ಗೇಟ್ ಫಲಿತಾಂಶ ಪ್ರಕಟ
ಮಂಗಳೂರಿನ ವಿದ್ಯಾರ್ಥಿಗೆ 23ನೇ ರ್ಯಾಂಕ್
ಮಂಗಳೂರು: ತಾಂತ್ರಿಕ ಕೋರ್ಸ್‌ಗಳ ಉನ್ನತ ಶಿಕ್ಷಣಕ್ಕಾಗಿ ಪ್ರವೇಶಾವಕಾಶ ಮತ್ತು
ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಪ್ರಸಕ್ತ ಸಾಲಿನ ಗೇಟ್ (ಗ್ರಾಜುಯೇಟ್ ಆಪ್ಟಿಟ್ಯೂಡ್
ಟೆಸ್ಟ್ ಇನ್ ಎಂಜಿನಿಯರಿಂಗ್) ಪರೀಕ್ಷೆಗಳ ಫಲಿತಾಂಶವನ್ನು ಶುಕ್ರವಾರ
ಪ್ರಕಟಿಸಲಾಗಿದೆ.
ಭಾರತದ ಅತಿದೊಡ್ಡ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾಗಿರುವ ಗೇಟ್ ಪರೀಕ್ಷೆ ಕಳೆದ
ಫೆಬ್ರವರಿಯಲ್ಲಿ ನಡೆದಿದ್ದು, ದೇಶಾದ್ಯಂತ 9.84 ಲಕ್ಷ ವಿದ್ಯಾರ್ಥಿಗಳು ಇದರಲ್ಲಿ
ಹಾಜರಾಗಿದ್ದರು. ಬಿಎಚ್‌ಇಎಲ್, ಎನ್‌ಟಿಪಿಸಿ, ಐಒಸಿಎಲ್, ಎಚ್‌ಪಿಸಿಎಲ್,
ಬಿಪಿಸಿಎಲ್‌ನಂಥ ಸಾರ್ವಜನಿಕ ಕ್ಷೇತ್ರದ ಬೃಹತ್ ಕಂಪೆನಿಗಳು ಗೇಟ್ ಪರೀಕ್ಷೆ
ಉತ್ತೀರ್ಣರಾದವರನ್ನು ನೇಮಕಾತಿಯಲ್ಲಿ ವಿಶೇಷವಾಗಿ ಪರಿಗಣಿಸುತ್ತಿವೆ. ಭಾರತೀಯ
ವಿಜ್ಞಾನ ಸಂಸ್ಥೆ ಮತ್ತು ಏಳು ಐಐಟಿಗಳು ಸಂಯುಕ್ತವಾಗಿ ಈ ಪರೀಕ್ಷೆಯನ್ನು
ನಡೆಸುತ್ತಿವೆ.
ಗೇಟ್ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವ ಗೇಟ್‌ಫೋರಮ್‌ನ ವಿದ್ಯಾರ್ಥಿಗಳು
ಈ ಬಾರಿಯೂ ಉತ್ತಮ ಸಾಧನೆ ತೋರಿದ್ದಾರೆ. ಬಿಸ್ವನ್ ಕುಮಾರ್ ಚಟರ್ಜಿ ಕಂಪ್ಯೂಟರ್
ಸೈನ್ಸ್ ವಿಭಾಗದಲ್ಲಿ ದೇಶಕ್ಕೆ ಮೊದಲ ರ್ಯಾಂಕ್ ಪಡೆದಿದರೆ, ಮಂಗಳೂರಿನ ಕಿಶೋರ್
ಸುಬ್ರಮಣಿಯನ್ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ಎಂಜಿನಿಯರಿಂಗ್‌ನಲ್ಲಿ 23ನೇ
ರ್ಯಾಂಕ್ ಪಡೆದಿದ್ದಾರೆ.
www.gateforum.com