗೆಗೆ ಪಡೆಯುವ ವೈದ್ಯಕೀಯ
ಸಿಬ್ಬಂದಿಗಳ ಬಾಡಿಗೆ ಇಂತಿದೆ.
ಓರ್ವ
ಸ್ನಾತಕೋತ್ತರ ಪದವೀಧರ ವೈದ್ಯನಿಗೆ ಊಟ ತಿಂಡಿ ಪ್ರಯಾಣದ ಖರ್ಚು ಕಳೆದು ಒಂದು ದಿನದ
ಬಾಡಿಗೆ 7,000/- ರೂಪಾಯಿಗಳು, ಎಂ.ಬಿ.ಬಿ.ಎಸ್. ವೈದ್ಯನಿಗೆ ಖರ್ಚು ಕಳೆದು ದಿನದ
ಬಾಡಿಗೆ 5,000/- ರೂಪಾಯಿಗಳು, ಅರೆವೈದ್ಯಕೀಯ ಸಿಬ್ಬಂದಿಗೆ ಖರ್ಚು ಕಳೆದು ದಿನದ ಬಾಡಿಗೆ
2,000/- ರೂಪಾಯಿಗಳು. (ವೈದ್ಯಕೀಯ ಕಾಲೇಜೊಂದರಲ್ಲಿ ಅರೆವೈದ್ಯಕೀಯ ಸಿಬ್ಬಂದಿಯಾಗಿ
ಸೇವೆ ಸಲ್ಲಿಸುತ್ತಿದ್ದಾಗ ನಾನು ಕಂಡ ಅನುಭವವಿದು)ಅನೇಕ ವೈದ್ಯಕೀಯ ಕಾಲೇಜುಗಳು ಕಡಿಮೆ
ಸಂಬಳಕ್ಕೆ ಸಿಗುತ್ತಾರೆಂದು ಯಾವುದೇ ಮಾನ್ಯತೆ ಇಲ್ಲದ ನಕಲಿ ಅರೆವೈದ್ಯಕೀಯ
ಸರ್ಟಿಫಿಕೇಟುಗಳನ್ನು ಹೊಂದಿರುವ ಸಿಬ್ಬಂದಿಗಳನ್ನೇ ಕೆಲಸಕ್ಕಿಟ್ಟುಕೊಳ್ಳುತ್ತದೆ.
ಓರ್ವ
ಅರ್ಹ ಅರೆವೈದ್ಯಕೀಯ ಸಿಬ್ಬಂದಿ ಹತ್ತು ಸಾವಿರ ರೂಪಾಯಿಗಿಂತ ಕಡಿಮೆ ವೇತನಕ್ಕೆ ಕೆಲಸ
ಮಾಡಲು ಸಿದ್ಧನಿರುವುದಿಲ್ಲ.ಆದರೆ ಮಾನ್ಯತೆಯಿರದ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದು ನಕಲಿ
ಪ್ರಮಾಣ ಪತ್ರಗಳೊಂದಿಗೆ ಬರುವಾತ 5,000/- ರೂಪಾಯಿಗೆ ದುಡಿಯಲು
ಸಿದ್ಧನಿರುತ್ತಾನೆ.ಮಂಗಳೂರಿನ ಹೆಚ್ಚಿನ ವೈದ್ಯಕೀಯ ಕಾಲೇಜುಗಳಲ್ಲಿ ಕೇರಳ ಮೂಲದ
ಮಾನ್ಯತೆಯಿರದ ಸಂಸ್ಥೆಗಳಲ್ಲಿ ಅರೆವೈದ್ಯಕೀಯ ಶಿಕ್ಷಣ ಪಡೆದ ಅನೇಕ ಅರೆವೈದ್ಯಕೀಯ
ಸಿಬ್ಬಂದಿಗಳು ಸೇವೆ ಸಲ್ಲಿಸುತ್ತಿದ್ದಾರೆ. ಇಂತಹವರಿಂದ ತರಬೇತಿ ಪಡೆದ ವೈದ್ಯರ ಅರಿವಿನ
ಮಟ್ಟ ಎಂತಹದ್ದಿರಬಹುದೆಂದು ಊಹಿಸಿ.
