ರಂಜಾನ್ (ರಮದಾನ್) : ಉಪವಾಸ ಎಂಬ ಸಂಭ್ರಮ
ಉಪವಾಸವೂ
ಒಂದು ಸಂಭ್ರಮವಾಗುವುದು `ರಂಜಾನ್’ನಲ್ಲಿ. ಆದರೆ ಈ ಸಂಭ್ರಮದಲ್ಲೂ ಅನೇಕ ಸಂದೇಶ
ಗಳಿರುವುದು ಹಬ್ಬದ ಹೆಚ್ಚುಗಾರಿಕೆ.ರಂಜಾನ್ ಅಥವಾ ರಮದಾನ್ ಇಸ್ಲಾಂ ಕ್ಯಾಲೆಂಡರ್ನಲ್ಲಿ
ವರ್ಷದ 9ನೇ ತಿಂಗಳು ಆಚರಿಸಲ್ಪಡುತ್ತದೆ. ಉಪವಾಸ ವನ್ನು ಸೌಮ್/ ಸಿಯಾಮ್ ಎಂದೂ
ಕರೆಯುತ್ತಾರೆ. ಇಸ್ಲಾಂಮಿನ 5 ಕರ್ಮ ಗಳಲ್ಲಿ 4ನೇಯದು ಹಾಗೂ ರಮದಾನ್ನ ಸಮಯದಲ್ಲಿ ಉಪವಾಸ
ನಡೆಯುತ್ತದೆ. ಇಸ್ಲಾಂನ 4ನೇಯ ಕಡ್ಡಾಯ ಕರ್ಮ ರಮ ದಾನ್ ತಿಂಗಳ ಸಂಪೂರ್ಣ ವ್ರತಾ
ಚರಣೆಯಾಗಿದೆ. ಮಾನವ ಕಲ್ಯಾಣಕ್ಕಾಗಿ ಪ್ರವಾದಿ ಮಹಮ್ಮದ್ (ಸ)ರ ವರ ಮೇಲೆ ಇದೇ ತಿಂಗಳಲ್ಲಿ
ಪವಿತ್ರ ಕುರ್ಆನ್ ಅವ ತೀರ್ಣಗೊಂಡಿತು. ಇದರ ಗೌರವಾರ್ಹ ಪ್ರತೀ ವರ್ಷವೂ ಈ ಒಂದು ತಿಂಗಳು
ಕಡ್ಡಾಯಗೊಳಿಸಲಾಯಿತು.ಪ್ರಭಾತಕಾಲದಿಂದ ಹಿಡಿದು ಸೂಯರ್ಾಸ್ತದವರೆಗೆ ಇತರ ಸಮ ಯಗಳಲ್ಲಿ
ಧರ್ಮಸಮ್ಮತವಾದ ಅನ್ನ ಪಾನೀಯಗಳನ್ನು ಮತ್ತು ಕಾಮಾಸಕ್ತಿಯ ಚಟುವಟಿಕೆಗಳನ್ನು
ತ್ಯಜಿಸುವುದೇ ಇಸ್ಲಾಂಮಿನಲ್ಲಿ ಉಪವಾಸ/ ವೃತಾಚರಣೆ ಎನ್ನುತ್ತಾರೆ. ಸ್ವೇಚ್ಛೆ, ಸ್ವಾರ್ಥ
ಮತ್ತು ಅತ್ಯಾಗ್ರಹಗಳಂಥ ಎಲ್ಲ ವಿಧ ಮಾನವೀಯ ದೌರ್ಬಲ್ಯ ಗಳಿಂದ ಮನುಷ್ಯನನ್ನು ಮುಕ್ತ
ಗೊಳಿಸಿ ದೇಹ ಮತ್ತು ಆತ್ಮವನ್ನು ಪವಿತ್ರ ಗೊಳಿಸುವುದೇ ಒಂದು ತಿಂಗಳ ಪೂರ್ಣ ವ್ರತಾಚರಣೆಯ
ಮುಖ್ಯ ಉದ್ದೇಶವಾಗಿದೆ.ಎಲ್ಲಾ ಧರ್ಮಗಳಲ್ಲಿ ಉಪವಾಸ ವ್ರತಾಚರಣೆಗೆ ಮಹತ್ವವಿದೆ. ಕೆಲವು
