ಇಂದಿನಿಂದ ಮಾ.1 ತನಕ ಕಲ್ಕಟ್ಟ ಇಲ್ಯಾಸ್ ಮಸ್ಜಿದ್ ವಠಾರದಲ್ಲಿ ಬಹೃತ್ ಧಾರ್ಮಿಕ ಪ್ರವಚನ
ಮಂಗಳೂರು (ವಿಶ್ವಕನ್ನಡಿಗ ನ್ಯೂಸ್): ತಖ್ವಿಯ್ಯತುಲ್ ಇಸ್ಲಾಂ ಯಂಗ್‍ಮೆನ್ಸ್ ಅಸೋಸಿಯೇಶನ್ ಮತ್ತು ಎಸೆಸ್ಸೆಫ್. ಕಲ್ಕಟ್ಟ, ಮಂಜನಾಡಿ ಇದರ ಜಂಟಿ ಅಶ್ರಯದಲ್ಲಿ ಫೆ.25ರಿಂದ ಮಾ.1ವರೆಗೆ ನಿರಂತರ 5ದಿನಗಳ ಧಾರ್ಮಿಕ ಕಾರ್ಯಕ್ರಮ ಮರ್ಹೂಂ ಮಂಜನಾಡಿ ಉಸ್ತಾದ್ ವೇದಿಕೆ ಕಲ್ಕಟ್ಟ ಇಲ್ಯಾಸ್ ಮಸ್ಜಿದ್ ವಠಾರದಲ್ಲಿ ನಡೆಯಲಿದೆ.ಫೆ.25 ಮಂಗಳವಾರ ಅಸ್ತಮಿಸಿದ ಬುಧವಾರ ರಾತ್ರಿ ಶೈಖುನಾ ಎನ್.ಎಂ ಅಬ್ದುರ್ರಹ್ಮಾನ್ ಮುಸ್ಲಿಯರ್ ಉದ್ಟಾಟಿಸಿ, ಅಬ್ದುಲ್ ಖಾದಿರ್ ಅಹ್ಸನಿ ಮಂಬೀದಿರವರು ‘ಕುಟುಂಬ ಜೀವನ” ಎಂಬ ವಿಷಯದ ಕುರಿತು ಮುಖ್ಯ ಭಾಷಣ ಮಾಡಲಿದ್ದಾರೆ.
ಫೆ.26 ಬುಧವಾರ ಅಸ್ತಮಿಸಿದ ಗುರುವಾರ ರಾತ್ರಿ “ದಾರಿ ತಪ್ಪುತ್ತಿರುವ ಮುಸ್ಲಿಂ ಸಮೂಹ” ಎಂಬ ವಿಷಯದ ಕುರಿತು ಹನಸ್ ಸಿದ್ದೀಖಿ ಅಲ್-ಕಾಮಿಲ್‍ರವರು ಭಾಷಣ ಮಾಡಲಿದ್ದಾರೆ.
ಫೆ.27 ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ “ಸ್ವರ್ಗ ಮತ್ತು ನರಕ” ಎಂಬ ವಿಷಯದ ಕುರಿತು ಆಸ್ಸಯ್ಯಿದ್ ಅಬ್ದುರ್ರಹ್ಮಾನ್ ಎ.ಪಿ.ಎ ತಂಙಳ್ ದಾರಿಮಿರವರು ಮಾತನಾಡಲ್ಲಿದ್ದಾರೆ,
ಫೆ.28 ಶುಕ್ರವಾರ ಅಸ್ತಮಿಸಿದ ಶನಿವಾರ ರಾತ್ರಿ ನೌಫಲ್ ಸಖಾಫಿ ಕಳಸ “ಇಸ್ಲಾಮಿನಲ್ಲಿ ಮಹಿಳೆ ಎಂಬ ವಿಷಯದ ಕುರಿತು ಮುಖ್ಯ ಭಾಷಣ ಮಾಡಲಿದ್ದಾರೆ.
ಮಾ.1 ಶನಿವಾರ ಅಸ್ತಮಿಸಿದ ಅದಿತ್ಯವಾರ ರಾತ್ರಿ ಸ್ವಲಾತ್ ವಾರ್ಷಿಕ ಹಾಗೂ ಇತ್ತೀಚೆಗೆ ನಿಧಾನರಾದ ತಾಜುಲ್ ಉಲಮಾ ಉಳ್ಳಾಲ ತಂಙಳ್(ನ.ರ)ರವರ ಅನುಸ್ಮರಣೆ ಕಾರ್ಯಕ್ರಮ ಅಸ್ಸಯ್ಯಿದ್ ಜಲಾಲುದ್ದೀನ್ ತಂಙಳ್ ಅಲ್-ಹಾದಿ ಮದನಿ ಉಜಿರೆ ತಂಙಳ್ ನೇತ್ವತ್ವದಲ್ಲಿ ಶೈಖುನ ಅಬ್ಬಾಸ್ ಮುಸ್ಲಿಯಾರ್ ಮಂಜನಾಡಿ ದುಅ ನೆರೆವೆರಿಸಲಿದ್ದಾರೆ. ಕೆ.ಪಿ ಹುಸೈನ್ ಸಹದಿ ಕೆಸಿರೋಡ್ ಮುಖ್ಯ ಭಾಷಣ ಮಾಡಲಿದ್ದಾರೆ ಹಾಗೂ ರಾಜಕೀಯ, ಸಾಮಾಜಿಕ ನೇತರಾhttp://www.vknews.in/2014/02/25/kalkatta-ilyas-masjid/ರು ಭಾಗವಹಿಸಲಿದ್ದಾರೆ.
ವರದಿ : ಆರಿಫ್ ಕಲ್ಕಟ್ಟ.