40-50
ಲಕ್ಷ ರೂಪಾಯಿ ಖರ್ಚು ಮಾಡಿ ಎಂ.ಬಿ.ಬಿ.ಎಸ್, 80 ಲಕ್ಷದಿಂದ ಒಂದು ಕೋಟಿ ರೂಪಾಯಿಗಳವರೆಗೆ
ಖರ್ಚು ಮಾಡಿ ಸ್ನಾತಕೋತ್ತರ ವೈದ್ಯ ಪದವಿ ಪಡೆದು ಬರುವ ವೈದ್ಯರುಗಳಿಗೆ ಈ ಪರಿಯಾಗಿ
ರೋಗಿಗಳ ಜೇಬು ಕತ್ತರಿಸದೇ ಅವರು ಶಿಕ್ಷಣ ಪಡೆಯಲು ಹೂಡಿದ ಬಂಡವಾಳವನ್ನು ವಾಪಾಸು ಪಡೆಯಲು
ಸಾಧ್ಯವಿಲ್ಲ. ಅವರುಗಳಿಗೆ ತಾವು ಹೂಡಿರುವ ಬಂಡವಾಳದ ಮುಂದೆ ಮಾನವೀಯ ಮೌಲ್ಯಗಳು
ನಗಣ್ಯವೆನಿಸಬಹುದು. ಈ ದೇಶದ ವೈದ್ಯಕೀಯ ಕ್ಷೇತ್ರವನ್ನು ಸುಧಾರಣೆ ಮಾಡಬೇಕೆಂದರೆ ಮೊಟ್ಟ
ಮೊದಲಾಗಿ ವೈದ್ಯಕೀಯ ಶಿಕ್ಷಣದ ವಾಣಿಜ್ಯೀಕರಣವನ್ನು ತಡೆಗಟ್ಟಲೇಬೇಕು.
ವೈದ್ಯಕೀಯ
ಕ್ಷೇತ್ರದಲ್ಲಿ ಇಂತಹ ದರೋಡೆಕೋರರ ಮಧ್ಯೆಯೂ ಅತ್ಯಂತ ಮಾನವೀಯ ಸೇವೆ ನೀಡುವ, ರೋಗಿಗಳ
ಆರ್ಥಿಕ ಪರಿಸ್ಥಿತಿಯನ್ನು ಅರಿತು ಶುಲ್ಕ ಪಡೆಯುವ, ಅಗತ್ಯದ ಪರೀಕ್ಷೆಗಳನ್ನು ಮಾತ್ರ
ಮಾಡಿಸುವ ಸಜ್ಜನ ವೈದ್ಯರೂ ಇದ್ದಾರೆ. ಸಾಮಾನ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ವೃತ್ತಿ
ನಿರ್ವಹಿಸುವ ವೈದ್ಯರುಗಳು ನಗರ ಪ್ರದೇಶಗಳ ವೈದ್ಯರಿಗಿಂತ ಹೆಚ್ಚು ಮಾನವೀಯ
ಅಂತಃಕರಣವನ್ನು ಹೊಂದಿರುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ವೃತ್ತಿ ನಿರತ ವೈದ್ಯರಿಗೆ
ರೋಗಿಯ ಕೌಟುಂಬಿಕ ಹಿನ್ನೆಲೆ, ಆರ್ಥಿಕ ಪರಿಸ್ಥಿತಿ ಇತ್ಯಾದಿಗಳ ಸ್ಪಷ್ಟ ಅರಿವೂ
ಇರುತ್ತದೆ. ನಗರ ಪ್ರದೇಶಗಳಿಗೆ ಹೋಲಿಸಿದಾಗ ಹೆಚ್ಚು ಜನಾನುರಾಗಿ ವೈದ್ಯರಿರುವುದು
ಗ್ರಾಮೀಣ ಪ್ರದೇಶಗಳಲ್ಲಿ ಎಂಬುದು ವಾಸ್ತವ.
