ಸೋಮವಾರ, ಡಿಸೆಂಬರ್ 24, 2012
ಶನಿವಾರ, ಡಿಸೆಂಬರ್ 15, 2012
ಸೋಮವಾರ, ಜುಲೈ 30, 2012
ರಂಜಾನ್ (ರಮದಾನ್) : ಉಪವಾಸ ಎಂಬ ಸಂಭ್ರಮ
ಉಪವಾಸವೂ
ಒಂದು ಸಂಭ್ರಮವಾಗುವುದು `ರಂಜಾನ್’ನಲ್ಲಿ. ಆದರೆ ಈ ಸಂಭ್ರಮದಲ್ಲೂ ಅನೇಕ ಸಂದೇಶ
ಗಳಿರುವುದು ಹಬ್ಬದ ಹೆಚ್ಚುಗಾರಿಕೆ.ರಂಜಾನ್ ಅಥವಾ ರಮದಾನ್ ಇಸ್ಲಾಂ ಕ್ಯಾಲೆಂಡರ್ನಲ್ಲಿ
ವರ್ಷದ 9ನೇ ತಿಂಗಳು ಆಚರಿಸಲ್ಪಡುತ್ತದೆ. ಉಪವಾಸ ವನ್ನು ಸೌಮ್/ ಸಿಯಾಮ್ ಎಂದೂ
ಕರೆಯುತ್ತಾರೆ. ಇಸ್ಲಾಂಮಿನ 5 ಕರ್ಮ ಗಳಲ್ಲಿ 4ನೇಯದು ಹಾಗೂ ರಮದಾನ್ನ ಸಮಯದಲ್ಲಿ ಉಪವಾಸ
ನಡೆಯುತ್ತದೆ. ಇಸ್ಲಾಂನ 4ನೇಯ ಕಡ್ಡಾಯ ಕರ್ಮ ರಮ ದಾನ್ ತಿಂಗಳ ಸಂಪೂರ್ಣ ವ್ರತಾ
ಚರಣೆಯಾಗಿದೆ. ಮಾನವ ಕಲ್ಯಾಣಕ್ಕಾಗಿ ಪ್ರವಾದಿ ಮಹಮ್ಮದ್ (ಸ)ರ ವರ ಮೇಲೆ ಇದೇ ತಿಂಗಳಲ್ಲಿ
ಪವಿತ್ರ ಕುರ್ಆನ್ ಅವ ತೀರ್ಣಗೊಂಡಿತು. ಇದರ ಗೌರವಾರ್ಹ ಪ್ರತೀ ವರ್ಷವೂ ಈ ಒಂದು ತಿಂಗಳು
ಕಡ್ಡಾಯಗೊಳಿಸಲಾಯಿತು.ಪ್ರಭಾತಕಾಲದಿಂದ ಹಿಡಿದು ಸೂಯರ್ಾಸ್ತದವರೆಗೆ ಇತರ ಸಮ ಯಗಳಲ್ಲಿ
ಧರ್ಮಸಮ್ಮತವಾದ ಅನ್ನ ಪಾನೀಯಗಳನ್ನು ಮತ್ತು ಕಾಮಾಸಕ್ತಿಯ ಚಟುವಟಿಕೆಗಳನ್ನು
ತ್ಯಜಿಸುವುದೇ ಇಸ್ಲಾಂಮಿನಲ್ಲಿ ಉಪವಾಸ/ ವೃತಾಚರಣೆ ಎನ್ನುತ್ತಾರೆ. ಸ್ವೇಚ್ಛೆ, ಸ್ವಾರ್ಥ
ಮತ್ತು ಅತ್ಯಾಗ್ರಹಗಳಂಥ ಎಲ್ಲ ವಿಧ ಮಾನವೀಯ ದೌರ್ಬಲ್ಯ ಗಳಿಂದ ಮನುಷ್ಯನನ್ನು ಮುಕ್ತ
ಗೊಳಿಸಿ ದೇಹ ಮತ್ತು ಆತ್ಮವನ್ನು ಪವಿತ್ರ ಗೊಳಿಸುವುದೇ ಒಂದು ತಿಂಗಳ ಪೂರ್ಣ ವ್ರತಾಚರಣೆಯ
ಮುಖ್ಯ ಉದ್ದೇಶವಾಗಿದೆ.ಎಲ್ಲಾ ಧರ್ಮಗಳಲ್ಲಿ ಉಪವಾಸ ವ್ರತಾಚರಣೆಗೆ ಮಹತ್ವವಿದೆ. ಕೆಲವು
ಧರ್ಮಗಳಲ್ಲಿ ಹಗಲು ರಾತ್ರಿಯೆನ್ನದೆ ಏನನ್ನೂ ತಿನ್ನದೆ, ಕುಡಿಯದೆ ಮಾಡುವ ಕಠಿಣವಾದ
ಉಪವಾಸ ವ್ರತದ ಆಚರಣೆಯ ಕ್ರಮವಿದ್ದರೆ ಕೆಲವು ವಿಧದ ಆಹಾರ, ಪಾನೀಯವನ್ನು ಮಾತ್ರ ಸೇವಿಸುವ
ಸರಳವಾದ ಉಪವಾಸ ವನ್ನು ಕೆಲವು ಧರ್ಮದವರು ಆಚರಿಸುವುದೂ ಇದೆ.ಇಸ್ಲಾಂಮಿನಲ್ಲಿ ಉಪವಾಸ
ವ್ರತಾಚ ರಣೆಗೆ ಮಹತ್ವದ ಸ್ಥಾನವಿದೆ. ಒಂದು ತಿಂಗಳು ಹಗಲು ಹೊತ್ತು ಆಹಾರವನ್ನು ಸಂಪೂರ್ಣ
ವಾಗಿ ತೊರೆದು ಆಚರಿಸುವ ವ್ರತವೆಂದು ಕಂಡರೂ ಈ ವ್ರತಾಚರಣೆಗೆ ಹಲವು ಆಧ್ಯಾತ್ಮಿಕ
ಆಯಾಮಗಳಿವೆ. ಉಪವಾಸದಿಂದ ದೇಹದ ಪಚನ ಕ್ರಮದಲ್ಲಿ ಅಂಗಾಂಗಗಳಿಗೆ ಸ್ವಲ್ಪ ಮಟ್ಟಿಗೆ ಆರಾಮ
ದೊರೆತು ಆರೋಗ್ಯಕ್ಕೆ ಅನುಕೂಲವಾಗುತ್ತದೆ ಎನ್ನುವುದು ಒಂದು ಅಭಿಪ್ರಾಯವಾದರೆ, ತಿಂದು
ಉಂಡು ಸುಖ ವನ್ನು ಪಡೆಯುವ ದೇಹಕ್ಕೆ ಈ ಹಸಿವಿನ ಅನುಭವವಾಗಬೇಕೆಂಬುದು ತಾತ್ವಿಕ ಉದ್ದೇಶ
ಇದರ ಹಿಂದೆ ಇದೆ. ಹಸಿವಿನಲ್ಲಿ ಸೃಷ್ಟಿಕರ್ತನ ಮೇಲಿನ ಭಕ್ತಿಯ ಏಕಾಗ್ರತೆ
ಗಟ್ಟಿಯಾಗಿರುತ್ತದೆ. ಬಾಯಿ ಕೆಟ್ಟ ಮಾತುಗಳನ್ನು ಆಡದಂತೆ, ಕಿವಿ ಕೆಟ್ಟದ್ದನ್ನು
ಕೇಳದಂತೆ ನಿಗ್ರಹಿಸುವುದು ಮುಂತಾದವು ಕೂಡಾ ಉಪವಾಸದ ಭಾಗವೇ ಆಗಿದೆ. ಅರಿಯದೆ,
ಅರಿವಿದ್ದೂ ಮಾಡಿದ ಪಾಪಗಳಿಗೆ ಪಶ್ಚಾತಾಪಪಟ್ಟುಕೊಂಡು ಉಪ ವಾಸ ದಿನಗಳ ನಂತರವೂ ಈ
ಪಾಪಕೃತ್ಯಗ ಳಿಂದ ದೂರವಿರುವ ದೃಢನಿಶ್ಚಯವನ್ನು ಮಾಡಿ ಕೊಳ್ಳುವುದು ಕೂಡಾ ಮುಖ್ಯವಾಗಿದೆ.
ಈ ತಿಂಗಳಲ್ಲಿ ಬಡವರಿಗೆ ಧಾನ, ಧರ್ಮ ಮಾಡು ವುದರಿಂದ ಅಂತರ್ಯದ ಕಲ್ಮಶಗಳನ್ನು ಸುಟ್ಟು
ಹೃದಯವನ್ನು ಪವಿತ್ರಗೊಳಿಸಲಾಗುತ್ತದೆ.ಒಂದು ತಿಂಗಳ ಹಸಿವೆಯ ಪಾಠ ದಿಂದ ಬಡತನ – ಹಸಿವು
ಏನೆಂಬುದು ಅರಿತ ಮುಸ್ಲಿಮನಿಗೆ ಈಗ ಬಡವನಿಗೆ – ಹಸಿದವನಿಗೆ ದಾನದ ಮೂಲಕ ಸಹಾಯ ಮಾಡುವುದು
ಕರ್ತವ್ಯ ಎನಿಸುತ್ತದೆ. ಇಸ್ಲಾಂನ 5 ಪ್ರಧಾನ ಕರ್ಮ ಗಳಲ್ಲಿ `ಝಕಾತ್’ ಇದಕ್ಕೆ ಪುಷ್ಠಿ
ನೀಡುತ್ತದೆ. ರಂಜಾನ್ ಉಪವಾಸ ಮುಸ್ಲಿಂಮರಿಗೆ ಕಡ್ಡಾಯವಾದರೂ ರೋಗಿ ಗಳಿಗೆ,
ಪ್ರವಾಸದಲ್ಲಿರುವವರಿಗೆ, ಮುಟ್ಟಾದವರಿಗೆ ವಿನಾಯಿತಿ ಇರುತ್ತದೆ. ಇದನ್ನು ನಂತರದ
ದಿನಗಳಲ್ಲಿ ಅನುಕೂಲವಾದಾಗಲೆಲ್ಲಾ ಉಪ ವಾಸ ಮಾಡಿ ತೀರಿಸಬೇಕಾಗುತ್ತದೆ. ರಂಜಾನ್
ತಿಂಗಳಲ್ಲಿ ಆಚರಿಸುವ ಉಪವಾಸಕ್ಕೆ ಉಳಿದ ತಿಂಗಳಲ್ಲಿ ಸಾವಿರ ತಿಂಗಳು ಆಚರಿಸುವ
ಉಪವಾಸಕ್ಕೆ ಇರುವ ಪುಣ್ಯಕ್ಕೆ ಸಮನಾಗಿರುತ್ತದೆ ಎಂಬ ನಂಬಿಕೆ ಇದೆ.
