ಕನ್ನಡವನ್ನು ಮರೆಯುವಂತಿಲ್ಲ, ತುಳು ಬಿಡುವಂತಿಲ್ಲ : ಗುರುದೇವಾನಂದ ಸ್ವಾಮಿಜಿ
http://www.vknews.in/2014/01/23/tulu-kannadigara-sneha-sammilana/
ಮುಂಬಯಿ : ಮುಂಬಯಿಯಲ್ಲಿನ ನನ್ನ ಆರಂಭದ ದಿನಗಳಲ್ಲಿ ನಾಟಕ ರಂಗಕ್ಕೆ ಸಿಗುತ್ತಿದ್ದ ಪ್ರೋತ್ಸಾಹವೇ ಅಭಿನಯಕ್ಕೆ ಉತ್ಸಾಹ ತರುತ್ತಿತ್ತು. ಅವಾಗಿನ ವಾತಾವರಣವೇ ಬೇರೆ ಕಲಾಕಾರರು ಮತ್ತು ಕಲಾಭಿಮಾನಿಗಳಲ್ಲಿ ಉಮೇದು ಎನ್ನುವುದು ಒಂದಿತ್ತು ಅದು ಪ್ರದರ್ಶನಗಳ ಹೌಸ್‍ಫುಲ್ ಮೂಲಕ ಉತ್ತರಿಸುತ್ತಿತ್ತು. ಆದರೆ ಈಗ ಕಾಲ ಬದಲಾಗಿ ಪ್ರೇಕ್ಷಕರ ಕೊರತೆಯೇ ಕಾಣುತ್ತಿದೆ. ಕಾರಣ ನವಪೀಳಿಗೆಯಲ್ಲಿ ಸಂಸ್ಕೃತಿ, ಭಾಷಾಭಿಮಾನದ ಕೊರತೆಯಾಗಿದೆ ಎಂದು ಖ್ಯಾತ ಚಲನಚಿತ್ರ ನಿರ್ಮಾಪಕ ಮತ್ತು ಹಿರಿಯ ರಂಗತಜ್ಞ ಸದಾನಂದ ಸುವರ್ಣ ತಿಳಿದರು.
ಕಳೆದ ಆದಿತ್ಯವಾರ ಸಂಜೆ ನವಿಮುಂಬಯಿ ಜುಯೀ ನಗರದಲ್ಲಿನ ಬಂಟ್ಸ್ ಸೆಂಟರ್‍ನಲ್ಲಿ ಕನ್ನಡ ಕಲಾ ಕೇಂದ್ರ ಮುಂಬಯಿ ಮತ್ತು ಬೋಂಬೆ ಬಂಟ್ಸ್ ಅಸೋಸಿಯೇಶನ್ ಸಂಸ್ಥೆಗಳು ಆಯೋಜಿಸಿದ್ದ ನವಿಮುಂಬಯಿ`ತುಳು-ಕನ್ನಡಿಗರ ಸ್ನೇಹ ಸಮ್ಮಿಲನ’ದಲ್ಲಿ ಮುಖ್ಯ ಅತಿಥಿಯಾಗಿದ್ದು ಮಾತನಾಡಿ ಸುವರ್ಣರು ತಿಳಿದರು.