ವೈದ್ಯರುಗಳು ಕಡ್ಡಾಯ ಗ್ರಾಮೀಣ ಸೇವೆ ಮಾಡಲೇಬೇಕೆಂಬ ನಿಯಮಾವಳಿಯನ್ನು ಕಡ್ಡಾಯಗೊಳಿಸಬೇಕು
ಮತ್ತು ಬಲಿಷ್ಠಗೊಳಿಸಬೇಕು.ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಮಾಡುವುದರಿಂದ ವೈದ್ಯರುಗಳು
ಜನರ ನಾಡಿಮಿಡಿತವನ್ನು ಅರಿಯಲು ಸಾ್ಯವಿದೆ.ಅಮೀರ್ ಖಾನ್ ಹೇಳಿಕೆಯ ವಿರುದ್ಧ ಗರಂ ಆಗಿರುವ
ವೈದ್ಯಕೀಯ ಸಮೂಹವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.ಇದಾಗ್ಯೂ ಅಮೀರ್ ಖಾನ್‌ರ
ಹೇಳಿಕೆಯನ್ನು ಕೆಲವು ಮಾನವೀಯತೆಯ ಪರವಿರುವ, ವೈದ್ಯಕೀಯ ಕ್ಷೇತ್ರದ ವಾಣಿಜ್ಯೀಕರಣದ
ವಿರುದ್ಧವಿರುವ ವೈದ್ಯಕೀಯ ಸಂಘಟನೆಗಳು ಸಮರ್ಥಿಸಿ ಅಮೀರ್‌ಖಾನ್‌ಗೆ ಬೆಂಬಲ ನೀಡಿರುವುದು
ಸಂತಸದಾಯಕ.
(ಸಜ್ಜನ ವೈದ್ಯರ ಕ್ಷಮೆಯಿರಲಿ.)
ಇದೇ ರೀತಿ ಯಾವುದೇ ವಿಶೇಷ ಪರೀ ಕ್ಷೆಯ ಅಗತ್ಯವಿಲ್ಲದ ಸಂದರ್ಭಗಳಲ್ಲಿ ರೋಗಿ ಗಳನ್ನು ಪರೀಕ್ಷಾ ಕೇಂದ್ರಗಳಿಗೆ ಕಳುಹಿಸಿ ಹತ್ತಾರು ಪರೀಕ್ಷೆ ಸ್ಕ್ಯಾನಿಂಗ್ ಅದೂ ಇದೂ ಎಂದು ಮಾಡಿಸಿ ಅನಗತ್ಯವಾಗಿ ರೋಗಿಗಳ ಜೇಬು ಬೋಳಿಸುವ ಚಾಳಿ ನಗರಪ್ರದೇಶಗಳ ಕೆಲವು ತಜ್ಞ ವೈದ್ಯರಿಗಿದೆ. ವೈದ್ಯಕೀಯ ಕ್ಷೇತ್ರವು ಯಾವ ಪರಿ ಕೆಟ್ಟು ಕೆರ ಹಿಡಿದು ಹೋಗಿದೆಯೆಂದರೆ ಅಲ್ಲಿ ಮಾನವೀಯ ಮೌಲ್ಯಗಳಿಗೆ ಕಿಲುಬು ಕಾಸಿನ ಬೆಲೆಯೂ ಇಲ್ಲ. ಯಾವುದೇ ಪರೀಕ್ಷೆ ಮಾಡಿಸಿ ದರೂ ಕೆಲವು ವೈದ್ಯರಿಗೆ 20-40%ವರೆಗೆ ಕಮಿಷನ್ ಸಿಗುತ್ತದೆ.