ಲೈಲತುಲ್ ಕದ್ರ್ : -
ರಂಜಾನ್ ತಿಂಗಳಿಗೆ ಇನ್ನೊಂದು ಮಹ ತ್ವವೂ ಇದೆ. ಮುಖ್ಯವಾಗಿ ಈ ತಿಂಗಳಲ್ಲಿ ಪ್ರವಾದಿಯವರಿಗೆ ಪವಿತ್ರ ಭೋದನೆಯಾ ಯಿತೆಂಬ ಕಾರಣಕ್ಕೆ ಪ್ರವಾದಿಯವರು ಮಕ್ಕಾದ ಹೊರವಲಯದಲ್ಲಿರುವ ಹೀರಾ ಎಂಬ ಪರ್ವತದ ಗುಹೆಯಲ್ಲಿ ಅಲ್ಲಾಹನನ್ನು ಧ್ಯಾನಿಸುತ್ತಾ ಕೂತಾಗ ಓದು ಬರಹ ತಿಳಿಯದ ಅವರಿಗೆ ದೇವರ ಪ್ರೇರಣೆಯಂತೆ ದೇವ ದೂತ ಜಿಜಿಲ್ ಪ್ರತ್ಯಕ್ಷನಾಗಿ ಕುರ್ಆನ್ ಗ್ರಂಥವನ್ನು ಬೋಧಿಸಿದರು. ಕುರ್ಆನ್ ಗ್ರಂಥವನ್ನು ಪ್ರಥಮವಾಗಿ ಪ್ರವಾದಿಯವರಿಗೆ ರಂಜಾನ್ ತಿಂಗಳಲ್ಲಿ ಬೋಧಿಸಲಾಯಿತೆಂದು ಹೇಳಲಾಗು ತ್ತದೆ. ಇದಕ್ಕಾಗಿ ಉಪವಾಸದ 30 ದಿನಗಳಲ್ಲೂ ರಾತ್ರಿ ಮಸೀದಿಗಳಲ್ಲಿ ಒಂದೆರೆಡು ಗಂಟೆಗಳ ಕಾಲದ `ತರಾ ವೀಹ್’ ಎಂಬ ವಿಶೇಷ ನಮಾ ಜ್ ಇರುತ್ತದೆ. ಈ ತಿಂಗಳ ಒಂದು ದಿನವನ್ನು ಲೈಲತುಲ್ ಕದ್ರ್ ದಿನವೆಂದು ಕರೆಯಲಾಗುತ್ತದೆ. ಪ್ರವಾದಿಯವರು ದೇವರ ಬೆಳಕನ್ನು ಕಂಡು ಮಾತುಕತೆ ನಡೆಸಿದ ದಿನ ವೆಂದು ನಂಬಲಾಗುತ್ತದೆ. ಈ ತಿಂಗಳ 27ನೇ ರಾತ್ರಿಯಂದು ಹಬ್ಬದ ದಿನದಂತೆ ಆಚರಿಸಲಾಗುತ್ತದೆ.
ರಂಜಾನ್ ತಿಂಗಳಿಗೆ ಇನ್ನೊಂದು ಮಹ ತ್ವವೂ ಇದೆ. ಮುಖ್ಯವಾಗಿ ಈ ತಿಂಗಳಲ್ಲಿ ಪ್ರವಾದಿಯವರಿಗೆ ಪವಿತ್ರ ಭೋದನೆಯಾ ಯಿತೆಂಬ ಕಾರಣಕ್ಕೆ ಪ್ರವಾದಿಯವರು ಮಕ್ಕಾದ ಹೊರವಲಯದಲ್ಲಿರುವ ಹೀರಾ ಎಂಬ ಪರ್ವತದ ಗುಹೆಯಲ್ಲಿ ಅಲ್ಲಾಹನನ್ನು ಧ್ಯಾನಿಸುತ್ತಾ ಕೂತಾಗ ಓದು ಬರಹ ತಿಳಿಯದ ಅವರಿಗೆ ದೇವರ ಪ್ರೇರಣೆಯಂತೆ ದೇವ ದೂತ ಜಿಜಿಲ್ ಪ್ರತ್ಯಕ್ಷನಾಗಿ ಕುರ್ಆನ್ ಗ್ರಂಥವನ್ನು ಬೋಧಿಸಿದರು. ಕುರ್ಆನ್ ಗ್ರಂಥವನ್ನು ಪ್ರಥಮವಾಗಿ ಪ್ರವಾದಿಯವರಿಗೆ ರಂಜಾನ್ ತಿಂಗಳಲ್ಲಿ ಬೋಧಿಸಲಾಯಿತೆಂದು ಹೇಳಲಾಗು ತ್ತದೆ. ಇದಕ್ಕಾಗಿ ಉಪವಾಸದ 30 ದಿನಗಳಲ್ಲೂ ರಾತ್ರಿ ಮಸೀದಿಗಳಲ್ಲಿ ಒಂದೆರೆಡು ಗಂಟೆಗಳ ಕಾಲದ `ತರಾ ವೀಹ್’ ಎಂಬ ವಿಶೇಷ ನಮಾ ಜ್ ಇರುತ್ತದೆ. ಈ ತಿಂಗಳ ಒಂದು ದಿನವನ್ನು ಲೈಲತುಲ್ ಕದ್ರ್ ದಿನವೆಂದು ಕರೆಯಲಾಗುತ್ತದೆ. ಪ್ರವಾದಿಯವರು ದೇವರ ಬೆಳಕನ್ನು ಕಂಡು ಮಾತುಕತೆ ನಡೆಸಿದ ದಿನ ವೆಂದು ನಂಬಲಾಗುತ್ತದೆ. ಈ ತಿಂಗಳ 27ನೇ ರಾತ್ರಿಯಂದು ಹಬ್ಬದ ದಿನದಂತೆ ಆಚರಿಸಲಾಗುತ್ತದೆ.
ಇಫ್ತಾರ್ ಮತ್ತು ಸಹರಿ :
ಮುಂಜಾನೆ ಸುಬಹ್ ನಮಾಝ್ ಬಾಂಗ್ ಕರೆಗಿಂತ ಮೊದಲು ಅತ್ತಾ ಯ(ಸಹರಿ) ಎಂಬ ಸರಳವಾದ ಊಟ ಮುಗಿಸಿ, ಸಂಜೆ ಸೂರ್ಯ ಮುಳುಗಿದ ನಂತರ ಇಫ್ತಾರ್ ಆಹಾರ ಸೇವನೆ ಮಾಡಬಹುದು.ಸಹರಿಯ ಊಟದಲ್ಲಿ ಅನ್ನ, ಸಾಂಬಾ ರು, ತರಕಾರಿ, ಮೊಸರು, ಎಣ್ಣೆಯಲ್ಲಿ ಕರಿದ ಮೀನು ಕೂಡಾ ಕರಾವಳಿಯ ಮನೆಯಲ್ಲಿ ಪ್ರಮುಖವಾಗಿರುತ್ತದೆ. ಸಂಜೆ ಸೂರ್ಯ ಮುಳುಗಿದಾಗ ಇಫ್ತಾರ್ ಸಂದರ್ಭದಲ್ಲಿನ ಆಹಾರ ತುಂಬಾ ಸರಳವಾಗಿರುತ್ತದೆ. ಬಾಂಗ್ ಕೇಳಿಸಿದ ಕೂಡಲೇ ಒಂದು ಕರ್ಜೂರ ಅಲ್ಲದಿದ್ದರೆ ಒಂದು ಚಿಟಿಕಿ ಉಪ್ಪು ಬಾಯಿಗೆ ಹಾಕಿ ಒಂದು ಲೋಟ ನೀರು ಕುಡಿಯುವ ಕ್ರಮ ದಿಂದ ಶುರುವಾಗುತ್ತದೆ. ನಂತರ ವಿವಿಧ ರೀತಿಯ ಶರಬತ್ತುಗಳು ಹಾಗೂ ವಿವಿಧ ರೀತಿಯ ಕರಿದ ತಿಂಡಿ ಗಳು ಪೂರೈಸುವುದು ಸಾಮಾನ್ಯ..ಆದರೆ ಈ ಬಾರಿ ಉಪವಾಸ ಬಹ ಳಷ್ಟು ದುಬಾರಿಯಾಗಿದೆ ಎಂದರೆ ತಪ್ಪಾಗ ಲಾರದು. ಏಕೆಂದರೆ ಹಣ್ಣುಗಳು, ಕರ್ಜೂರ, ಮೀನು ಮಾಂಸಗಳು. ತರಕಾರಿಗಳು ಅಷ್ಟೇ ದುಬಾರಿಯಾಗಿದೆ…
ಸಹೋದರ್ಯ ಭಾವ ತುಂಬಿ ಸುವ ಈದ್ನ ದಿನ ಎಲ್ಲರೂ ದಾನ ಕರ್ಮ ಗಳಿಂದ ಸುಂದರವಾಗಿಸಲು ಸೃಷ್ಟಿಕರ್ತ ನಮ್ಮನ್ನು ಕರುಣಿಸಲಿ
ಮುಂಜಾನೆ ಸುಬಹ್ ನಮಾಝ್ ಬಾಂಗ್ ಕರೆಗಿಂತ ಮೊದಲು ಅತ್ತಾ ಯ(ಸಹರಿ) ಎಂಬ ಸರಳವಾದ ಊಟ ಮುಗಿಸಿ, ಸಂಜೆ ಸೂರ್ಯ ಮುಳುಗಿದ ನಂತರ ಇಫ್ತಾರ್ ಆಹಾರ ಸೇವನೆ ಮಾಡಬಹುದು.ಸಹರಿಯ ಊಟದಲ್ಲಿ ಅನ್ನ, ಸಾಂಬಾ ರು, ತರಕಾರಿ, ಮೊಸರು, ಎಣ್ಣೆಯಲ್ಲಿ ಕರಿದ ಮೀನು ಕೂಡಾ ಕರಾವಳಿಯ ಮನೆಯಲ್ಲಿ ಪ್ರಮುಖವಾಗಿರುತ್ತದೆ. ಸಂಜೆ ಸೂರ್ಯ ಮುಳುಗಿದಾಗ ಇಫ್ತಾರ್ ಸಂದರ್ಭದಲ್ಲಿನ ಆಹಾರ ತುಂಬಾ ಸರಳವಾಗಿರುತ್ತದೆ. ಬಾಂಗ್ ಕೇಳಿಸಿದ ಕೂಡಲೇ ಒಂದು ಕರ್ಜೂರ ಅಲ್ಲದಿದ್ದರೆ ಒಂದು ಚಿಟಿಕಿ ಉಪ್ಪು ಬಾಯಿಗೆ ಹಾಕಿ ಒಂದು ಲೋಟ ನೀರು ಕುಡಿಯುವ ಕ್ರಮ ದಿಂದ ಶುರುವಾಗುತ್ತದೆ. ನಂತರ ವಿವಿಧ ರೀತಿಯ ಶರಬತ್ತುಗಳು ಹಾಗೂ ವಿವಿಧ ರೀತಿಯ ಕರಿದ ತಿಂಡಿ ಗಳು ಪೂರೈಸುವುದು ಸಾಮಾನ್ಯ..ಆದರೆ ಈ ಬಾರಿ ಉಪವಾಸ ಬಹ ಳಷ್ಟು ದುಬಾರಿಯಾಗಿದೆ ಎಂದರೆ ತಪ್ಪಾಗ ಲಾರದು. ಏಕೆಂದರೆ ಹಣ್ಣುಗಳು, ಕರ್ಜೂರ, ಮೀನು ಮಾಂಸಗಳು. ತರಕಾರಿಗಳು ಅಷ್ಟೇ ದುಬಾರಿಯಾಗಿದೆ…
ಸಹೋದರ್ಯ ಭಾವ ತುಂಬಿ ಸುವ ಈದ್ನ ದಿನ ಎಲ್ಲರೂ ದಾನ ಕರ್ಮ ಗಳಿಂದ ಸುಂದರವಾಗಿಸಲು ಸೃಷ್ಟಿಕರ್ತ ನಮ್ಮನ್ನು ಕರುಣಿಸಲಿ
ಗುರುವಾರ, ಜೂನ್ 21, 2012
ವೈದ್ಯಕೀಯ ಕ್ಷೇತ್ರದ ವಾಣಿಜ್ಯೀಕರಣವೂ...ಆಮಿರ್‌ಖಾನ್ ಹೇಳಿದ ಕಹಿ ಸತ್ಯವೂ...
