ಶುಕ್ರವಾರ, ಆಗಸ್ಟ್ 16, 2013
ಫೊಟೋ ಜರ್ನಲಿಸ್ಟ್ ದಯಾ ಕುಕ್ಕಾಜೆ ಬಿಡುಗಡೆ
ಫೊಟೋ ಜರ್ನಲಿಸ್ಟ್ ದಯಾ ಕುಕ್ಕಾಜೆ ಬಿಡುಗಡೆ
ಒತ್ತಡಕ್ಕೆ ಬಿದ್ದು ಸುಳ್ಳು ದೂರು ನೀಡಿದ್ದ ಯುವತಿ!
ಮಂಗಳೂರು: ಅತ್ಯಾಚಾರ ಆರೋಪಕ್ಕೆ ಒಳಗಾಗಿ ಬಂಧಿತರಾಗಿದ್ದ ನ್ಯೂಸ್ ವೆಬ್‍ಸೈಟ್ ಛಾಯಾಚಿತ್ರಗ್ರಾಹಕ ದಯಾನಂದ ಕುಕ್ಕಾಜೆ ವಿರುದ್ಧ ಯುವ ತಿಯೊಬ್ಬಳು ದಾಖಲಿಸಿದ್ದ ದೂರು ಸುಳ್ಳೆಂದು ಸಾಬೀತಾದ ಹಿನ್ನೆಲೆಯಲ್ಲಿ ನಿನ್ನೆ ಸಂಜೆ ಅವರನ್ನು ಠಾಣಾ ಜಾಮೀ ನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.
ನಗರದ ಮೂವರು ಫೊಟೋ ಜರ್ನಲಿಸ್ಟ್‍ಗಳ ಒತ್ತಡಕ್ಕೆ ಬಲಿಬಿದ್ದು ಯುವತಿ ದೂರು ಕೊಟ್ಟಿದ್ದಾಳೆ ಎನ್ನಲಾ ಗಿದ್ದು, ಇದನ್ನು ಸ್ವತಃ ಯುವತಿಯೇ ನ್ಯಾಯಾಧೀಶರ ಮುಂದೆ ಒಪ್ಪಿಕೊಂಡ ಕಾರಣ ಪ್ರಕರಣಕ್ಕೆ ಇತಿಶ್ರೀ ಹಾಡಲಾಗಿದೆ. ಕುಕ್ಕಾಜೆಯನ್ನು ಬಂಧಿಸಿದ ನಂತರ ಪೊಲೀಸರು ಇವರಿಬ್ಬರ ಮಧ್ಯೆ ಫೇಸ್ ಬುಕ್‍ನಲ್ಲಿ ನಡೆದಿರುವ ಚಾಟಿಂಗ್‍ಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಲ್ಯಾಪ್‍ಟಾಪ್ ಮತ್ತು ಮೊಬೈಲ್‍ಗಳನ್ನು ಜಾಲಾಡಿದ್ದಾರೆ. ಆದರೆ ಎಲ್ಲೂ ಕೂಡ ಯಾವುದೇ ರೀತಿಯ ಬೆದರಿಕೆ ಸಂದೇಶಗಳು ಕಂಡುಬಂದಿಲ್ಲ ಎನ್ನ ಲಾಗಿದೆ. ಈ ಹಿನ್ನೆಲೆಯಲ್ಲಿ ದೂರು ನೀಡಿದ ಯುವತಿ ಮತ್ತು ಕುಕ್ಕಾಜೆ ಯನ್ನು ಪೊಲೀಸ್ ಕಮಿಷನರ್ ಹಾಗೂ ಎಸಿಪಿ ಸಮ್ಮುಖದಲ್ಲಿ ಸುದೀರ್ಘ ವಿಚಾರಣೆ ನಡೆಸಿದ್ದು, ಆರೋಪದಲ್ಲಿ ಹುರುಳಿಲ್ಲ ಎಂದು ಕಂಡುಬಂದಿದೆ. ಅಲ್ಲದೇ ತಾನು ಅತ್ಯಾಚಾರ ದೂರು ನೀಡಿಲ್ಲ, ನನ್ನಿಂದ ಸುಳ್ಳು ದೂರು ಕೊಡಿಸಲಾಗಿದೆ ಎಂದು ಹೇಳಿಕೆ ನೀಡಿ ವೈದ್ಯಕೀಯ ಪರೀಕ್ಷೆಯನ್ನೂ ಯುವತಿ ನಿರಾಕರಿಸಿ ದ್ದಾಳೆ. ಅಂತಿಮವಾಗಿ ಇವೆಲ್ಲದರ ಸತ್ಯಾಸತ್ಯತೆ ಅರಿತ ಪೊಲೀಸರು ಠಾಣಾ ಜಾಮೀನಿನ ಮೂಲಕ ದಯಾ ಕುಕ್ಕಾಜೆಯನ್ನು ಬಿಡುಗಡೆ ಗೊಳಿಸಿದ್ದಾರೆ.