ಇನ್ನು ಕೆಲವು ವೈದ್ಯರಿಗೊಂದು ಕೆಟ್ಟ ಚಾಳಿ ಯಿದೆ. ಅವರು ಸೂಚಿಸಿದ ಪರೀಕ್ಷಾ ಕೇಂದ್ರ ಗಳಲ್ಲೇ ಪರೀಕ್ಷೆ ಮಾಡಿಸಬೇಕು. ಒಂದು ವೇಳೆ ರೋಗಿ ತನಗೆ ಆರ್ಥಿಕ ಮತ್ತು ಇತರ ಅನುಕೂಲ ತೆಗಳಿವೆ ಎಂಬ ಕಾರಣಕ್ಕೆ ಬೇರೆ ಯಾವುದಾದರೂ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಮಾಡಿಸಿ ವರದಿ ತಂದರೆ ಅದನ್ನು ಯಾವ ಮುಲಾಜೂ ಇಲ್ಲದೇ ತಿರಸ್ಕರಿಸಿ ಪುನಃ ತಾನು ಸೂಚಿಸಿದಲ್ಲಿಯೇ ಮಾಡಿ ಸಲು ನಿರ್ಬಂಧಿಸುವ ವೈದ್ಯರೂ ಇದ್ದಾರೆ. ವೈದ್ಯನಿಗೆ ಕಮಿಷನ್ ನೀಡದ ಪರೀಕ್ಷಾ ಕೇಂದ್ರ ಗಳ ವರದಿಗಳು ಯಾವತ್ತೂ ಇಂತಹ ವೈದ್ಯರಿಗೆ ಸರಿಯಿರುವುದಿಲ್ಲ (ಕಮಿಷನ್ ಪಡೆಯದೆ ಅಗತ್ಯ ಪರೀಕ್ಷೆಗಳನ್ನು ಮಾಡಿಸುವ ವೈದ್ಯರ ಕ್ಷಮೆಯಿರಲಿ) ಈ ವರದಿಯ ಆಧಾರದಲ್ಲಿ ಚಿಕಿತ್ಸೆ ನೀಡಿ ಏನಾದರೂ ಹೆಚ್ಚು ಕಡಿಮೆಯಾದರೆ ಪ್ರಾಣಕ್ಕೆ ಅಪಾಯವಾದರೆ ತಾನು ಜವಾಬ್ದಾರನಲ್ಲವೆಂದು ಕೆಲವು ವೈದ್ಯರು ರೋಗಿಗಳನ್ನು ಹೆದರಿಸುವುದೂ ಇದೆ.
ಸಿಸೇರಿಯನ್ ಹೆರಿಗೆಯಂತೂ ಇತ್ತೀಚಿನ ದಿನಗಳಲ್ಲಿ ಒಂದು ಬೃಹತ್ ದಂಧೆಯೇ ಆಗಿ ಬಿಟ್ಟಿದೆ.ಗರ್ಭಿಣಿಗೆ ನೋವು ಇದೆಯೆಂದೋ,ನಿಶ್ಶಕ್ತಿಯಿದೆಯೆಂದೋ ಆಸ್ಪತ್ರೆಗಳಿಗೆ ಕೊಂಡೊಯ್ದರೆ ಎಂಟು ತಿಂಗಳಿಗೆ ಆಕೆಯ ಹೊಟ್ಟೆ ಸಿಗಿಯಲು ಅನೇಕ ವೈದ್ಯರು ಸಿದ್ಧರಾಗುತ್ತಾರೆ.ಗರ್ಭಿಣಿಯ ಸಂಬಂಧಿಕರನ್ನು ಮತ್ತು ಸ್ವತಃ ಗರ್ಭಿಣಿಯನ್ನೂ ಬ್ಲ್ಯಾಕ್‌ಮೇಲ್ ಮಾಡುತ್ತಾರೆ. ಮಗುವಿನ ಹೊಕ್ಕುಳ ಬಳ್ಳಿ ಕುತ್ತಿಗೆಗೆ ಸುತ್ತು ಬಿದ್ದಿದೆ, ಮಗುವಿನ ಹೃದಯ ಬಡಿತ ಕಡಿಮೆ ಇದೆ, ಗರ್ಭಕೋಶದ ಬಾಯಿ ತೆರೆಯುವ ಸಾಧ್ಯತೆ ಕಡಿಮೆ ಇದೆ, ಮಗು ಹೊಟ್ಟೆಯೊಳಗೆ ಮಲವಿಸರ್ಜಿಸಿದೆ, ಗರ್ಭಿಣಿಗೆ ಅತಿಯಾಗಿ ದ್ರವ ವಿಸರ್ಜನೆ (fluid discharge) ಆಗಿದೆ, ಸಿಸೇರಿಯನ್ ಮಾಡದಿದ್ದರೆ ಮಗು ಜೀವಂತ ಸಿಗದಿದ್ದರೆ ನಾವು ಜವಾಬ್ದಾರರಲ್ಲ ಹೀಗೆ ಏನೇನೋ ಕಾರಣ ನೀಡಿ ಗರ್ಭಿಣಿಯನ್ನೂ ಆಕೆಯ ಸಂಬಂಧಿಕರನ್ನು ಹೆದರಿಸಿ ಅವರು ಸಿಸೇರಿಯನ್ ಹೆರಿಗೆಗೆ ಒಪ್ಪುವಂತೆ ಮಾಡುತ್ತಾರೆ.