‘ಸತ್ಯಮೇವ
ಜಯತೆ’ ರಿಯಾಲಿಟಿ ಶೋದಲ್ಲಿ ಆಮಿರ್ ಖಾನ್ ವೈದ್ಯಕೀಯ ಲೋಕದ ಹುಳುಕುಗಳ ಕುರಿತಂತೆ ಬೆಳಕು
ಚೆಲ್ಲಿದಾಗ ವೈದ್ಯ ಸಮೂಹ ಗರಂ ಆಗಿತ್ತು.ಅಷ್ಟಕ್ಕೂ ಅಮೀರ್ ಖಾನ್ ಹೇಳಿದ್ದರಲ್ಲಿ
ತಪ್ಪೇನಿದೆ? ಇಂದು ವೈದ್ಯ ಕೀಯ ಕ್ಷೇತ್ರ ಯಾವ ಪರಿಯಲ್ಲಿ ವಾಣಿಜ್ಯೀಕರಣ ಗೊಂಡಿದೆ
ಎಂಬುದನ್ನು ಓರ್ವ ಅರೆವೈದ್ಯಕೀಯ ವೃತ್ತಿಪರನಾಗಿ (Practicing Medical Laboratory Technologist)
ನನ್ನ ಅರಿವಿನ ವ್ಯಾಪ್ತಿಯಲ್ಲಿರುವ ಕೆಲವು ವಿಚಾರಗಳನ್ನು ಇಲ್ಲಿ
ಹಂಚಿಕೊಳ್ಳುತ್ತೇನೆ.ಸುಮಾರು ನಾಲ್ಕು ವರ್ಷಗಳ ಹಿಂದೆ ನನ್ನ ಸಂಬಂಧಿಕರೋರ್ವರು ಮಲೇರಿಯಾ
ರೋಗದ ಚಿಕಿತ್ಸೆಗಾಗಿ ಮಂಗಳೂರು ಹೊರವಲಯದ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದರು. ನಾಲ್ಕು
ದಿನಗಳ ಬಳಿಕ ಚೇತರಿಸಿಕೊಂಡ ಅವರು ಇನ್ನೇನು ಡಿಸ್ಚಾರ್ಜ್ ಆಗಬೇಕು ಎನ್ನುವಷ್ಟರಲ್ಲಿ
ಅವರಿಗೆ ಹೊಟ್ಟೆನೋವು ಕಾಣಿಸಿಕೊಂಡಿತು. ಅವರನ್ನು ಪರೀಕ್ಷಿಸಿದ ತಜ್ಞ ವೈದ್ಯನೊಬ್ಬ
ಅಲ್ಟ್ರಾಸೋನೋಗ್ರಫಿ (ಸ್ಕ್ಯಾನಿಂಗ್) ಮಾಡಿಸಿ ಎಂದು ಚೀಟಿ ಬರೆದು ಕೊಟ್ಟ.ಅದಾಗಿ ಕೆಲವು
ನಿಮಿಷಗಳಲ್ಲಿ ನಾನು ಆ ರೋಗಿಯನ್ನು ಸಂದರ್ಶಿಸಲು ಆಸ್ಪತ್ರೆಗೆ ತೆರಳಿದ್ದೆ. ಅವರು ತನ್ನ
ಅನಾರೋಗ್ಯದ ವಿಚಾರಗಳನ್ನು ನನಗೆ ತಿಳಿಸಿದ ಬಳಿಕ ವೈದ್ಯರು ಸ್ಕ್ಯಾನಿಂಗ್ ಮಾಡಿಸಲು
ಬರೆದುಕೊಟ್ಟ ಚೀಟಿಯನ್ನು ತೋರಿಸಿದರು.
ನಾನು
ಅವರ ಹೊಟ್ಟೆ ನೋವಿನ ಲಕ್ಷಣಗಳನ್ನು ವಿಚಾರಿಸಿ ಬರೇ 50 ಪೈಸೆ ಬೆಲೆಯ ಒಂದು
್ಕಚ್ಞಠಿಚ್ಚ150ಞಜ ಎಂಬ ಗ್ಯಾಸ್ಟ್ರಿಕ್‌ನ ಒಂದು ಮಾತ್ರೆ ತಂದು ಕೊಟ್ಟು ಹೇಳಿದೆ;
ಮುಕ್ಕಾಲು ಗಂಟೆ ಕಾದು ನೋಡಿ ಕಡಿಮೆ ಯಾಗದಿದ್ರೆ ಆ ಬಳಿಕ ಸ್ಕ್ಯಾನಿಂಗ್ ಮಾಡಿಸಿ ಮಾತ್ರೆ
ಸೇವಿಸಿ ಅರ್ಧಗಂಟೆಯಲ್ಲಿ ಹೊಟ್ಟೆ ನೋವು ಮಾಯವಾಗಿಬಿಟ್ಟಿತ್ತು. ಇದು ಒಂದು
ಉದಾಹರಣೆಯಷ್ಟೆ. ಕೇವಲ 50ಪೈಸೆ ಬೆಲೆಯ ಒಂದು ಗ್ಯಾಸ್ಟ್ರಿಕ್‌ನ ಮಾತ್ರೆಯಲ್ಲಿ ಮುಗಿಸ
ಬಹುದಾಗಿದ್ದ ಒಂದು ಕ್ಷುಲ್ಲಕ ಸಮಸ್ಯೆಗೆ 400 ರೂಪಾಯಿಯ ಸ್ಕ್ಯಾನಿಂಗ್ ಮಾಡಿಸಿ ಎಂದರೆ ಈ
ವೈದ್ಯನ ಹಿಕಮತ್ತೇನಿರಬಹುದು? ವೈದ್ಯಕೀಯದಲ್ಲಿ ಸ್ನಾತಕೋತ್ತರ ಎಂ.ಡಿ. ಪದವಿಗಳಿಸಿರುವ
ವೈದ್ಯನಿಗೆ ಇಂತಹ ಬೇಸಿಕ್ ವಿಚಾರ ತಿಳಿದಿರಲಿಲ್ಲವೆಂದೇನಲ್ಲ. 400 ರೂಪಾಯಿಯ ಒಂದು
ಸ್ಕ್ಯಾನಿಂಗ್ ಮಾಡಿಸಿ ದರೆ ಕನಿಷ್ಠ 20%ದಂತೆ ವೈದ್ಯನಿಗೆ ಪುಗಸಟ್ಟೆ ಯಾಗಿ 80ರೂಪಾಯಿ
ಕಮಿಷನ್ ದಕ್ಕುತ್ತದೆ..!
ಇದೇ ರೀತಿ ಯಾವುದೇ ವಿಶೇಷ ಪರೀ ಕ್ಷೆಯ ಅಗತ್ಯವಿಲ್ಲದ
ಸಂದರ್ಭಗಳಲ್ಲಿ ರೋಗಿ ಗಳನ್ನು ಪರೀಕ್ಷಾ ಕೇಂದ್ರಗಳಿಗೆ ಕಳುಹಿಸಿ ಹತ್ತಾರು ಪರೀಕ್ಷೆ
ಸ್ಕ್ಯಾನಿಂಗ್ ಅದೂ ಇದೂ ಎಂದು ಮಾಡಿಸಿ ಅನಗತ್ಯವಾಗಿ ರೋಗಿಗಳ ಜೇಬು ಬೋಳಿಸುವ ಚಾಳಿ
ನಗರಪ್ರದೇಶಗಳ ಕೆಲವು ತಜ್ಞ ವೈದ್ಯರಿಗಿದೆ. ವೈದ್ಯಕೀಯ ಕ್ಷೇತ್ರವು ಯಾವ ಪರಿ ಕೆಟ್ಟು
ಕೆರ ಹಿಡಿದು ಹೋಗಿದೆಯೆಂದರೆ ಅಲ್ಲಿ ಮಾನವೀಯ ಮೌಲ್ಯಗಳಿಗೆ ಕಿಲುಬು ಕಾಸಿನ ಬೆಲೆಯೂ
ಇಲ್ಲ. ಯಾವುದೇ ಪರೀಕ್ಷೆ ಮಾಡಿಸಿ ದರೂ ಕೆಲವು ವೈದ್ಯರಿಗೆ 20-40%ವರೆಗೆ ಕಮಿಷನ್
ಸಿಗುತ್ತದೆ.
ಇನ್ನು ಕೆಲವು ವೈದ್ಯರಿಗೊಂದು ಕೆಟ್ಟ ಚಾಳಿ ಯಿದೆ. ಅವರು ಸೂಚಿಸಿದ
ಪರೀಕ್ಷಾ ಕೇಂದ್ರ ಗಳಲ್ಲೇ ಪರೀಕ್ಷೆ ಮಾಡಿಸಬೇಕು. ಒಂದು ವೇಳೆ ರೋಗಿ ತನಗೆ ಆರ್ಥಿಕ
ಮತ್ತು ಇತರ ಅನುಕೂಲ ತೆಗಳಿವೆ ಎಂಬ ಕಾರಣಕ್ಕೆ ಬೇರೆ ಯಾವುದಾದರೂ ಪರೀಕ್ಷಾ
ಕೇಂದ್ರಗಳಲ್ಲಿ ಪರೀಕ್ಷೆ ಮಾಡಿಸಿ ವರದಿ ತಂದರೆ ಅದನ್ನು ಯಾವ ಮುಲಾಜೂ ಇಲ್ಲದೇ
ತಿರಸ್ಕರಿಸಿ ಪುನಃ ತಾನು ಸೂಚಿಸಿದಲ್ಲಿಯೇ ಮಾಡಿ ಸಲು ನಿರ್ಬಂಧಿಸುವ ವೈದ್ಯರೂ ಇದ್ದಾರೆ.
ವೈದ್ಯನಿಗೆ ಕಮಿಷನ್ ನೀಡದ ಪರೀಕ್ಷಾ ಕೇಂದ್ರ ಗಳ ವರದಿಗಳು ಯಾವತ್ತೂ ಇಂತಹ ವೈದ್ಯರಿಗೆ
ಸರಿಯಿರುವುದಿಲ್ಲ (ಕಮಿಷನ್ ಪಡೆಯದೆ ಅಗತ್ಯ ಪರೀಕ್ಷೆಗಳನ್ನು ಮಾಡಿಸುವ ವೈದ್ಯರ
ಕ್ಷಮೆಯಿರಲಿ) ಈ ವರದಿಯ ಆಧಾರದಲ್ಲಿ ಚಿಕಿತ್ಸೆ ನೀಡಿ ಏನಾದರೂ ಹೆಚ್ಚು ಕಡಿಮೆಯಾದರೆ
ಪ್ರಾಣಕ್ಕೆ ಅಪಾಯವಾದರೆ ತಾನು ಜವಾಬ್ದಾರನಲ್ಲವೆಂದು ಕೆಲವು ವೈದ್ಯರು ರೋಗಿಗಳನ್ನು
ಹೆದರಿಸುವುದೂ ಇದೆ.
ಇನ್ನು
ಔಷಧಿಗಳನ್ನು ಬರೆಯುವಲ್ಲಿಯ ಲಾಭ ಬಡುಕುತನಕ್ಕೆ ಕೈ ಹಾಕುವ ವೈದ್ಯರೂ ಇದ್ದಾರೆ. ತನಗೆ
ಯಾವ ಕಂಪೆನಿಯಿಂದ ಹೆಚ್ಚು ಉಡುಗೊರೆಗಳು,ಫ್ಯಾಮಿಲಿ ಫಾರಿನ್ ಟೂರ್ ಪ್ಯಾಕೇಜ್
ಗಿಫ್ಟ್‌ಗಳು ದೊರೆಯುತ್ತವೋ ಅದೇ ಕಂಪೆನಿಯ ಔಷಧಿಗಳನ್ನು ಬರೆದು ರೋಗಿಗಳಿಗೆ ತೊಂದರೆ
ನೀಡುವ ವೈದ್ಯರುಗಳೂ ಇದ್ದಾರೆ.ಒಂದೇ ಔಷಧಿಯನ್ನು ಬೇರೆ ಬೇರೆ ಕಂಪೆನಿಗಳು ತಯಾರಿ
ಸುತ್ತದೆ.ಬೇರೆ ಬೇರೆ ಕಂಪೆನಿಗಳ ದರಗಳಲ್ಲಿಯೂ ವ್ಯತ್ಯಾಸವಿರುತ್ತದೆ.ಒಂದು ಕಂಪೆನಿ
ತಯಾರಿಸಿದ ಮಾತ್ರೆಗೆ ಐದು ರೂಪಾಯಿ ಬೆಲೆಯಿದ್ದರೆ, ಇನ್ನೊಂದು ಕಂಪೆನಿ ತಯಾರಿಸುವ ಅದೇ
ಔಷಧಿ ಹೊಂದಿರುವ ಮಾತ್ರೆಗೆ ಹತ್ತು ರೂಪಾಯಿ ಇರುತ್ತದೆ.