ಇಡೀ ಪ್ರಕರಣದ ಅಸಲೀ ಕಥೆಯೇನು?
ಹೇಳಿ ಕೇಳಿ ದಯಾನಂದ ಕುಕ್ಕಾಜೆ ಮಂಗಳೂರಿನ ಪ್ರಸಿದ್ದ ಛಾಯಾಚಿತ್ರಗ್ರಾಹಕ. ಈಗಾಗಲೇ ಸಾಕಷ್ಟು ಪ್ರಶಸ್ತಿಗಳ ಜೊತೆಗೆ ಒಂದಷ್ಟು ಪ್ರದರ್ಶನಗಳನ್ನೂ ನೀಡಿ ಜಿಲ್ಲೆಯಲ್ಲಿ ಸಾಕಷ್ಟು ಹೆಸರು ಗಳಿಸಿಕೊಂಡವರು. ಆದರೆ ಇವರ ಈ ಜನಪ್ರಿಯತೆ ಸಹಿಸದ ವೃತ್ತಿ ವೈಷಮ್ಯ ಹೊಂದಿ ರುವ ಕೆಲ ಛಾಯಾಗ್ರಾಹಕರು ಹಲವು ದಿನಗಳ ಹಿಂದೆಯೇ ಇಂಥದ್ದೊಂದು ಮಾನಹಾನಿಯ ಯೋಜನೆ ರೂಪಿ ಸಿದ್ದರು ಎನ್ನಲಾಗಿದೆ. ದಯಾನಂದ ಕುಕ್ಕಾಜೆಗೂ ಪೊಲೀಸರಿಗೆ ದೂರು ಕೊಟ್ಟ ಯುವತಿ ರೀನಾ ಫೆರ್ನಾಂ ಡಿಸ್(ಹೆಸರು ಬದಲಿಸಲಾಗಿದೆ)ಳಿಗೂ ಕಳೆದ ಕೆಲ ವರ್ಷಗಳ ಹಿಂದೆ ಫೇಸ್ ಬುಕ್‍ನಲ್ಲಿ ಪರಿಚಯವಾಗಿದೆ. ಈ ಪರಿಚಯ ಗೆಳೆತನಕ್ಕೆ ತಿರುಗಿದ್ದು, ಇಬ್ಬರೂ ಉತ್ತಮ ಸ್ನೇಹಿತರಾಗಿದ್ದರು ಎನ್ನಲಾಗಿದೆ. ಆದರೆ ಈ ವಿಚಾರ ಕೆಲ ದಿನಗಳ ಹಿಂದೆ ವೆಬ್‍ಸೈಟ್‍ನ ಕ್ರೈಸ್ತ ಪತ್ರಕರ್ತನೊಬ್ಬನಿಗೆ ತಿಳಿದು ಆತ ಆಕೆಯನ್ನು ಬ್ಲ್ಯಾಕ್‍ಮೇಲ್ ಮಾಡಿದ್ದಾನೆ (ಈತನಿಗೆ ಕುಕ್ಕಾಜೆಯೊಂದಿಗೆ ವೃತ್ತಿ ವೈಷಮ್ಯ ಇದೆ ಎನ್ನಲಾಗಿದೆ). ಕುಕ್ಕಾಜೆ ಯೊಂದಿಗೆ ಗೆಳೆತನ ಹೊಂದಿರುವ ಬಗ್ಗೆ ಮನೆಯವರಿಗೆ ತಿಳಿಸುವುದಾಗಿ ಬೆದರಿಕೆ ಒಡ್ಡಿದ್ದಾನೆ ಎನ್ನಲಾಗಿದೆ. ಅಲ್ಲದೇ ಈ ಬಗ್ಗೆ ಉಳಿದ ಇಬ್ಬರು ಫೋಟೋ ಜರ್ನಲಿಸ್ಟ್‍ಗಳೊಂದಿಗೆ ಸೇರಿಕೊಂಡು ಯುವತಿಯಲ್ಲಿ ಕುಕ್ಕಾಜೆ ವಿರುದ್ಧ ಬ್ಲ್ಯಾಕ್‍ಮೇಲ್ ದೂರು ದಾಖ ಲಿಸುವಂತೆ ಬೆದರಿಸಿದ್ದಾರೆ.