ಚಿಕ್ಕ ವೈದ್ಯರಿಗೆ ಕಮಿಷನ್ ನೀಡಿ ರೋಗಿಗಳನ್ನು ತಮ್ಮ ಬಳಿಗೆ ರೆಫರ್ ಮಾಡುವಂತಹ ತಜ್ಞ ವೈದ್ಯರುಗಳ ದಂಧೆಯೂ ಇದೆ. ಇಂತಹ ಮೋಸದ ಒಂದು ಉದಾಹರಣೆ:ಸುಮಾರು ಐದು ವರ್ಷಗಳ ಹಿಂದೆ ನನ್ನ ಹತ್ತಿರದ ಸಂಬಂಧಿ ಅಸ್ತಮಾ ರೋಗಿಯೊಬ್ಬರಿಗೆ ಅಸ್ತಮಾ ಉಲ್ಬಣಿಸಿತ್ತು.ಅವರ ಕುಟುಂಬ ಸ್ನೇಹಿತನೂ ಮತ್ತು ಕುಟುಂಬ ವೈದ್ಯನೂ ಆಗಿರುವ ಎಂ.ಬಿ. ಬಿ.ಎಸ್.ವೈದ್ಯನ ಬಳಿಗೆ ತುರ್ತು ಚಿಕಿತ್ಸೆಗೆ ಕೊಂಡೊಯ್ದರು. ಆ ವೈದ್ಯ ಮಹಾಶಯ ರೋಗಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿ ಮಂಗಳೂರಿನ ಓರ್ವ (ಕು)ಖ್ಯಾತ ಶಸ್ತ್ರ ಚಿಕಿತ್ಸಕ ವೈದ್ಯನಿಗೆ ರೋಗಿಯನ್ನು ರೆಫರ್ ಮಾಡಿದ. ಸಾಮಾನ್ಯ ಜನರಿಗೆ ಯಾವ ವೈದ್ಯ ಯಾವ ವಿಷಯದಲ್ಲಿ ತಜ್ಞ ಎಂಬ ಬಗ್ಗೆ ದೊಡ್ಡ ಜ್ಞಾನವೇನೂ ಇರುವುದಿಲ್ಲ.
ಇನ್ನು ಅನೇಕ ಬಾರಿ ಬಡರೋಗಿಗಳು ದುಡ್ಡಿನ ಮುಖ ನೋಡದೇ ಅತ್ಯುತ್ತಮ ಚಿಕಿತ್ಸೆ ಬಯಸಿ ದುಬಾರಿ ದುಡ್ಡು ಪೀಕಿಸುವ ದೊಡ್ಡ ದೊಡ್ಡ ವೈದ್ಯರ ಬಳಿಗೆ ಹೋಗುತ್ತಾರೆ. ಇಂತಹ ಸಂದರ್ಭಗಳಲ್ಲಿ ಚಿಕಿತ್ಸೆಯ ಬಳಿಕ ಬಡರೋಗಿ ಡಾಕ್ಟ್ರೇ ಎಷ್ಟಾಯಿತು? ಎಂದು ಕೇಳಿದರೆ ಮುಖ ಸಿಂಡರಿಸುವ ವೈದ್ಯ ಮಹಾಶಯರೂ ಇದ್ದಾರೆ. ಯಾಕೆ ಗೊತ್ತೇ? ಇದೇ ವೈದ್ಯ ಮಹಾಶಯರುಗಳ ಬಳಿಗೆ ಬರುವ ಕೆಲವು ಶ್ರೀಮಂತ ರೋಗಿಗಳು ಫೀಸು ಎಷ್ಟೆಂದು ವಿಚಾರಿಸದೇ ಸಾವಿರ ರೂಪಾಯಿಯ ಗರಿಗರಿ ನೋಟನ್ನು ಎಸೆದು ಬಾಕಿ ಪಡೆಯದೇ ಗತ್ತಿನಿಂದ ಹೋಗುತ್ತಾರೆ. ಇಂತಿರುವಾಗ ಬಡರೋಗಿಗಳು ಮಡಿಕೆ ಮಡಿಕೆಯಾದ ಹತ್ತರ ನೋಟುಗಳನ್ನು ಎಣಿಸಿಕೊಡುವುದು ಕೆಲವು ವೈದ್ಯ ಮಹಾಶಯರ ಪಾಲಿಗೆ ಅವಮಾನವೆಂಬಂತೆನಿಸುತ್ತದೆ.