ಸಾಮಾನ್ಯವಾಗಿ ಒಂದೇ ಔಷಧಿ ಹೊಂದಿರುವ ಬೇರೆ ಬೇರೆ ಕಂಪೆನಿಗಳು ತಯಾರಿ ಸುವ ಮಾತ್ರೆಗಳಲ್ಲಿನ ದರಗಳಲ್ಲಿನ ವ್ಯತ್ಯಾಸಗಳನ್ನು ಸೋಂಕು ನಿವಾರಕಗಳಲ್ಲಿ (Antibiotics) ಕಾಣಲು
ಸಾಧ್ಯ. ಇವುಗಳಲ್ಲಿ ಯಾವ ಕಂಪೆ ನಿಯ ಮಾತ್ರೆ ಸೇವಿಸಿದರೂ ಫಲಿತಾಂಶ ಒಂದೇ
ರೀತಿಯಿರುತ್ತದೆ.ಇಂತಹ ಸಂದರ್ಭಗಳಲ್ಲಿ ಕೆಲವು ಕಮರ್ಶಿಯಲ್ ದೃಷ್ಟಿಕೋನದ ವೈದ್ಯರು ತಮ್ಮ
ವೈಯಕ್ತಿಕ ಲಾಭಕ್ಕಾಗಿ ರೋಗಿಗೆ ದುಬಾರಿ ಬೆಲೆಯ ಮಾತ್ರೆ ಬರೆದು ಕೊಟ್ಟು ತೊಂದರೆ
ನೀಡುವುದೂ ಇದೆ. ಕೆಲವು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳು, ಹೈಟೆಕ್ ಆಸ್ಪತ್ರೆಗಳು
ವೈದ್ಯರಿಗೆ, ಅರೆವೈದ್ಯಕೀಯ ವೃತ್ತಿಪರರಿಗೆ ದೊಡ್ಡ ದೊಡ್ಡ ಕಮಿಷನ್ ಪ್ಯಾಕೇಜುಗಳನ್ನು
ನೀಡುತ್ತವೆ.
ಓರ್ವ
ರೋಗಿಗೆ ಇಂತಹ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಿರಿ ಎಂದು ತನ್ನ ಸಂಸ್ಥೆಯ ಮೊಹರು
ಹಾಕಿ ಒಂದು ಚೀಟಿ ಬರೆದು ಕೊಟ್ಟರೆ ರೋಗಿಯ ಚಿಕಿತ್ಸೆಗೆ ಆಸ್ಪತ್ರೆಗಳು ವಿಧಿಸುವ ಶುಲ್ಕದ
20% ದುಡ್ಡನ್ನು ರೆಫರ್ ಮಾಡಿದವನಿಗೆ ತಲುಪಿಸುವ ವ್ಯವಸ್ಥೆಯೂ ಇದೆ.ಈ ಕಮೀಷನ್ ನೀಡುವ
20% ಮೊತ್ತವನ್ನು ಬೇರೆ ಬೇರೆ ಸೇವೆಗಳ ಹೆಸರಲ್ಲಿ ಒಂದಕ್ಕೆರಡು ಸೇರಿಸಿಯೇ ಅಂತಹ ಹೈಟೆಕ್
ಆಸ್ಪತ್ರೆಗಳು ಬಿಲ್ ಮಾಡು ತ್ತವೆ.ಸ್ವಂತ ಆಸ್ಪತ್ರೆಗಳನ್ನು, ಡಯೋಗ್ನೊಸ್ಟಿಕ್
ಸೆಂಟರ್‌ಗಳನ್ನು ಹೊಂದಿರುವ ವೈದ್ಯರ ಬಳಿಗೆ ಅತೀ ಸಾಮಾನ್ಯ ಖಾಯಿಲೆಗೆ ಚಿಕಿತ್ಸೆಗೆ
ಹೋದರೆ ರೋಗಿಯನ್ನು ಅನಗತ್ಯವಾಗಿ ಅಡ್ಮಿಟ್ ಮಾಡು ವುದು, ಅನಗತ್ಯ ಪರೀಕ್ಷೆ ಮಾಡಿಸುವ ಮಹಾ
(?) ವೈದ್ಯರೂ ಇದ್ದಾರೆ.
ಸಿಸೇರಿಯನ್ ಹೆರಿಗೆಯಂತೂ ಇತ್ತೀಚಿನ ದಿನಗಳಲ್ಲಿ
ಒಂದು ಬೃಹತ್ ದಂಧೆಯೇ ಆಗಿ ಬಿಟ್ಟಿದೆ.ಗರ್ಭಿಣಿಗೆ ನೋವು
ಇದೆಯೆಂದೋ,ನಿಶ್ಶಕ್ತಿಯಿದೆಯೆಂದೋ ಆಸ್ಪತ್ರೆಗಳಿಗೆ ಕೊಂಡೊಯ್ದರೆ ಎಂಟು ತಿಂಗಳಿಗೆ ಆಕೆಯ
ಹೊಟ್ಟೆ ಸಿಗಿಯಲು ಅನೇಕ ವೈದ್ಯರು ಸಿದ್ಧರಾಗುತ್ತಾರೆ.ಗರ್ಭಿಣಿಯ ಸಂಬಂಧಿಕರನ್ನು ಮತ್ತು
ಸ್ವತಃ ಗರ್ಭಿಣಿಯನ್ನೂ ಬ್ಲ್ಯಾಕ್‌ಮೇಲ್ ಮಾಡುತ್ತಾರೆ. ಮಗುವಿನ ಹೊಕ್ಕುಳ ಬಳ್ಳಿ
ಕುತ್ತಿಗೆಗೆ ಸುತ್ತು ಬಿದ್ದಿದೆ, ಮಗುವಿನ ಹೃದಯ ಬಡಿತ ಕಡಿಮೆ ಇದೆ, ಗರ್ಭಕೋಶದ ಬಾಯಿ
ತೆರೆಯುವ ಸಾಧ್ಯತೆ ಕಡಿಮೆ ಇದೆ, ಮಗು ಹೊಟ್ಟೆಯೊಳಗೆ ಮಲವಿಸರ್ಜಿಸಿದೆ, ಗರ್ಭಿಣಿಗೆ
ಅತಿಯಾಗಿ ದ್ರವ ವಿಸರ್ಜನೆ (fluid discharge)
ಆಗಿದೆ, ಸಿಸೇರಿಯನ್ ಮಾಡದಿದ್ದರೆ ಮಗು ಜೀವಂತ ಸಿಗದಿದ್ದರೆ ನಾವು ಜವಾಬ್ದಾರರಲ್ಲ ಹೀಗೆ
ಏನೇನೋ ಕಾರಣ ನೀಡಿ ಗರ್ಭಿಣಿಯನ್ನೂ ಆಕೆಯ ಸಂಬಂಧಿಕರನ್ನು ಹೆದರಿಸಿ ಅವರು ಸಿಸೇರಿಯನ್
ಹೆರಿಗೆಗೆ ಒಪ್ಪುವಂತೆ ಮಾಡುತ್ತಾರೆ.
ಎಷ್ಟೇ
ವಿದ್ಯಾವಂತ ಪ್ರಜ್ಞಾ ವಂತನಾದರೂ ಪ್ರಾಣಾಪಾಯವಿದೆ ಎಂದರೆ ಹೆದರುತ್ತಾನೆ.ಸರಕಾರಿ
ಆಸ್ಪತ್ರೆಗಳಲ್ಲಿ ಸಿಸೇರಿಯನ್ ಹೆರಿಗೆ ಪ್ರಕರಣಗಳ ಪ್ರಮಾಣವನ್ನು ಗಮನಿಸಿದರೆ ಸಿಸೇರಿಯನ್
ಹೆರಿಗೆಗಳ ಅಗತ್ಯ ಎಷ್ಟು ಎಂದು ಅರಿವಾಗುತ್ತದೆ.ಖಾಸಗಿ ನರ್ಸಿಂಗ್ ಹೋಮ್‌ಗಳಲ್ಲಿ ಇತ್ತೀ
ಚಿನ ವರ್ಷಗಳಲ್ಲಿ 70% ಹೆರಿಗೆಗಳು ಸಿಸೇರಿ ಯನ್ ಮೂಲಕವೇ ನಡೆಯುತ್ತದೆ.ಆದರೆ ಸರಕಾರಿ
ಆಸ್ಪತ್ರೆಗಳಲ್ಲಿ ಸಿಸೇರಿಯನ್ ಹೆರಿಗೆಗಳ ಪ್ರಮಾಣ 5% ಮಾತ್ರ. ಸಾಮಾನ್ಯ ಹೆರಿಗೆಗೆ
ಮಧ್ಯಮ ಮಟ್ಟದ ಆಸ್ಪತ್ರೆಗಳಲ್ಲಿ 10ರಿಂದ 12ಸಾವಿರ ರೂಪಾಯಿ ಖರ್ಚಾಗುತ್ತದಾದರೆ
ಸಿಸೇರಿಯನ್ ಹೆರಿಗೆಗೆ 35-40 ಸಾವಿರ ರೂಪಾಯಿವರೆಗೆ ತಗಲುತ್ತದೆ. ಸಿಸೇರಿಯನ್ ಎಂಬ
ಹಗಲುದರೋಡೆಯ ಕಷ್ಟ ಅನು ಭವಿಸಿದವರೆಲ್ಲರಿಗೂ ಗೊತ್ತಿರುವ ಸತ್ಯ.
ಚಿಕ್ಕ ವೈದ್ಯರಿಗೆ ಕಮಿಷನ್ ನೀಡಿ ರೋಗಿಗಳನ್ನು ತಮ್ಮ ಬಳಿಗೆ ರೆಫರ್ ಮಾಡುವಂತಹ ತಜ್ಞ ವೈದ್ಯರುಗಳ ದಂಧೆಯೂ ಇದೆ. ಇಂತಹ ಮೋಸದ ಒಂದು ಉದಾಹರಣೆ:ಸುಮಾರು
ಐದು ವರ್ಷಗಳ ಹಿಂದೆ ನನ್ನ ಹತ್ತಿರದ ಸಂಬಂಧಿ ಅಸ್ತಮಾ ರೋಗಿಯೊಬ್ಬರಿಗೆ ಅಸ್ತಮಾ
ಉಲ್ಬಣಿಸಿತ್ತು.ಅವರ ಕುಟುಂಬ ಸ್ನೇಹಿತನೂ ಮತ್ತು ಕುಟುಂಬ ವೈದ್ಯನೂ ಆಗಿರುವ ಎಂ.ಬಿ.
ಬಿ.ಎಸ್.ವೈದ್ಯನ ಬಳಿಗೆ ತುರ್ತು ಚಿಕಿತ್ಸೆಗೆ ಕೊಂಡೊಯ್ದರು. ಆ ವೈದ್ಯ ಮಹಾಶಯ
ರೋಗಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿ ಮಂಗಳೂರಿನ ಓರ್ವ (ಕು)ಖ್ಯಾತ
ಶಸ್ತ್ರ ಚಿಕಿತ್ಸಕ ವೈದ್ಯನಿಗೆ ರೋಗಿಯನ್ನು ರೆಫರ್ ಮಾಡಿದ. ಸಾಮಾನ್ಯ ಜನರಿಗೆ ಯಾವ
ವೈದ್ಯ ಯಾವ ವಿಷಯದಲ್ಲಿ ತಜ್ಞ ಎಂಬ ಬಗ್ಗೆ ದೊಡ್ಡ ಜ್ಞಾನವೇನೂ ಇರುವುದಿಲ್ಲ.