ಇದರಿಂದ ವಿಚಾರ ಮನೆಯಲ್ಲಿ ತಿಳಿದು ರಾದ್ಧಾಂತವಾಗುವುದು ಬೇಡ ಅಂದುಕೊಂಡ ಯುವತಿ ವಿಚಲಿತ ಗೊಂಡಿದ್ದು, ಬ್ಲ್ಯಾಕ್‍ಮೇಲ್ ದೂರು ದಾಖಲಿಸಲು ಒಪ್ಪಿಕೊಂಡಿದ್ದಾಳೆ. ಅದರಂತೆ ಈ ಮೂವರು ಫೋಟೋ ಜರ್ನಲಿಸ್ಟ್‍ಗಳು ಯುವತಿಯ ಮೂಲಕ ಕುಕ್ಕಾಜೆ ಮೇಲೆ ಕೇಸು ದಾಖಲಿಸಿದ್ದಾರೆ.
ಅಲ್ಲದೇ ಕೇಸು ದಾಖಲಾದ ಕೆಲವೇ ಘಂಟೆಯಲ್ಲಿ ಕುಕ್ಕಾಜೆಯನ್ನು ಬಂಧಿಸು ವಂತೆ ಪೊಲೀಸರಿಗೂ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ. ಇದೀಗ ಕುಕ್ಕಾಜೆ ಬಿಡುಗಡೆ ಗೊಂಡಿದ್ದರೂ ವಿಚಾರಣೆ ಮುಂದುವರೆಯಲಿದೆ.
ಸಹೋದ್ಯೋಗಿ ಫೋಟೋ ಜರ್ನಲಿಸ್ಟ್‍ಗಳ ಷಡ್ಯಂತ್ರ!
ಇದೀಗ ಈ ಇಡೀ ಪ್ರಕರ ಣದಲ್ಲಿ ನಗರದ ಮೂವರು ಛಾಯಾಚಿತ್ರಗ್ರಾಹಕರು ಕೈಯಾ ಡಿಸಿರುವುದು ಬೆಳಕಿಗೆ ಬಂದಿದೆ. ಇವರಲ್ಲಿ ಓರ್ವ ಮಹಿಳಾ ಫೋಟೋಗ್ರಾಫರ್ ಕೂಡ ಸೇರಿದ್ದಾರೆ ಎನ್ನಲಾಗಿದೆ. ಒಂದು ರಾಜ್ಯಮಟ್ಟದ ಪತ್ರಿಕೆ ಸೇರಿದಂತೆ ವೆಬ್‍ಸೈಟ್‍ನ ಇಬ್ಬರು ಫೋಟೋ ಜರ್ನಲಿಸ್ಟ್‍ಗಳು ಕೆಲದಿನಗಳ ಹಿಂದೆಯೇ ಈ ಸಂಬಂಧ ಯೋಜನೆ ರೂಪಿಸಿದ್ದರು. ಇವರಲ್ಲಿ ಓರ್ವ ಛಾಯಾಗ್ರಾಹಕ ಮೂರು ದಿನಗಳಿಂದ ಪಾಂಡೇಶ್ವರ ಠಾಣೆಗೆ ಹೋಗಿಬರುತ್ತಿದ್ದು, ತನ್ನ ಪ್ರಭಾವವನ್ನು ಉಪಯೋಗಿಸಿ ಪೊಲೀಸರಿಗೂ ಒತ್ತಡ ಹಾಕಿದ್ದರು ಎಂದು ತಿಳಿದುಬಂದಿದೆ. ಅಲ್ಲದೇ ದಯಾನಂದ ಕುಕ್ಕಾಜೆಯನ್ನು ಪೊಲೀಸರು ಬಂಧಿಸಲು ಬಂದಾ ಗಲೂ ಆತ ಪೊಲೀಸರ ಜೊತೆಗೆ ಬಂದಿದ್ದ ಎಂಬ ಮಾಹಿತಿಯೂ ಇದೆ.