ಧರ್ಮಗಳಲ್ಲಿ ಹಗಲು ರಾತ್ರಿಯೆನ್ನದೆ ಏನನ್ನೂ ತಿನ್ನದೆ, ಕುಡಿಯದೆ ಮಾಡುವ ಕಠಿಣವಾದ
ಉಪವಾಸ ವ್ರತದ ಆಚರಣೆಯ ಕ್ರಮವಿದ್ದರೆ ಕೆಲವು ವಿಧದ ಆಹಾರ, ಪಾನೀಯವನ್ನು ಮಾತ್ರ ಸೇವಿಸುವ
ಸರಳವಾದ ಉಪವಾಸ ವನ್ನು ಕೆಲವು ಧರ್ಮದವರು ಆಚರಿಸುವುದೂ ಇದೆ.ಇಸ್ಲಾಂಮಿನಲ್ಲಿ ಉಪವಾಸ
ವ್ರತಾಚ ರಣೆಗೆ ಮಹತ್ವದ ಸ್ಥಾನವಿದೆ. ಒಂದು ತಿಂಗಳು ಹಗಲು ಹೊತ್ತು ಆಹಾರವನ್ನು ಸಂಪೂರ್ಣ
ವಾಗಿ ತೊರೆದು ಆಚರಿಸುವ ವ್ರತವೆಂದು ಕಂಡರೂ ಈ ವ್ರತಾಚರಣೆಗೆ ಹಲವು ಆಧ್ಯಾತ್ಮಿಕ
ಆಯಾಮಗಳಿವೆ. ಉಪವಾಸದಿಂದ ದೇಹದ ಪಚನ ಕ್ರಮದಲ್ಲಿ ಅಂಗಾಂಗಗಳಿಗೆ ಸ್ವಲ್ಪ ಮಟ್ಟಿಗೆ ಆರಾಮ
ದೊರೆತು ಆರೋಗ್ಯಕ್ಕೆ ಅನುಕೂಲವಾಗುತ್ತದೆ ಎನ್ನುವುದು ಒಂದು ಅಭಿಪ್ರಾಯವಾದರೆ, ತಿಂದು
ಉಂಡು ಸುಖ ವನ್ನು ಪಡೆಯುವ ದೇಹಕ್ಕೆ ಈ ಹಸಿವಿನ ಅನುಭವವಾಗಬೇಕೆಂಬುದು ತಾತ್ವಿಕ ಉದ್ದೇಶ
ಇದರ ಹಿಂದೆ ಇದೆ. ಹಸಿವಿನಲ್ಲಿ ಸೃಷ್ಟಿಕರ್ತನ ಮೇಲಿನ ಭಕ್ತಿಯ ಏಕಾಗ್ರತೆ
ಗಟ್ಟಿಯಾಗಿರುತ್ತದೆ. ಬಾಯಿ ಕೆಟ್ಟ ಮಾತುಗಳನ್ನು ಆಡದಂತೆ, ಕಿವಿ ಕೆಟ್ಟದ್ದನ್ನು
ಕೇಳದಂತೆ ನಿಗ್ರಹಿಸುವುದು ಮುಂತಾದವು ಕೂಡಾ ಉಪವಾಸದ ಭಾಗವೇ ಆಗಿದೆ. ಅರಿಯದೆ,
ಅರಿವಿದ್ದೂ ಮಾಡಿದ ಪಾಪಗಳಿಗೆ ಪಶ್ಚಾತಾಪಪಟ್ಟುಕೊಂಡು ಉಪ ವಾಸ ದಿನಗಳ ನಂತರವೂ ಈ
ಪಾಪಕೃತ್ಯಗ ಳಿಂದ ದೂರವಿರುವ ದೃಢನಿಶ್ಚಯವನ್ನು ಮಾಡಿ ಕೊಳ್ಳುವುದು ಕೂಡಾ ಮುಖ್ಯವಾಗಿದೆ.