ಅಸ್ತಮಾ
ರೋಗಿಯೊಬ್ಬನನ್ನು ಓರ್ವ ಫಿಸಿಶಿಯನ್‌ಗೋ, ಅಥವಾ ಶ್ವಾಸಕೋಶ ಸಂಬಂಧೀ ಖಾಯಿಲೆಗಳ ಕುರಿತ
ನುರಿತ ವೈದ್ಯನಿಗೋ ರೆಫರ್ ಮಾಡುವುದು ಬಿಟ್ಟು ಓರ್ವ ಶಸ್ತ್ರ ಚಿಕಿತ್ಸಕ(General Sergen)ನಿಗೆ
ರೆಫರ್ ಮಾಡುವುದರ ಹಿಂದಿನ ಉದ್ದೇಶ ಕಮಿಷನ್ ಗಳಿಸಲು ಎಂಬುದು ಸ್ಪಷ್ಟ.
ಶಸ್ತ್ರಚಿಕಿತ್ಸಕ ಆ ರೋಗಿಯನ್ನು ಇನ್ನೋರ್ವ ಪಿಸಿಶಿಯನ್‌ಗೆ ರೆಫರ್ ಮಾಡಿದ.ರೋಗಿಗೆ
ನಿಜವಾಗಿ ಚಿಕಿತ್ಸೆ ನೀಡುತ್ತಿರುವವನು ಫಿಸಿಶಿಯನ್ ಆದರೂ ರೋಗಿ ಆಸ್ಪತ್ರೆಯಲ್ಲಿರುವಷ್ಟು
ಕಾಲ ಶಸ್ತ್ರಚಿಕಿತ್ಸಕನೂ ದಿನಕ್ಕೆರಡು ಬಾರಿ ರೌಂಡ್ಸ್‌ಗೆ ಬಂದು ಸುಖಾಸುಮ್ಮನೆ ರೋಗಿಯ
ರಕ್ತದೊತ್ತಡ ಮತ್ತು ದೇಹದ ಉಷ್ಣಾಂಶ ಪರೀಕ್ಷಿಸಿ ಹೋಗುತ್ತಿದ್ದ.ಒಂದು ವಿಸಿಟ್‌ಗೆ 200
ರೂಪಾಯಿಯಂತೆ ತನ್ನ ಶುಲ್ಕವನ್ನೂ ಪಡೆಯುತ್ತಿದ್ದ. ಮಾತ್ರವಲ್ಲದೇ ಇಂತಹ ವೈದ್ಯರುಗಳು
ತಾವು ರೆಫರ್ ಮಾಡಿದ ವೈದ್ಯರುಗಳಿಂದಲೂ ಕಮಿಷನ್ ಗಿಟ್ಟಿಸುತ್ತಾರೆ. ಮತ್ತು ತಮಗೆ ರೆಫರ್
ಮಾಡಿದ ಚಿಕ್ಕ ವೈದ್ಯರಿಗೂ ಕಮಿಷನ್ ನೀಡುತ್ತಾರೆ. ವೈದ್ಯಕೀಯ ಜಗತ್ತಿನಲ್ಲಿ ಇದೊಂದು
ಹಳೆಯ ದಂಧೆ.
ಇನ್ನು ಅನೇಕ ಬಾರಿ ಬಡರೋಗಿಗಳು ದುಡ್ಡಿನ ಮುಖ ನೋಡದೇ ಅತ್ಯುತ್ತಮ
ಚಿಕಿತ್ಸೆ ಬಯಸಿ ದುಬಾರಿ ದುಡ್ಡು ಪೀಕಿಸುವ ದೊಡ್ಡ ದೊಡ್ಡ ವೈದ್ಯರ ಬಳಿಗೆ ಹೋಗುತ್ತಾರೆ.
ಇಂತಹ ಸಂದರ್ಭಗಳಲ್ಲಿ ಚಿಕಿತ್ಸೆಯ ಬಳಿಕ ಬಡರೋಗಿ ಡಾಕ್ಟ್ರೇ ಎಷ್ಟಾಯಿತು? ಎಂದು
ಕೇಳಿದರೆ ಮುಖ ಸಿಂಡರಿಸುವ ವೈದ್ಯ ಮಹಾಶಯರೂ ಇದ್ದಾರೆ. ಯಾಕೆ ಗೊತ್ತೇ? ಇದೇ ವೈದ್ಯ
ಮಹಾಶಯರುಗಳ ಬಳಿಗೆ ಬರುವ ಕೆಲವು ಶ್ರೀಮಂತ ರೋಗಿಗಳು ಫೀಸು ಎಷ್ಟೆಂದು ವಿಚಾರಿಸದೇ ಸಾವಿರ
ರೂಪಾಯಿಯ ಗರಿಗರಿ ನೋಟನ್ನು ಎಸೆದು ಬಾಕಿ ಪಡೆಯದೇ ಗತ್ತಿನಿಂದ ಹೋಗುತ್ತಾರೆ.
ಇಂತಿರುವಾಗ ಬಡರೋಗಿಗಳು ಮಡಿಕೆ ಮಡಿಕೆಯಾದ ಹತ್ತರ ನೋಟುಗಳನ್ನು ಎಣಿಸಿಕೊಡುವುದು ಕೆಲವು
ವೈದ್ಯ ಮಹಾಶಯರ ಪಾಲಿಗೆ ಅವಮಾನವೆಂಬಂತೆನಿಸುತ್ತದೆ.
ಇನ್ನು ವೈದ್ಯಕೀಯ
ಕಾಲೇಜುಗಳಲ್ಲಿನ ಹುಳುಕಿನ ಒಂದು ಪುಟ್ಟ ಸ್ಯಾಂಪಲ್ ಇಂತಿದೆ. ಕೋಟ್ಯಂತರ ರೂಪಾಯಿ
ಡೊನೇಶನ್ ಪಡೆಯುವ ಕೆಲವು ವೈದ್ಯಕೀಯ ಕಾಲೇಜುಗಳು ಸೂಕ್ತ ಮತ್ತು ಅಗತ್ಯವಿರುವ
ಸಿಬ್ಬಂದಿಗಳನ್ನು ನೇಮಿಸುವುದೂ ಇಲ್ಲ. ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ದೊಡ್ಡ
ಮನುಷ್ಯರು ತಪಾಸಣೆಗೆ ಬರುವಾಗ ಮುಂಚಿತವಾಗಿ ತಿಳಿಸಿಯೇ ಬರುತ್ತಾರೆ. ಆ ಸಂದರ್ಭಗಳಲ್ಲಿ
ಕೆಲವು ಬಾಡಿಗೆ ಸಿಬ್ಬಂದಿಗಳನ್ನು ಎರಡು ದಿನಗಳ ಕಾಲಕ್ಕೆ ತಾತ್ಕಾಲಿಕವಾಗಿ ನೇಮಕ
ಮಾಡಿಕೊಳುತ್ತಾರೆ. ಹೀಗೆ ಎರಡು ದಿನಗಳ ಮಟ್ಟಿಗೆ ಬಾಡಿಗೆಗೆ ಪಡೆಯುವ ವೈದ್ಯಕೀಯ
ಸಿಬ್ಬಂದಿಗಳ ಬಾಡಿಗೆ ಇಂತಿದೆ.
ಓರ್ವ
ಸ್ನಾತಕೋತ್ತರ ಪದವೀಧರ ವೈದ್ಯನಿಗೆ ಊಟ ತಿಂಡಿ ಪ್ರಯಾಣದ ಖರ್ಚು ಕಳೆದು ಒಂದು ದಿನದ
ಬಾಡಿಗೆ 7,000/- ರೂಪಾಯಿಗಳು, ಎಂ.ಬಿ.ಬಿ.ಎಸ್. ವೈದ್ಯನಿಗೆ ಖರ್ಚು ಕಳೆದು ದಿನದ
ಬಾಡಿಗೆ 5,000/- ರೂಪಾಯಿಗಳು, ಅರೆವೈದ್ಯಕೀಯ ಸಿಬ್ಬಂದಿಗೆ ಖರ್ಚು ಕಳೆದು ದಿನದ ಬಾಡಿಗೆ
2,000/- ರೂಪಾಯಿಗಳು. (ವೈದ್ಯಕೀಯ ಕಾಲೇಜೊಂದರಲ್ಲಿ ಅರೆವೈದ್ಯಕೀಯ ಸಿಬ್ಬಂದಿಯಾಗಿ
ಸೇವೆ ಸಲ್ಲಿಸುತ್ತಿದ್ದಾಗ ನಾನು ಕಂಡ ಅನುಭವವಿದು)ಅನೇಕ ವೈದ್ಯಕೀಯ ಕಾಲೇಜುಗಳು ಕಡಿಮೆ
ಸಂಬಳಕ್ಕೆ ಸಿಗುತ್ತಾರೆಂದು ಯಾವುದೇ ಮಾನ್ಯತೆ ಇಲ್ಲದ ನಕಲಿ ಅರೆವೈದ್ಯಕೀಯ
ಸರ್ಟಿಫಿಕೇಟುಗಳನ್ನು ಹೊಂದಿರುವ ಸಿಬ್ಬಂದಿಗಳನ್ನೇ ಕೆಲಸಕ್ಕಿಟ್ಟುಕೊಳ್ಳುತ್ತದೆ.
ಓರ್ವ
ಅರ್ಹ ಅರೆವೈದ್ಯಕೀಯ ಸಿಬ್ಬಂದಿ ಹತ್ತು ಸಾವಿರ ರೂಪಾಯಿಗಿಂತ ಕಡಿಮೆ ವೇತನಕ್ಕೆ ಕೆಲಸ
ಮಾಡಲು ಸಿದ್ಧನಿರುವುದಿಲ್ಲ.ಆದರೆ ಮಾನ್ಯತೆಯಿರದ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದು ನಕಲಿ
ಪ್ರಮಾಣ ಪತ್ರಗಳೊಂದಿಗೆ ಬರುವಾತ 5,000/- ರೂಪಾಯಿಗೆ ದುಡಿಯಲು
ಸಿದ್ಧನಿರುತ್ತಾನೆ.ಮಂಗಳೂರಿನ ಹೆಚ್ಚಿನ ವೈದ್ಯಕೀಯ ಕಾಲೇಜುಗಳಲ್ಲಿ ಕೇರಳ ಮೂಲದ
ಮಾನ್ಯತೆಯಿರದ ಸಂಸ್ಥೆಗಳಲ್ಲಿ ಅರೆವೈದ್ಯಕೀಯ ಶಿಕ್ಷಣ ಪಡೆದ ಅನೇಕ ಅರೆವೈದ್ಯಕೀಯ
ಸಿಬ್ಬಂದಿಗಳು ಸೇವೆ ಸಲ್ಲಿಸುತ್ತಿದ್ದಾರೆ. ಇಂತಹವರಿಂದ ತರಬೇತಿ ಪಡೆದ ವೈದ್ಯರ ಅರಿವಿನ
ಮಟ್ಟ ಎಂತಹದ್ದಿರಬಹುದೆಂದು ಊಹಿಸಿ.