ಕನ್ನಡ ಬಾರದ ಯುವತಿಯಲ್ಲಿ ಸುಳ್ಳು ದೂರು ಕೊಡಿಸಿದರು!
ಈ ಇಡೀ ಪ್ರಕರಣದಲ್ಲಿ ನಗರದ ಮೂವರು ಛಾಯಾಚಿತ್ರ ಪತ್ರಕರ್ತರ ಅಸಲಿಯತ್ತು ಬಯಲಿಗೆ ಬಂದಿದೆ. ಕ್ರೈಸ್ತ ಪತ್ರಕರ್ತನ ಬೆದರಿಕೆಗೆ ಮಣಿದು ಯುವತಿ ದೂರು ನೀಡಲು ಮುಂದಾದಳಾದರೂ ಪ್ರಕರಣ ಇಷ್ಟೊಂದು ಗಂಭೀರ ಸ್ವರೂಪಕ್ಕೆ ತಲುಪುತ್ತದೆ ಎಂಬ ಬಗ್ಗೆ ಆಕೆಗೂ ಗೊತ್ತಿರಲಿಲ್ಲ. ಅಲ್ಲದೇ ಯುವತಿಯಲ್ಲಿ ಕೇವಲ ಬ್ಲ್ಯಾಕ್‍ಮೇಲ್ ದೂರು ಎಂದು ಹೇಳಿದ್ದ ಆ ಮೂವರು ಫೋಟೋ ಜರ್ನಲಿಸ್ಟ್‍ಗಳು ದೂರಿನ ಪ್ರತಿಯಲ್ಲಿ ಅತ್ಯಾಚಾರ ಎಂಬುದನ್ನು ಕೂಡ ದಾಖಲಿಸಿದ್ದಾರೆ. ಆದರೆ ಯು ವತಿಗೆ ಕನ್ನಡ ಬಾರದ ಕಾರಣ ಅದನ್ನು ಓದಿ ತಿಳಿದುಕೊಳ್ಳಲು ಸಾಧ್ಯವಾಗಿಲ್ಲ. ಹಾಗಾಗಿ ಆಕೆ ಕೂಡ ಹಿಂದು-ಮುಂದು ನೋಡದೇ ದೂರಿನ ಪ್ರತಿಗೆ ಸಹಿ ಹಾಕಿದ್ದಾಳೆ. ಇದನ್ನು ಪಡೆದ ಪೊಲೀಸರು ಕೂಡ ಯಾವುದೇ ರೀತಿಯ ವಿಚಾರಣೆ ನಡೆಸದೆ ಒತ್ತ ಡಕ್ಕೆ ಬಿದ್ದು ದೂರು ದಾಖಲಾದ ಕೆಲವೇ ಘಂಟೆಗಳಲ್ಲಿ ಕುಕ್ಕಾಜೆಯನ್ನು ಬಂಧಿಸಿದ್ದರು.
ಮಂಗಳೂರು ಪತ್ರಕರ್ತರಲ್ಲಿ ಗ್ರೂಫಿಸಂ!