ಇನ್ನು ವೈದ್ಯಕೀಯ ಕಾಲೇಜುಗಳಲ್ಲಿನ ಹುಳುಕಿನ ಒಂದು ಪುಟ್ಟ ಸ್ಯಾಂಪಲ್ ಇಂತಿದೆ. ಕೋಟ್ಯಂತರ ರೂಪಾಯಿ ಡೊನೇಶನ್ ಪಡೆಯುವ ಕೆಲವು ವೈದ್ಯಕೀಯ ಕಾಲೇಜುಗಳು ಸೂಕ್ತ ಮತ್ತು ಅಗತ್ಯವಿರುವ ಸಿಬ್ಬಂದಿಗಳನ್ನು ನೇಮಿಸುವುದೂ ಇಲ್ಲ. ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ದೊಡ್ಡ ಮನುಷ್ಯರು ತಪಾಸಣೆಗೆ ಬರುವಾಗ ಮುಂಚಿತವಾಗಿ ತಿಳಿಸಿಯೇ ಬರುತ್ತಾರೆ. ಆ ಸಂದರ್ಭಗಳಲ್ಲಿ ಕೆಲವು ಬಾಡಿಗೆ ಸಿಬ್ಬಂದಿಗಳನ್ನು ಎರಡು ದಿನಗಳ ಕಾಲಕ್ಕೆ ತಾತ್ಕಾಲಿಕವಾಗಿ ನೇಮಕ ಮಾಡಿಕೊಳುತ್ತಾರೆ. ಹೀಗೆ ಎರಡು ದಿನಗಳ ಮಟ್ಟಿಗೆ ಬಾಡಿಗೆಗೆ ಪಡೆಯುವ ವೈದ್ಯಕೀಯ ಸಿಬ್ಬಂದಿಗಳ ಬಾಡಿಗೆ ಇಂತಿದೆ.
ವೈದ್ಯಕೀಯ ಕ್ಷೇತ್ರದಲ್ಲಿ ಇಂತಹ ದರೋಡೆಕೋರರ ಮಧ್ಯೆಯೂ ಅತ್ಯಂತ ಮಾನವೀಯ ಸೇವೆ ನೀಡುವ, ರೋಗಿಗಳ ಆರ್ಥಿಕ ಪರಿಸ್ಥಿತಿಯನ್ನು ಅರಿತು ಶುಲ್ಕ ಪಡೆಯುವ, ಅಗತ್ಯದ ಪರೀಕ್ಷೆಗಳನ್ನು ಮಾತ್ರ ಮಾಡಿಸುವ ಸಜ್ಜನ ವೈದ್ಯರೂ ಇದ್ದಾರೆ. ಸಾಮಾನ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ವೃತ್ತಿ ನಿರ್ವಹಿಸುವ ವೈದ್ಯರುಗಳು ನಗರ ಪ್ರದೇಶಗಳ ವೈದ್ಯರಿಗಿಂತ ಹೆಚ್ಚು ಮಾನವೀಯ ಅಂತಃಕರಣವನ್ನು ಹೊಂದಿರುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ವೃತ್ತಿ ನಿರತ ವೈದ್ಯರಿಗೆ ರೋಗಿಯ ಕೌಟುಂಬಿಕ ಹಿನ್ನೆಲೆ, ಆರ್ಥಿಕ ಪರಿಸ್ಥಿತಿ ಇತ್ಯಾದಿಗಳ ಸ್ಪಷ್ಟ ಅರಿವೂ ಇರುತ್ತದೆ. ನಗರ ಪ್ರದೇಶಗಳಿಗೆ ಹೋಲಿಸಿದಾಗ ಹೆಚ್ಚು ಜನಾನುರಾಗಿ ವೈದ್ಯರಿರುವುದು ಗ್ರಾಮೀಣ ಪ್ರದೇಶಗಳಲ್ಲಿ ಎಂಬುದು ವಾಸ್ತವ.
(ಸಜ್ಜನ ವೈದ್ಯರ ಕ್ಷಮೆಯಿರಲಿ.)