40-50
ಲಕ್ಷ ರೂಪಾಯಿ ಖರ್ಚು ಮಾಡಿ ಎಂ.ಬಿ.ಬಿ.ಎಸ್, 80 ಲಕ್ಷದಿಂದ ಒಂದು ಕೋಟಿ ರೂಪಾಯಿಗಳವರೆಗೆ
ಖರ್ಚು ಮಾಡಿ ಸ್ನಾತಕೋತ್ತರ ವೈದ್ಯ ಪದವಿ ಪಡೆದು ಬರುವ ವೈದ್ಯರುಗಳಿಗೆ ಈ ಪರಿಯಾಗಿ
ರೋಗಿಗಳ ಜೇಬು ಕತ್ತರಿಸದೇ ಅವರು ಶಿಕ್ಷಣ ಪಡೆಯಲು ಹೂಡಿದ ಬಂಡವಾಳವನ್ನು ವಾಪಾಸು ಪಡೆಯಲು
ಸಾಧ್ಯವಿಲ್ಲ. ಅವರುಗಳಿಗೆ ತಾವು ಹೂಡಿರುವ ಬಂಡವಾಳದ ಮುಂದೆ ಮಾನವೀಯ ಮೌಲ್ಯಗಳು
ನಗಣ್ಯವೆನಿಸಬಹುದು. ಈ ದೇಶದ ವೈದ್ಯಕೀಯ ಕ್ಷೇತ್ರವನ್ನು ಸುಧಾರಣೆ ಮಾಡಬೇಕೆಂದರೆ ಮೊಟ್ಟ
ಮೊದಲಾಗಿ ವೈದ್ಯಕೀಯ ಶಿಕ್ಷಣದ ವಾಣಿಜ್ಯೀಕರಣವನ್ನು ತಡೆಗಟ್ಟಲೇಬೇಕು.
ವೈದ್ಯಕೀಯ
ಕ್ಷೇತ್ರದಲ್ಲಿ ಇಂತಹ ದರೋಡೆಕೋರರ ಮಧ್ಯೆಯೂ ಅತ್ಯಂತ ಮಾನವೀಯ ಸೇವೆ ನೀಡುವ, ರೋಗಿಗಳ
ಆರ್ಥಿಕ ಪರಿಸ್ಥಿತಿಯನ್ನು ಅರಿತು ಶುಲ್ಕ ಪಡೆಯುವ, ಅಗತ್ಯದ ಪರೀಕ್ಷೆಗಳನ್ನು ಮಾತ್ರ
ಮಾಡಿಸುವ ಸಜ್ಜನ ವೈದ್ಯರೂ ಇದ್ದಾರೆ. ಸಾಮಾನ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ವೃತ್ತಿ
ನಿರ್ವಹಿಸುವ ವೈದ್ಯರುಗಳು ನಗರ ಪ್ರದೇಶಗಳ ವೈದ್ಯರಿಗಿಂತ ಹೆಚ್ಚು ಮಾನವೀಯ
ಅಂತಃಕರಣವನ್ನು ಹೊಂದಿರುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ವೃತ್ತಿ ನಿರತ ವೈದ್ಯರಿಗೆ
ರೋಗಿಯ ಕೌಟುಂಬಿಕ ಹಿನ್ನೆಲೆ, ಆರ್ಥಿಕ ಪರಿಸ್ಥಿತಿ ಇತ್ಯಾದಿಗಳ ಸ್ಪಷ್ಟ ಅರಿವೂ
ಇರುತ್ತದೆ. ನಗರ ಪ್ರದೇಶಗಳಿಗೆ ಹೋಲಿಸಿದಾಗ ಹೆಚ್ಚು ಜನಾನುರಾಗಿ ವೈದ್ಯರಿರುವುದು
ಗ್ರಾಮೀಣ ಪ್ರದೇಶಗಳಲ್ಲಿ ಎಂಬುದು ವಾಸ್ತವ.
ವೈದ್ಯರುಗಳು ಕಡ್ಡಾಯ ಗ್ರಾಮೀಣ ಸೇವೆ ಮಾಡಲೇಬೇಕೆಂಬ ನಿಯಮಾವಳಿಯನ್ನು ಕಡ್ಡಾಯಗೊಳಿಸಬೇಕು
ಮತ್ತು ಬಲಿಷ್ಠಗೊಳಿಸಬೇಕು.ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಮಾಡುವುದರಿಂದ ವೈದ್ಯರುಗಳು
ಜನರ ನಾಡಿಮಿಡಿತವನ್ನು ಅರಿಯಲು ಸಾ್ಯವಿದೆ.ಅಮೀರ್ ಖಾನ್ ಹೇಳಿಕೆಯ ವಿರುದ್ಧ ಗರಂ ಆಗಿರುವ
ವೈದ್ಯಕೀಯ ಸಮೂಹವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.ಇದಾಗ್ಯೂ ಅಮೀರ್ ಖಾನ್‌ರ
ಹೇಳಿಕೆಯನ್ನು ಕೆಲವು ಮಾನವೀಯತೆಯ ಪರವಿರುವ, ವೈದ್ಯಕೀಯ ಕ್ಷೇತ್ರದ ವಾಣಿಜ್ಯೀಕರಣದ
ವಿರುದ್ಧವಿರುವ ವೈದ್ಯಕೀಯ ಸಂಘಟನೆಗಳು ಸಮರ್ಥಿಸಿ ಅಮೀರ್‌ಖಾನ್‌ಗೆ ಬೆಂಬಲ ನೀಡಿರುವುದು
ಸಂತಸದಾಯಕ.
(ಸಜ್ಜನ ವೈದ್ಯರ ಕ್ಷಮೆಯಿರಲಿ.)
ಇದೇ ರೀತಿ ಯಾವುದೇ ವಿಶೇಷ ಪರೀ ಕ್ಷೆಯ ಅಗತ್ಯವಿಲ್ಲದ ಸಂದರ್ಭಗಳಲ್ಲಿ ರೋಗಿ ಗಳನ್ನು ಪರೀಕ್ಷಾ ಕೇಂದ್ರಗಳಿಗೆ ಕಳುಹಿಸಿ ಹತ್ತಾರು ಪರೀಕ್ಷೆ ಸ್ಕ್ಯಾನಿಂಗ್ ಅದೂ ಇದೂ ಎಂದು ಮಾಡಿಸಿ ಅನಗತ್ಯವಾಗಿ ರೋಗಿಗಳ ಜೇಬು ಬೋಳಿಸುವ ಚಾಳಿ ನಗರಪ್ರದೇಶಗಳ ಕೆಲವು ತಜ್ಞ ವೈದ್ಯರಿಗಿದೆ. ವೈದ್ಯಕೀಯ ಕ್ಷೇತ್ರವು ಯಾವ ಪರಿ ಕೆಟ್ಟು ಕೆರ ಹಿಡಿದು ಹೋಗಿದೆಯೆಂದರೆ ಅಲ್ಲಿ ಮಾನವೀಯ ಮೌಲ್ಯಗಳಿಗೆ ಕಿಲುಬು ಕಾಸಿನ ಬೆಲೆಯೂ ಇಲ್ಲ. ಯಾವುದೇ ಪರೀಕ್ಷೆ ಮಾಡಿಸಿ ದರೂ ಕೆಲವು ವೈದ್ಯರಿಗೆ 20-40%ವರೆಗೆ ಕಮಿಷನ್ ಸಿಗುತ್ತದೆ.
ಇನ್ನು ಕೆಲವು ವೈದ್ಯರಿಗೊಂದು ಕೆಟ್ಟ ಚಾಳಿ ಯಿದೆ. ಅವರು ಸೂಚಿಸಿದ ಪರೀಕ್ಷಾ ಕೇಂದ್ರ ಗಳಲ್ಲೇ ಪರೀಕ್ಷೆ ಮಾಡಿಸಬೇಕು. ಒಂದು ವೇಳೆ ರೋಗಿ ತನಗೆ ಆರ್ಥಿಕ ಮತ್ತು ಇತರ ಅನುಕೂಲ ತೆಗಳಿವೆ ಎಂಬ ಕಾರಣಕ್ಕೆ ಬೇರೆ ಯಾವುದಾದರೂ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಮಾಡಿಸಿ ವರದಿ ತಂದರೆ ಅದನ್ನು ಯಾವ ಮುಲಾಜೂ ಇಲ್ಲದೇ ತಿರಸ್ಕರಿಸಿ ಪುನಃ ತಾನು ಸೂಚಿಸಿದಲ್ಲಿಯೇ ಮಾಡಿ ಸಲು ನಿರ್ಬಂಧಿಸುವ ವೈದ್ಯರೂ ಇದ್ದಾರೆ. ವೈದ್ಯನಿಗೆ ಕಮಿಷನ್ ನೀಡದ ಪರೀಕ್ಷಾ ಕೇಂದ್ರ ಗಳ ವರದಿಗಳು ಯಾವತ್ತೂ ಇಂತಹ ವೈದ್ಯರಿಗೆ ಸರಿಯಿರುವುದಿಲ್ಲ (ಕಮಿಷನ್ ಪಡೆಯದೆ ಅಗತ್ಯ ಪರೀಕ್ಷೆಗಳನ್ನು ಮಾಡಿಸುವ ವೈದ್ಯರ ಕ್ಷಮೆಯಿರಲಿ) ಈ ವರದಿಯ ಆಧಾರದಲ್ಲಿ ಚಿಕಿತ್ಸೆ ನೀಡಿ ಏನಾದರೂ ಹೆಚ್ಚು ಕಡಿಮೆಯಾದರೆ ಪ್ರಾಣಕ್ಕೆ ಅಪಾಯವಾದರೆ ತಾನು ಜವಾಬ್ದಾರನಲ್ಲವೆಂದು ಕೆಲವು ವೈದ್ಯರು ರೋಗಿಗಳನ್ನು ಹೆದರಿಸುವುದೂ ಇದೆ.
ಸಿಸೇರಿಯನ್ ಹೆರಿಗೆಯಂತೂ ಇತ್ತೀಚಿನ ದಿನಗಳಲ್ಲಿ ಒಂದು ಬೃಹತ್ ದಂಧೆಯೇ ಆಗಿ ಬಿಟ್ಟಿದೆ.ಗರ್ಭಿಣಿಗೆ ನೋವು ಇದೆಯೆಂದೋ,ನಿಶ್ಶಕ್ತಿಯಿದೆಯೆಂದೋ ಆಸ್ಪತ್ರೆಗಳಿಗೆ ಕೊಂಡೊಯ್ದರೆ ಎಂಟು ತಿಂಗಳಿಗೆ ಆಕೆಯ ಹೊಟ್ಟೆ ಸಿಗಿಯಲು ಅನೇಕ ವೈದ್ಯರು ಸಿದ್ಧರಾಗುತ್ತಾರೆ.ಗರ್ಭಿಣಿಯ ಸಂಬಂಧಿಕರನ್ನು ಮತ್ತು ಸ್ವತಃ ಗರ್ಭಿಣಿಯನ್ನೂ ಬ್ಲ್ಯಾಕ್‌ಮೇಲ್ ಮಾಡುತ್ತಾರೆ. ಮಗುವಿನ ಹೊಕ್ಕುಳ ಬಳ್ಳಿ ಕುತ್ತಿಗೆಗೆ ಸುತ್ತು ಬಿದ್ದಿದೆ, ಮಗುವಿನ ಹೃದಯ ಬಡಿತ ಕಡಿಮೆ ಇದೆ, ಗರ್ಭಕೋಶದ ಬಾಯಿ ತೆರೆಯುವ ಸಾಧ್ಯತೆ ಕಡಿಮೆ ಇದೆ, ಮಗು ಹೊಟ್ಟೆಯೊಳಗೆ ಮಲವಿಸರ್ಜಿಸಿದೆ, ಗರ್ಭಿಣಿಗೆ ಅತಿಯಾಗಿ ದ್ರವ ವಿಸರ್ಜನೆ (fluid discharge) ಆಗಿದೆ, ಸಿಸೇರಿಯನ್ ಮಾಡದಿದ್ದರೆ ಮಗು ಜೀವಂತ ಸಿಗದಿದ್ದರೆ ನಾವು ಜವಾಬ್ದಾರರಲ್ಲ ಹೀಗೆ ಏನೇನೋ ಕಾರಣ ನೀಡಿ ಗರ್ಭಿಣಿಯನ್ನೂ ಆಕೆಯ ಸಂಬಂಧಿಕರನ್ನು ಹೆದರಿಸಿ ಅವರು ಸಿಸೇರಿಯನ್ ಹೆರಿಗೆಗೆ ಒಪ್ಪುವಂತೆ ಮಾಡುತ್ತಾರೆ.