ದಯಾಕುಕ್ಕಾಜೆ ಪ್ರಕರಣದ ನಂತರ ಮಂಗಳೂರು ಪತ್ರಕರ್ತರಲ್ಲಿ ಬೇರುಬಿಟ್ಟಿರುವ ಗ್ರೂಫಿಸಂ ಬೀದಿಗೆ ಬಂದಿದೆ. ವೃತ್ತಿ ವೈಷಮ್ಯವನ್ನು ತೀರಿಸಿ ಕೊಳ್ಳುವ ಸಲುವಾಗಿ ವೈಯಕ್ತಿಕ ಮಾನಹಾನಿಗೆ ಇಳಿಯುವ ಮೂಲಕ ಜಿಲ್ಲೆಯ ಮೂವರು ಪತ್ರಕರ್ತರು ಮುಖಮುಚ್ಚಿಕೊಳ್ಳುವಂತಾಗಿದೆ. ಈ ಮಧ್ಯೆ ಸೀನಿ ಯರ್-ಜೂನಿಯರ್ ಎಂಬ ಮಾನದಂಡದ ಆಧಾರದಲ್ಲೂ ಪತ್ರಕರ್ತರನ್ನು ತುಳಿಯುವ ಅಲಿಖಿತ ನಿಯಮವೊಂದು ಸದ್ದಿಲ್ಲದೇ ಎದ್ದು ನಿಂತಿದೆ. ಪ್ರಸ್ತುತ ದಯಾ ಕುಕ್ಕಾಜೆ ಪ್ರಕರಣದಲ್ಲೂ ಇಂಥದ್ದೇ ಕೆಲವೊಂದು ಆರೋಪಗಳು ಕೇಳಿಬಂದಿವೆ. ಜಿಲ್ಲೆಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘವೆಂಬುದು ಇದ್ದರೂ ಈ ಮಧ್ಯೆ ಒಂದೆರಡು ಸ್ವಘೋಷಿತ ಸಂಘಟನೆಗಳು ಕೂಡ ಕಾರ್ಯ ನಿರತವಾಗಿದೆ. ಇದರ ಜೊತೆಗೆ ದೃಶ್ಯ ಮಾಧ್ಯಮ ಮತ್ತು ಪತ್ರಿಕಾ ಮಾಧ್ಯಮ ಎಂಬ ಎರಡು ಸಂಘಟನೆಗಳು ಕೂಡ ಅಸ್ತಿತ್ವದಲ್ಲಿದೆ. ಇವಿಷ್ಟು ಪತ್ರಕರ್ತರ ಸಂಘ-ಸಂಸ್ಥೆಗಳ ವಿಚಾರವಾದರೆ ಇವರ ಮಧ್ಯೆ ಪತ್ರಕರ್ತರು ಕೂಡ ಗುಂಪು ಕಟ್ಟಿಕೊಂಡು ಬಹಿರಂಗವಾಗಿಯೇ ಕತ್ತಿಮಸೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಫೋಟೋ ಜರ್ನಲಿಸ್ಟ್‍ಗಳ ಮಧ್ಯೆ ಎರಡು ಗುಂಪುಗಳಿದ್ದು, ಪತ್ರಿಕಾಗೋಷ್ಠಿಗಳಲ್ಲೇ ಸಾಕಷ್ಟು ಬಾರಿ ಬಹಿರಂಗ ಕಾದಾಟಕ್ಕೆ ಇಳಿದ ಒಂದಷ್ಟು ಉದಾಹರಣೆಗಳಿವೆ. ಅಲ್ಲದೇ ಕೆಲವೊಮ್ಮೆ ಪತ್ರಕರ್ತರ ಸಂಘವೂ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂಬ ಆರೋಪಗಳಿವೆ. ಆದರೆ ಸಂಘದ ಅಧ್ಯಕ್ಷರ ಪ್ರಕಾರ ಜಿಲ್ಲೆಯಲ್ಲಿನ ಕೆಲ ಪತ್ರಕರ್ತರೇ ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದು, ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುತ್ತಿಲ್ಲ. ಹೀಗಿರುವಾಗ ನಮ್ಮ ಸಂಘದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಮಂಗಳೂರು ಪತ್ರಕರ್ತ ವಲಯದಲ್ಲಿ ಬಹಿರಂಗ ಶೀತಲ ಸಮರಕ್ಕೆ ಕೊನೆ ಇಲ್ಲದಂತಾಗಿದೆ. ಪ್ರಸ್ತುತ ಕುಕ್ಕಾಜೆ ಪ್ರಕರಣದಲ್ಲೂ ಇದೇ ರೀತಿಯ ವೃತ್ತಿ ವೈಷಮ್ಯ ಕೆಲಸಮಾಡಿದ್ದು, ಇದು ಹೀಗೇ ಮುಂದುವರೆದರೆ ಮುಂದೊಂದು ದಿನ ಪತ್ರಕರ್ತರ ಮಾನ ಬೀದಿಗೆ ಬರುವುದರಲ್ಲಿ ಅನುಮಾನವೇ ಇಲ್ಲ ಎಂಬ ಮಾತು ಕೇಳಿ ಬಂದಿದೆ

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)