ಶನಿವಾರ, ಜನವರಿ 12, 2019

ARIF KALKATTA IN DUBAI


ARIF KALKATTA PASSPORT PHOTO


Arif Kalkatta sanmana





ದೇರಬೈ ಲ್ ಲ್ಲಿ ಶ್ರೀ ದೇವಿ ಲಲಿತೋಪಖ್ಯಾನ ಕಾಲಮಿತಿ ಯಕ್ಷಗಾನ
ಮಂಗಳೂರು: ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿಯವರಿಂದ ನಳಿನಿ ಆರ್.ಕೆ ಉಪ್ಪೂರು ಕುಟುಂಬಸ್ಥರ ವತಿಯಿಂದ 
 ಶ್ರೀ ದೇವಿ ಲಲಿತೋಪಖ್ಯಾನ ಕಾಲಮಿತಿ ಯಕ್ಷಗಾನ ದೇರಬೈಲು ಕೊಂಚಾಡಿ ಶ್ರೀ ದುರ್ಗಾ ಪರಮೇಶ್ವರಿ ನಾಗಕನ್ನಿಕಾ ದೇವಸ್ಥಾನದ‌ ವಠಾರದಲ್ಲಿ ನಡೆಯಿತು.
ಗಣಹೋಮ, ಮೇಳದ‌ ದೇವರಿಗೆ ವಿಶೇಷ ಪೂಜೆ ನೆರವೇರಿತು.

ಜೋತಿಷ್ಯ ಸುರೇಶ್ ಬಾರಿತಾಯ ದೀಪ ಬೆಳಗಿಸಿ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು.

ಮಂಗಳೂರು ನಗರ ಪಾಲಿಕೆಯ ದೇರಬೈಲ್ ವಾರ್ಡಿನ ಕಾರ್ಪೊರೇಟ್ ರಾಜೇಶ್ ಸನ್ಮಾನ ಸ್ವೀಕರಿಸಿ ಮಾತನಾಡಿ, 
ದೇವರ ಸೇವೆಯ ರೂಪದಲ್ಲಿ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಸುವ ಮೂಲಕ ಕಲಾಭಿಮಾನಿಗಳ ಮನತಣಿಸುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಿದರು.
ಎಲ್‌ ಐಸಿ ನಿವೃತ್ತ ಅಭಿವೃದ್ಧಿ ಅಧಿಕಾರಿ ಎನ್ ವಿದ್ಯಾಧರ್ ಶೆಟ್ಟಿ ಕೊಲ್ನಾಡಗುತ್ತು ಮಾತನಾಡಿ ಪ್ರಪಂಚಕ್ಕೆ ಬಂದ ಬಳಿಕ ನಮ್ಮ ಋಣಗಳಾದ  ಪಿತೃ ಋಣ ಪಿಂಡ ತರ್ಪಣದಿಂದ, ಗುರು ಋಣ ಗುರುದಕ್ಷಿಣೆಯಿಂದ ಹಾಗೂ ದೇವತಾ ಋಣ ಸಮಾಜ‌ಸೇವೆಯಿಂದ ಮುಕ್ತಿ ಪಡೆಯಲು ಸಾಧ್ಯ ಎಂದು ನುಡಿದರು.

ಈ ಸಂದರ್ಭ ಕಾರ್ಪೊರೇಟ್ ರಾಜೇಶ್, ಜೋತಿಷ್ಯ ಸುರೇಶ್ ಬರಿತಾಯ ಹಾಗೂ ಪತ್ರಕರ್ತ ಎಂ.ಅರೀಫ್ ಕಲ್ಕಟ್ಟ ರವರನ್ನು 
ಸನ್ಮಾನಿಸಲಾಯಿತು.
ಎಡಪದವು ವ್ಯವಸಾಯ ಸಂಘದ ಅಧ್ಯಕ್ಷ ನೀಲೈಯ ಎಂ. ಅಗರಿ, ಕೆ.ಎಂ.ಸಿ ಆಸ್ಪತ್ರೆಯ ಪ್ರೋ.ಎಂ.ಎಸ್ ಕೋಟ್ಯಾನ್, ಚುಟುಕು ಕವಿ ರಾದಕೃಷ್ಣ, ಮಂಗಳೂರು ನಗರ ಪಾಲಿಕೆಯ ದೇರಬೈಲ್ ವಾರ್ಡಿನ ಕಾರ್ಪೊರೇಟ್ ರಾಜೇಶ್, ಕೊಂಚಾಡಿ ಶ್ರೀ ದುರ್ಗಾ ಪರಮೇಶ್ವರಿ ನಾಗಕನ್ನಿಕಾ ದೇವಸ್ಥಾನದ ಟ್ರಸ್ಟಿ ಬಾಲಕೃಷ್ಣ ಕೊಟ್ಟಾರಿ, ಕೃಷ್ಣ ಜನ್ಮಾಷ್ಠಾಮಿ ಸಮಿತಿ ಅತ್ತಾವರ ಇದರ ಉಪಾಧ್ಯಕ್ಷ ರಮೇಶ್ ಸುವರ್ಣ, ಕರ್ನಾಟಕ ಬ್ಯಾಂಕ್ ನ ನಿವೃತ ಅಧಿಕಾರಿ ಜರ್ನಾಧನ ಹಂದೆ, ಯಶವಂತ್ ರಾಜ್  ಉಪ್ಪೂರು, ಜಗದೀಶ್ ಅಪ್ಪು ರಾವ್ ಹುಬ್ಬಳ್ಳಿ, ಸುಧಾಕರ್ ಉಪ್ಪೂರು ಉಪಸ್ಥಿತರಿದ್ದರು.

ಕಿಶೋರ್ ಶೆಟ್ಟಿ ಮಳೆಮಾರ್ ಸ್ವಾಗತಿಸಿದರು. ರಾಧಕೃಷ್ಣ ‌ವಂದಿಸಿದರು.