ಚಿಕ್ಕ ವೈದ್ಯರಿಗೆ ಕಮಿಷನ್ ನೀಡಿ ರೋಗಿಗಳನ್ನು ತಮ್ಮ ಬಳಿಗೆ ರೆಫರ್ ಮಾಡುವಂತಹ ತಜ್ಞ ವೈದ್ಯರುಗಳ ದಂಧೆಯೂ ಇದೆ. ಇಂತಹ ಮೋಸದ ಒಂದು ಉದಾಹರಣೆ:ಸುಮಾರು ಐದು ವರ್ಷಗಳ ಹಿಂದೆ ನನ್ನ ಹತ್ತಿರದ ಸಂಬಂಧಿ ಅಸ್ತಮಾ ರೋಗಿಯೊಬ್ಬರಿಗೆ ಅಸ್ತಮಾ ಉಲ್ಬಣಿಸಿತ್ತು.ಅವರ ಕುಟುಂಬ ಸ್ನೇಹಿತನೂ ಮತ್ತು ಕುಟುಂಬ ವೈದ್ಯನೂ ಆಗಿರುವ ಎಂ.ಬಿ. ಬಿ.ಎಸ್.ವೈದ್ಯನ ಬಳಿಗೆ ತುರ್ತು ಚಿಕಿತ್ಸೆಗೆ ಕೊಂಡೊಯ್ದರು. ಆ ವೈದ್ಯ ಮಹಾಶಯ ರೋಗಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿ ಮಂಗಳೂರಿನ ಓರ್ವ (ಕು)ಖ್ಯಾತ ಶಸ್ತ್ರ ಚಿಕಿತ್ಸಕ ವೈದ್ಯನಿಗೆ ರೋಗಿಯನ್ನು ರೆಫರ್ ಮಾಡಿದ. ಸಾಮಾನ್ಯ ಜನರಿಗೆ ಯಾವ ವೈದ್ಯ ಯಾವ ವಿಷಯದಲ್ಲಿ ತಜ್ಞ ಎಂಬ ಬಗ್ಗೆ ದೊಡ್ಡ ಜ್ಞಾನವೇನೂ ಇರುವುದಿಲ್ಲ.
ಇನ್ನು ಅನೇಕ ಬಾರಿ ಬಡರೋಗಿಗಳು ದುಡ್ಡಿನ ಮುಖ ನೋಡದೇ ಅತ್ಯುತ್ತಮ ಚಿಕಿತ್ಸೆ ಬಯಸಿ ದುಬಾರಿ ದುಡ್ಡು ಪೀಕಿಸುವ ದೊಡ್ಡ ದೊಡ್ಡ ವೈದ್ಯರ ಬಳಿಗೆ ಹೋಗುತ್ತಾರೆ. ಇಂತಹ ಸಂದರ್ಭಗಳಲ್ಲಿ ಚಿಕಿತ್ಸೆಯ ಬಳಿಕ ಬಡರೋಗಿ ಡಾಕ್ಟ್ರೇ ಎಷ್ಟಾಯಿತು? ಎಂದು ಕೇಳಿದರೆ ಮುಖ ಸಿಂಡರಿಸುವ ವೈದ್ಯ ಮಹಾಶಯರೂ ಇದ್ದಾರೆ. ಯಾಕೆ ಗೊತ್ತೇ? ಇದೇ ವೈದ್ಯ ಮಹಾಶಯರುಗಳ ಬಳಿಗೆ ಬರುವ ಕೆಲವು ಶ್ರೀಮಂತ ರೋಗಿಗಳು ಫೀಸು ಎಷ್ಟೆಂದು ವಿಚಾರಿಸದೇ ಸಾವಿರ ರೂಪಾಯಿಯ ಗರಿಗರಿ ನೋಟನ್ನು ಎಸೆದು ಬಾಕಿ ಪಡೆಯದೇ ಗತ್ತಿನಿಂದ ಹೋಗುತ್ತಾರೆ. ಇಂತಿರುವಾಗ ಬಡರೋಗಿಗಳು ಮಡಿಕೆ ಮಡಿಕೆಯಾದ ಹತ್ತರ ನೋಟುಗಳನ್ನು ಎಣಿಸಿಕೊಡುವುದು ಕೆಲವು ವೈದ್ಯ ಮಹಾಶಯರ ಪಾಲಿಗೆ ಅವಮಾನವೆಂಬಂತೆನಿಸುತ್ತದೆ.
ಇನ್ನು ವೈದ್ಯಕೀಯ ಕಾಲೇಜುಗಳಲ್ಲಿನ ಹುಳುಕಿನ ಒಂದು ಪುಟ್ಟ ಸ್ಯಾಂಪಲ್ ಇಂತಿದೆ. ಕೋಟ್ಯಂತರ ರೂಪಾಯಿ ಡೊನೇಶನ್ ಪಡೆಯುವ ಕೆಲವು ವೈದ್ಯಕೀಯ ಕಾಲೇಜುಗಳು ಸೂಕ್ತ ಮತ್ತು ಅಗತ್ಯವಿರುವ ಸಿಬ್ಬಂದಿಗಳನ್ನು ನೇಮಿಸುವುದೂ ಇಲ್ಲ. ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ದೊಡ್ಡ ಮನುಷ್ಯರು ತಪಾಸಣೆಗೆ ಬರುವಾಗ ಮುಂಚಿತವಾಗಿ ತಿಳಿಸಿಯೇ ಬರುತ್ತಾರೆ. ಆ ಸಂದರ್ಭಗಳಲ್ಲಿ ಕೆಲವು ಬಾಡಿಗೆ ಸಿಬ್ಬಂದಿಗಳನ್ನು ಎರಡು ದಿನಗಳ ಕಾಲಕ್ಕೆ ತಾತ್ಕಾಲಿಕವಾಗಿ ನೇಮಕ ಮಾಡಿಕೊಳುತ್ತಾರೆ. ಹೀಗೆ ಎರಡು ದಿನಗಳ ಮಟ್ಟಿಗೆ ಬಾಡಿಗೆಗೆ ಪಡೆಯುವ ವೈದ್ಯಕೀಯ ಸಿಬ್ಬಂದಿಗಳ ಬಾಡಿಗೆ ಇಂತಿದೆ.
ವೈದ್ಯಕೀಯ ಕ್ಷೇತ್ರದಲ್ಲಿ ಇಂತಹ ದರೋಡೆಕೋರರ ಮಧ್ಯೆಯೂ ಅತ್ಯಂತ ಮಾನವೀಯ ಸೇವೆ ನೀಡುವ, ರೋಗಿಗಳ ಆರ್ಥಿಕ ಪರಿಸ್ಥಿತಿಯನ್ನು ಅರಿತು ಶುಲ್ಕ ಪಡೆಯುವ, ಅಗತ್ಯದ ಪರೀಕ್ಷೆಗಳನ್ನು ಮಾತ್ರ ಮಾಡಿಸುವ ಸಜ್ಜನ ವೈದ್ಯರೂ ಇದ್ದಾರೆ. ಸಾಮಾನ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ವೃತ್ತಿ ನಿರ್ವಹಿಸುವ ವೈದ್ಯರುಗಳು ನಗರ ಪ್ರದೇಶಗಳ ವೈದ್ಯರಿಗಿಂತ ಹೆಚ್ಚು ಮಾನವೀಯ ಅಂತಃಕರಣವನ್ನು ಹೊಂದಿರುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ವೃತ್ತಿ ನಿರತ ವೈದ್ಯರಿಗೆ ರೋಗಿಯ ಕೌಟುಂಬಿಕ ಹಿನ್ನೆಲೆ, ಆರ್ಥಿಕ ಪರಿಸ್ಥಿತಿ ಇತ್ಯಾದಿಗಳ ಸ್ಪಷ್ಟ ಅರಿವೂ ಇರುತ್ತದೆ. ನಗರ ಪ್ರದೇಶಗಳಿಗೆ ಹೋಲಿಸಿದಾಗ ಹೆಚ್ಚು ಜನಾನುರಾಗಿ ವೈದ್ಯರಿರುವುದು ಗ್ರಾಮೀಣ ಪ್ರದೇಶಗಳಲ್ಲಿ ಎಂಬುದು ವಾಸ್ತವ.
(ಸಜ್ಜನ ವೈದ್ಯರ ಕ್ಷಮೆಯಿರಲಿ.)
ಧೋ..ಎಂದು ಸುರಿಯುವ ಮಳೆ
ಜಿಟಿ..ಜಿಟಿ.. ಎಂದು ದಿನವಿಡೀ ರಗಳುವ ಮಳೆ
ಭರ್ರೋ ಎನ್ನುವ ಗಾಳಿಯೊಡನೆ ಹುಯ್ಯುತ್ತಲೇ ಇರುವ ಮಳೆ
ಆಕಾಶಕ್ಕೆ ತೂತು ಬಿದ್ದಂತೆ ಧಪ ಧಪ ಎಂದು
ಬೀಳುತ್ತಲೇ ಇರುವ ಮಳೆ
ಮಲೆನಾಡಿನ ಮಳೆಯ ಬಗ್ಗೆ, ಕಪ್ಪು ಮೋಡದ ಬಗ್ಗೆ
ಹಿತವಾದ ಚಳಿಯ ಬಗ್ಗೆ ಹೇಗೆ ಹೇಳಲಿ ಎಷ್ಟು ಹೇಳಲಿ...
ಮಿರುಗನ ಮಳೆ ನಾಲ್ಕು ದಿನ ಎಡೆಬಿಡದೆ ಹೊಯ್ದಿದ್ದೇ ಮಳೆಗಾಲ ಶುರುವಾಯಿತು. ಅನಂತರದ ಆದ್ರೆ ಮಳೆ, ಅಣ್ಣನ ಮಳೆ, ತಮ್ಮನ ಮಳೆಗಳು ಊರಿನ ಬತ್ತಿದ ಕೆರೆಗಳನ್ನು ತುಂಬಿಸಿಯೇಬಿಟ್ಟಿತ್ತು. ಸಂಜೆಯಾಗುತ್ತಿದ್ದರೆ ಕೆರೆ ನೋಡಲು ಹೋಗುವುದೇ ಒಂದು ಸಂಭ್ರಮ.ಕೆರೆಯ ತುಂಬಾ ಮಣ್ಣು ನೀರು. ಅಕ್ಕಪಕ್ಕದ ಗುಡ್ಡಗಳಿಂದ, ಗದ್ದೆಗಳಿಂದ ಹರಿದುಬರುವ ನೀರಿನ ಜುಳು ಜುಳು ನಾದ. ಹಸಿರಿನ ಕಿರೀಟವಿಟ್ಟಂತೆ ಜೊಂಡು ಹುಲ್ಲು. ಅದನ್ನೆಲ್ಲಾ ಮೀರಿಸುವ ವಟರ್, ವಟರ್, ವಟರ್ ಎನ್ನುವ ಕಪ್ಪೆಗಳ ಸದ್ದು.ಆಶು, ಕೆರೆಯಂಚಿನಲ್ಲಿ ಸಾಲಾಗಿ ಕುಳಿತ ದಪ್ಪ ದಪ್ಪ ಕಪ್ಪೆಗಳನ್ನು ತೋರಿಸಿದ. ನೂರಕ್ಕೂ ಹೆಚ್ಚು ಕಪ್ಪೆಗಳು ಅಲ್ಲಿದ್ದವು. ಅವು ವಟರ್, ವಟರ್ ಎನ್ನುವಾಗಲೆಲ್ಲಾ ನೀಲಿ ಬಣ್ಣದ ಬಲೂನ್, ಅರಿಶಿನ ಬಣ್ಣ ಹಾಗೂ ಮಣ್ಣುಬಣ್ಣದ ಕಪ್ಪೆಗಳು ಒಂದರ ಪಕ್ಕ ಒಂದರಂತೆ ಸಾಲಾಗಿ ಕುಳಿತಿದ್ದವು. ನಾವೆಲ್ಲ ನೋಡ ನೋಡುತ್ತಿದ್ದಂತೆ ಮಣ್ಣು ಬಣ್ಣದ ಕಪ್ಪೆಗಳ ಬೆನ್ನು ಹತ್ತಿದ ಅರಿಶಿನ ಬಣ್ಣದ ಟೊಣಪಗಳು ಸುಮೋ ಕುಸ್ತಿಗೆ ಬಿದ್ದವು.