ಈ ತಿಂಗಳಲ್ಲಿ ಬಡವರಿಗೆ ಧಾನ, ಧರ್ಮ ಮಾಡು ವುದರಿಂದ ಅಂತರ್ಯದ ಕಲ್ಮಶಗಳನ್ನು ಸುಟ್ಟು
ಹೃದಯವನ್ನು ಪವಿತ್ರಗೊಳಿಸಲಾಗುತ್ತದೆ.ಒಂದು ತಿಂಗಳ ಹಸಿವೆಯ ಪಾಠ ದಿಂದ ಬಡತನ – ಹಸಿವು
ಏನೆಂಬುದು ಅರಿತ ಮುಸ್ಲಿಮನಿಗೆ ಈಗ ಬಡವನಿಗೆ – ಹಸಿದವನಿಗೆ ದಾನದ ಮೂಲಕ ಸಹಾಯ ಮಾಡುವುದು
ಕರ್ತವ್ಯ ಎನಿಸುತ್ತದೆ. ಇಸ್ಲಾಂನ 5 ಪ್ರಧಾನ ಕರ್ಮ ಗಳಲ್ಲಿ `ಝಕಾತ್’ ಇದಕ್ಕೆ ಪುಷ್ಠಿ
ನೀಡುತ್ತದೆ. ರಂಜಾನ್ ಉಪವಾಸ ಮುಸ್ಲಿಂಮರಿಗೆ ಕಡ್ಡಾಯವಾದರೂ ರೋಗಿ ಗಳಿಗೆ,
ಪ್ರವಾಸದಲ್ಲಿರುವವರಿಗೆ, ಮುಟ್ಟಾದವರಿಗೆ ವಿನಾಯಿತಿ ಇರುತ್ತದೆ. ಇದನ್ನು ನಂತರದ
ದಿನಗಳಲ್ಲಿ ಅನುಕೂಲವಾದಾಗಲೆಲ್ಲಾ ಉಪ ವಾಸ ಮಾಡಿ ತೀರಿಸಬೇಕಾಗುತ್ತದೆ. ರಂಜಾನ್
ತಿಂಗಳಲ್ಲಿ ಆಚರಿಸುವ ಉಪವಾಸಕ್ಕೆ ಉಳಿದ ತಿಂಗಳಲ್ಲಿ ಸಾವಿರ ತಿಂಗಳು ಆಚರಿಸುವ
ಉಪವಾಸಕ್ಕೆ ಇರುವ ಪುಣ್ಯಕ್ಕೆ ಸಮನಾಗಿರುತ್ತದೆ ಎಂಬ ನಂಬಿಕೆ ಇದೆ.
ಲೈಲತುಲ್ ಕದ್ರ್ : -
ರಂಜಾನ್ ತಿಂಗಳಿಗೆ ಇನ್ನೊಂದು ಮಹ ತ್ವವೂ ಇದೆ. ಮುಖ್ಯವಾಗಿ ಈ ತಿಂಗಳಲ್ಲಿ ಪ್ರವಾದಿಯವರಿಗೆ ಪವಿತ್ರ ಭೋದನೆಯಾ ಯಿತೆಂಬ ಕಾರಣಕ್ಕೆ ಪ್ರವಾದಿಯವರು ಮಕ್ಕಾದ ಹೊರವಲಯದಲ್ಲಿರುವ ಹೀರಾ ಎಂಬ ಪರ್ವತದ ಗುಹೆಯಲ್ಲಿ ಅಲ್ಲಾಹನನ್ನು ಧ್ಯಾನಿಸುತ್ತಾ ಕೂತಾಗ ಓದು ಬರಹ ತಿಳಿಯದ ಅವರಿಗೆ ದೇವರ ಪ್ರೇರಣೆಯಂತೆ ದೇವ ದೂತ ಜಿಜಿಲ್ ಪ್ರತ್ಯಕ್ಷನಾಗಿ ಕುರ್ಆನ್ ಗ್ರಂಥವನ್ನು ಬೋಧಿಸಿದರು. ಕುರ್ಆನ್ ಗ್ರಂಥವನ್ನು ಪ್ರಥಮವಾಗಿ ಪ್ರವಾದಿಯವರಿಗೆ ರಂಜಾನ್ ತಿಂಗಳಲ್ಲಿ ಬೋಧಿಸಲಾಯಿತೆಂದು ಹೇಳಲಾಗು ತ್ತದೆ. ಇದಕ್ಕಾಗಿ ಉಪವಾಸದ 30 ದಿನಗಳಲ್ಲೂ ರಾತ್ರಿ ಮಸೀದಿಗಳಲ್ಲಿ ಒಂದೆರೆಡು ಗಂಟೆಗಳ ಕಾಲದ `ತರಾ ವೀಹ್’ ಎಂಬ ವಿಶೇಷ ನಮಾ ಜ್ ಇರುತ್ತದೆ. ಈ ತಿಂಗಳ ಒಂದು ದಿನವನ್ನು ಲೈಲತುಲ್ ಕದ್ರ್ ದಿನವೆಂದು ಕರೆಯಲಾಗುತ್ತದೆ. ಪ್ರವಾದಿಯವರು ದೇವರ ಬೆಳಕನ್ನು ಕಂಡು ಮಾತುಕತೆ ನಡೆಸಿದ ದಿನ ವೆಂದು ನಂಬಲಾಗುತ್ತದೆ. ಈ ತಿಂಗಳ 27ನೇ ರಾತ್ರಿಯಂದು ಹಬ್ಬದ ದಿನದಂತೆ ಆಚರಿಸಲಾಗುತ್ತದೆ.