ಶ್ರೀ ಕ್ಷೇತ್ರ ಒಡಿಯೂರು ಇದರ ಶ್ರೀ ಗುರು ದೇವಾನಂದ ಸ್ವಾಮೀಜಿ ಅವರು ದೀಪ ಪ್ರಜ್ವಲಿಸಿ `ಸ್ನೇಹ ಸಮ್ಮಿಲನ’ ಉದ್ಘಾಟಿಸಿದರು. ನಮಗೆ ಎರಡು ತಾಯಂದಿರು. ಕನ್ನಡ ತಾಯಿ, ತುಳು ತಾಯಿ, ಅಜ್ಜಿಯಾರೆಂದರೆ ಹಿಂದಿ ಭಾಷೆಯಾಗಿರುತ್ತದೆ. ಕನ್ನಡವನ್ನು ಮರೆಯುವಂತಿಲ್ಲ, ತುಳು ಬಿಡುವಂತಿಲ್ಲ. ಹಿಂದಿ ಬೇಕೆ ಬೇಕು. ಭಾರತೀಯರು ಎಲ್ಲೇ ನೆಲೆಯಾದರೂ ತಮ್ಮ ಮಾತೃ ಸಂಸ್ಕೃತಿಯನ್ನು ಓಲೈಸುವಲ್ಲಿ ಸಕ್ರೀಯರಾಗಬೇಕು. ಭಾಷೆ ಬೆಳೆದರೆ ಸಂಸ್ಕೃತಿ ತನ್ನಷ್ಟಕ್ಕೆಯೇ ಬೆಳೆಯುತ್ತದೆ. ಮುಂಬಯಿಗರು ಸಾಂಘಿಕ ಚತುರರು. ಇವರೇ ನಿಜವಾದ ಸಂಸ್ಕೃತಿ ಪೋಷಕರು ಎಂದು ತುಳು ಭಾಷೆ, ಸಂಸ್ಕೃತಿಯ ಸೊಗಸನ್ನು ರಸವತ್ತಾಗಿ ತಿಳಿಸಿ ನೆರೆದ ಸಭಿಕರನ್ನು ಒಡಿಯೂರುಶ್ರೀ ಅನುಗ್ರಹಿಸಿದರು.
ಬೋಂಬೆ ಬಂಟ್ಸ್ ಅಸೋಸಿಯೇಶನ್‍ನ ಅಧ್ಯಕ್ಷ ನ್ಯಾ| ರತ್ನಾಕರ ವಿ.ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರುಗಿಸಲಾದ ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ ದಕ್ಷಿಣ ಕನ್ನಡ ಮತ್ತು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್‍ಕುಮಾರ್ ಕಲ್ಕೂರ, ಸಂಶೋಧಕ-ಪ್ರಸಿದ್ಧ ಯಕ್ಷಗಾನ ವಿದ್ವಾಂಸ ಡಾ| ರಾಘವ ನಂಬಿಯಾರ್, ನಾದಬಿಂದು ಚಿನ್ಮಯ ಮಿಶನ್ ಕೋಲ್‍ವಾನ್‍ನ ನಿರ್ದೇಶಕಿ ಶ್ರೀಮತಿ ಪ್ರಮೋದಿನಿ ರಾವ್, ಉದಯ ಕಲಾನಿಕೇತನ ಸಾಗರ ಸಂಸ್ಥೆಯ ನಿರ್ದೇಶಕ ಎಸ್.ಬ್ರಹ್ಮಾಚಾರ್ ಉಪಸ್ಥಿತರಿದ್ದರು.
8ನೇ ಶತಮಾನದಲ್ಲಿ ಬದುಕನ್ನು ಬೆಳಗಿಸಿದ ಆದಿಶಂಕರಾಚಾರ್ಯರು ಹಿಂದೂ ಧರ್ಮವನ್ನು ಪ್ರತಿಪಾದಿಸಿದ ದಿಗ್ಗಜರು. ಅದಕ್ಕಾಗಿ ಮೂರು ಬಾರಿ ಕನ್ಯಾಕುಮಾರಿಯಿಂದ ಹಿಮಾಲಯದ ವರೆಗೆ ಪಾದಯಾತ್ರೆಯನ್ನೂ ಕೈಗೊಂಡಿದ್ದರು. ಎಂದು ಡಾ| ರಾಘವ ನಂಬಿಯಾರ್ ನುಡಿದರು.
ಪ್ರಮೋದಿನಿ ರಾವ್ ಮತ್ತು ಬ್ರಹ್ಮಾಚಾರ್ ಇಲ್ಲಿನ ತುಳು-ಕನ್ನಡಿಗರ ಸಾಂಸ್ಕೃತಿಕ ಉತ್ಸಹ ಮತ್ತು ಸಂಸ್ಕೃತಿ ಮೈಗೂಡಿಸುವಿಕೆಯನ್ನು ಪ್ರಶಂಸಿದರು.