ಇಫ್ತಾರ್ ಮತ್ತು ಸಹರಿ :
ಮುಂಜಾನೆ ಸುಬಹ್ ನಮಾಝ್ ಬಾಂಗ್ ಕರೆಗಿಂತ ಮೊದಲು ಅತ್ತಾ ಯ(ಸಹರಿ) ಎಂಬ ಸರಳವಾದ ಊಟ ಮುಗಿಸಿ, ಸಂಜೆ ಸೂರ್ಯ ಮುಳುಗಿದ ನಂತರ ಇಫ್ತಾರ್ ಆಹಾರ ಸೇವನೆ ಮಾಡಬಹುದು.ಸಹರಿಯ ಊಟದಲ್ಲಿ ಅನ್ನ, ಸಾಂಬಾ ರು, ತರಕಾರಿ, ಮೊಸರು, ಎಣ್ಣೆಯಲ್ಲಿ ಕರಿದ ಮೀನು ಕೂಡಾ ಕರಾವಳಿಯ ಮನೆಯಲ್ಲಿ ಪ್ರಮುಖವಾಗಿರುತ್ತದೆ. ಸಂಜೆ ಸೂರ್ಯ ಮುಳುಗಿದಾಗ ಇಫ್ತಾರ್ ಸಂದರ್ಭದಲ್ಲಿನ ಆಹಾರ ತುಂಬಾ ಸರಳವಾಗಿರುತ್ತದೆ. ಬಾಂಗ್ ಕೇಳಿಸಿದ ಕೂಡಲೇ ಒಂದು ಕರ್ಜೂರ ಅಲ್ಲದಿದ್ದರೆ ಒಂದು ಚಿಟಿಕಿ ಉಪ್ಪು ಬಾಯಿಗೆ ಹಾಕಿ ಒಂದು ಲೋಟ ನೀರು ಕುಡಿಯುವ ಕ್ರಮ ದಿಂದ ಶುರುವಾಗುತ್ತದೆ. ನಂತರ ವಿವಿಧ ರೀತಿಯ ಶರಬತ್ತುಗಳು ಹಾಗೂ ವಿವಿಧ ರೀತಿಯ ಕರಿದ ತಿಂಡಿ ಗಳು ಪೂರೈಸುವುದು ಸಾಮಾನ್ಯ..ಆದರೆ ಈ ಬಾರಿ ಉಪವಾಸ ಬಹ ಳಷ್ಟು ದುಬಾರಿಯಾಗಿದೆ ಎಂದರೆ ತಪ್ಪಾಗ ಲಾರದು. ಏಕೆಂದರೆ ಹಣ್ಣುಗಳು, ಕರ್ಜೂರ, ಮೀನು ಮಾಂಸಗಳು. ತರಕಾರಿಗಳು ಅಷ್ಟೇ ದುಬಾರಿಯಾಗಿದೆ…
ಸಹೋದರ್ಯ ಭಾವ ತುಂಬಿ ಸುವ ಈದ್ನ ದಿನ ಎಲ್ಲರೂ ದಾನ ಕರ್ಮ ಗಳಿಂದ ಸುಂದರವಾಗಿಸಲು ಸೃಷ್ಟಿಕರ್ತ ನಮ್ಮನ್ನು ಕರುಣಿಸಲಿ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ಮಹಮ್ಮದ್ ಆರೀಫ್ ಕಲ್ಕಟ್ಟ,