ರಾಷ್ಟ್ರಾಭಿಮಾನ ಮತ್ತು ಸಂಸ್ಕಾರಯುತ ಬಾಳಿಗೆ ಇಂತಹ ಕಾರ್ಯಕ್ರಮಗಳು ಮಾದರಿಯಾಗಿದೆ. ಏಕತೆಯಿಂದ ಮುನ್ನಡೆದರೆ ಎಲ್ಲರ ಬದುಕೂ ಹಸನಾಗುವುದು ಎಂದು ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ನ್ಯಾ| ರತ್ನಾಕರ ಶೆಟ್ಟಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಬಂಟ್ಸ್ ಅಸೋಸಿಯೇಶನ್‍ನ ಗೌ| ಕಾರ್ಯದರ್ಶಿ ನ್ಯಾ| ಡಿ.ಕೆ ಶೆಟ್ಟಿ, ಕೋಶಾಧಿಕಾರಿ ಸಿಎ| ಸುರೇಂದ್ರ ಕೆ.ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಆಶಾ ಎಸ್.ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷೆ ನಿವೇದಿತಾ ಎ.ಶೆಟ್ಟಿ, ನ್ಯಾ| ಕೆ.ಪಿ ಪ್ರಕಾಶ್ ಎಲ್.ಶೆಟ್ಟಿ, ರಮೇಶ್ ಪೂಜಾರಿ, ಬಿ.ಹೆಚ್ ಕಟ್ಟಿ, ವಿ.ಕೆ ಸುವರ್ಣ, ಮಂಜುನಾಥ್ ಗೌಡ, ಪ್ರಸಾದ್ ನಿಂಜೂರು, ಜಗದೀಶ್ ಶೆಟ್ಟಿ ನಾಡಾಜೆಗುತ್ತು ಮತ್ತು ವಿಜಯ ಹೆಗ್ಡೆ, ಕರುಣಾಕರ ಆಳ್ವ, ಪ್ರಭಾಕರ್ ಹೆಗ್ಡೆ, ಜಿ.ಟಿ ಆಚಾರ್ಯ ಸೇರಿದಂತೆ ನವಿಮುಂಬಯಿ ಆಸುಪಾಸಿನ ಇತರ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದು, ಗುರು ದೇವಾನಂದ ಸ್ವಾಮೀಜಿ ಅವರನ್ನು ಗೌರವಿಸಿದರು.
ಕನ್ನಡ ಕಲಾ ಕೇಂದ್ರ ಮುಂಬಯಿ ತಂಡವು `ಶ್ರೀ ಆದಿಶಂಕರಾಚಾರ್ಯ’ ನಾಟಕದ 10ನೇ ಪ್ರದರ್ಶನವನ್ನು ಸಾಂಸ್ಕೃತಿಕ ಕಾರ್ಯಕ್ರಮವನ್ನಾಗಿ ಸಾದರ ಪಡಿಸಿತು. ತುಳು ಕನ್ನಡಿಗರ ಸ್ನೇಹ ಸಮ್ಮಿಲನ ಸಮಿತಿಯ ಗೌರವಾಧ್ಯಕ್ಷ ಶ್ಯಾಮ್ ಎನ್.ಶೆಟ್ಟಿ ಸ್ವಾಗತಿಸಿದರು. ಕಲಾ ಕೇಂದ್ರದ ಅಧ್ಯಕ್ಷ ಬಿ.ಬಾಲಚಂದ್ರ ರಾವ್ ಪ್ರಾಸ್ತವಿಕ ನುಡಿಗಳನ್ನಾಡಿದರು. ಶಿಮುಂಜೆ ಪರಾರಿ ಮತ್ತು ಟಿ.ಆರ್ ಮಧುಸೂದನ್ ಕಾರ್ಯಕ್ರಮ ನಿರೂಪಿಸಿದರು. ನಿವೇದಿತಾ ಎ.ಶೆಟ್ಟಿ ವಂದನಾರ್ಪಣೆಗೈದರು.
ಚಿತ್ರ / ವರದಿ : ಆರಿಫ್ ಕಲ್ಕಟ್ಟಾ.