ಜಿಟಿ..ಜಿಟಿ.. ಎಂದು ದಿನವಿಡೀ ರಗಳುವ ಮಳೆ
ಭರ್ರೋ ಎನ್ನುವ ಗಾಳಿಯೊಡನೆ ಹುಯ್ಯುತ್ತಲೇ ಇರುವ ಮಳೆ
ಆಕಾಶಕ್ಕೆ ತೂತು ಬಿದ್ದಂತೆ ಧಪ ಧಪ ಎಂದು
ಬೀಳುತ್ತಲೇ ಇರುವ ಮಳೆ
ಮಲೆನಾಡಿನ ಮಳೆಯ ಬಗ್ಗೆ, ಕಪ್ಪು ಮೋಡದ ಬಗ್ಗೆ
ಹಿತವಾದ ಚಳಿಯ ಬಗ್ಗೆ ಹೇಗೆ ಹೇಳಲಿ ಎಷ್ಟು ಹೇಳಲಿ...
ಮಿರುಗನ ಮಳೆ ನಾಲ್ಕು ದಿನ ಎಡೆಬಿಡದೆ ಹೊಯ್ದಿದ್ದೇ ಮಳೆಗಾಲ ಶುರುವಾಯಿತು. ಅನಂತರದ ಆದ್ರೆ ಮಳೆ, ಅಣ್ಣನ ಮಳೆ, ತಮ್ಮನ ಮಳೆಗಳು ಊರಿನ ಬತ್ತಿದ ಕೆರೆಗಳನ್ನು ತುಂಬಿಸಿಯೇಬಿಟ್ಟಿತ್ತು. ಸಂಜೆಯಾಗುತ್ತಿದ್ದರೆ ಕೆರೆ ನೋಡಲು ಹೋಗುವುದೇ ಒಂದು ಸಂಭ್ರಮ.ಕೆರೆಯ ತುಂಬಾ ಮಣ್ಣು ನೀರು. ಅಕ್ಕಪಕ್ಕದ ಗುಡ್ಡಗಳಿಂದ, ಗದ್ದೆಗಳಿಂದ ಹರಿದುಬರುವ ನೀರಿನ ಜುಳು ಜುಳು ನಾದ. ಹಸಿರಿನ ಕಿರೀಟವಿಟ್ಟಂತೆ ಜೊಂಡು ಹುಲ್ಲು. ಅದನ್ನೆಲ್ಲಾ ಮೀರಿಸುವ ವಟರ್, ವಟರ್, ವಟರ್ ಎನ್ನುವ ಕಪ್ಪೆಗಳ ಸದ್ದು.ಆಶು, ಕೆರೆಯಂಚಿನಲ್ಲಿ ಸಾಲಾಗಿ ಕುಳಿತ ದಪ್ಪ ದಪ್ಪ ಕಪ್ಪೆಗಳನ್ನು ತೋರಿಸಿದ. ನೂರಕ್ಕೂ ಹೆಚ್ಚು ಕಪ್ಪೆಗಳು ಅಲ್ಲಿದ್ದವು. ಅವು ವಟರ್, ವಟರ್ ಎನ್ನುವಾಗಲೆಲ್ಲಾ ನೀಲಿ ಬಣ್ಣದ ಬಲೂನ್, ಅರಿಶಿನ ಬಣ್ಣ ಹಾಗೂ ಮಣ್ಣುಬಣ್ಣದ ಕಪ್ಪೆಗಳು ಒಂದರ ಪಕ್ಕ ಒಂದರಂತೆ ಸಾಲಾಗಿ ಕುಳಿತಿದ್ದವು. ನಾವೆಲ್ಲ ನೋಡ ನೋಡುತ್ತಿದ್ದಂತೆ ಮಣ್ಣು ಬಣ್ಣದ ಕಪ್ಪೆಗಳ ಬೆನ್ನು ಹತ್ತಿದ ಅರಿಶಿನ ಬಣ್ಣದ ಟೊಣಪಗಳು ಸುಮೋ ಕುಸ್ತಿಗೆ ಬಿದ್ದವು.
ಅವುಗಳ
ಕುಸ್ತಿಯನ್ನು ನೋಡಿ ನಮ್ಮಿಂದಿಗಿದ್ದ ಮಕ್ಕಳೆಲ್ಲಾ ಕುಣಿದು ಕುಪ್ಪಳಿಸತೊಡಗಿದರು. ಅವು
ಕುಸ್ತಿ ಮಾಡುತ್ತಲೇ, ವಟರ್ ವಟರ್ ಎಂದು ಕೂಗುತ್ತಲೇ ಕೆರೆಯ ನೀರಿನ ಮೇಲೆ
ತೇಲತೊಡಗಿದವು.ಅವು ಗೂಳಿಕಪ್ಪೆ, ಗ್ವಟರ್ ಕಪ್ಪೆಎಂದೆಲ್ಲಾ ಕರೆಯುವ ರೈತನ ಮಿತ್ರರು. ಇವು
ಭತ್ತದ ಗದ್ದೆಯಲ್ಲಿರುವ ಪೀಡೆ ಕೀಟಗಳನ್ನು, ಸೊಳ್ಳೆಗಳನ್ನು ತಿನ್ನುವ ಮಾಂಸಾಹಾರಿಗಳು.
ಮಳೆಗಾಲದ ಶುರುವಿನಲ್ಲಿ ಸಮಾಗಮಕ್ಕಾಗಿಯೇ ಕೆರೆಗೆ ಬರುತ್ತವೆ. ಎರಡು ಮೂರು ದಿನಗಳ ಹಬ್ಬ
ನಡೆಸುತ್ತವೆ. ಆಮೇಲೆ ಎಂದಿನಂತೆ ನಿಂಬೆ ಹಸಿರಿನ ಬಣ್ಣ ಹೊಂದಿ ಆಹಾರ ಹುಡುಕುತ್ತಾ
ಹೊಲ-ಗದ್ದೆಗಳಲ್ಲಿ ಮರೆಯಾಗುತ್ತವೆ.
ಅಷ್ಟರಲ್ಲಿ
ಮನು, ನಮ್ಮ ಮನೆಯ ಕೊಟ್ಟಿಗೆಯಲ್ಲಿ ಇದೇ ರೀತಿಯ ಒಂದು ದೇವರ ಕಪ್ಪೆಯಿದೆ. ಯಾವಾಗ
ನೋಡಿದರೂ ಬಾಗಿಲ ಮರೆಯಲ್ಲೇ ಇರುತ್ತದೆ. ಮುಟ್ಟಿದರೆ ಉಚ್ಚೆಹೊಯ್ಯುತ್ತದೆ. ಪಾಪ ಅದು
ಯಾವಾಗ ಹೊಟ್ಟೆ ತುಂಬಿಸಿಕೊಳ್ಳುವುದೋ ಗೊತ್ತಾಗುವುದೇ ಇಲ್ಲ ಎಂದನು.ಗೂಳಿಕಪ್ಪೆಗಳು
ರಾತ್ರಿ ವೇಳೆ ಆಹಾರ ಹುಡುಕುವ ನಿಶಾಚರಿಗಳು. ಮಳೆಗಾಲದಲ್ಲಿ ಚುರುಕಾಗಿರುವ ಇವುಗಳು
ಬೇಸಿಗೆಯಲ್ಲಿ ತಂಪು ಜಾಗವನ್ನು ಅರಸುತ್ತಾ ಕೆರೆ, ನದಿ, ಇಲಿಗಳ ಬಿಲ ಹೀಗೆ ತೇವವಿರುವ
ಸಂದಿಗೊಂದಿಗಳಲ್ಲಿ ಸೇರಿಕೊಳ್ಳುತ್ತವೆ. ಮೊನ್ನೆ ಒಂದು ದೊಡ್ಡ ಕಪ್ಪೆಮಾರುದ್ದದ ಹಾವನ್ನೇ
ನುಂಗುತ್ತಿತ್ತು. ನಾವೆಲ್ಲಾ ಶಾಲೆಗೆ ಹೋಗುತ್ತಿದ್ದಾಗ ನೋಡಿದೆವು ಎಂದು ಹೇಳಿದ್ದು
ಅಪ್ಪು.
ಎಲ್ಲರೂ
ಹಾವುಗಳು ಕಪ್ಪೆಯನ್ನು ನುಂಗುವುದನ್ನು ನೋಡಿದರೆ, ಇವನು ಕಪ್ಪೆಯೇ ಹಾವನ್ನು
ನುಂಗುವುದನ್ನು ನೋಡಿದ್ದ. ಅದೊಂದು ಅದ್ಭುತವೆ! ಅವನು ವರ್ಣಿಸಿದ್ದನ್ನು ಎಲ್ಲರು ಬಾಯಿ
ಬಿಟ್ಟುಕೊಂಡು ಕೇಳಿದರು. ಒಮ್ಮೆಮ್ಮೆ ಗೂಳಿಕಪ್ಪೆಗಳು ಹಾವಿಗೆ ಹೆದರದೆ ತಿರುಗಿ
ನಿಲ್ಲುತ್ತವೆ. ಹಾವಿನ ಮೂತಿಯನ್ನು ತಮ್ಮ ಬಾಯಿಯೊಳಗೆ ಗಪ್ಪೆಂದು ಹಿಡಿದುಬಿಡುತ್ತವೆ.
ಗೂಳಿ ಕಪ್ಪೆಯ ಬಿಗಿ ಹಿಡಿತ ತಾಸುಗಟ್ಟಲೆಯಾದರೂ ಸಡಿಲವಾಗುವುದೇ ಇಲ್ಲ. ಇದರಿಂದ
ಉಸಿರುಕಟ್ಟಿದ ಹಾವು ಸತ್ತುಹೋಗುತ್ತದೆ. ಅನಂತರ ಅದನ್ನು ಗೂಳಿಕಪ್ಪೆನಿಧಾನವಾಗಿ
ನುಂಗುತ್ತದೆ.
ಗೂಳಿಕಪ್ಪೆಗಳು
ಅರ್ಧ ಕಿಲೋಗ್ರಾಂನಿಂದ ಒಂದು ಕೆ.ಜಿ. ತೂಕವಿರುತ್ತವೆ. ದಿನಾಲೂ ತಮ್ಮ ತೂಕದಷ್ಟೆ
ಕೀಟಗಳನ್ನು ಸ್ವಾಹಾ ಮಾಡುತ್ತವೆ. ಅಂದರೆ ಒಂದು ಗೂಳಿಕಪ್ಪೆಭತ್ತ ಬೆಳೆಯುವ ಮೂರು
ತಿಂಗಳಲ್ಲಿ ಸುಮಾರು 45 ಕಿಲೋಗ್ರಾಂನಷ್ಟು (45,000 ಕೀಟಗಳನ್ನು) ತಿನ್ನುತ್ತದೆ.
ಒಟ್ಟಿನಲ್ಲಿ ರೈತನ ಒಂದು ಎಕರೆ ಗದ್ದೆಯಲ್ಲಿ 10 ಗೂಳಿ ಕಪ್ಪೆಗಳಿದ್ದರೂ ಸಾಕು, ಸಮಗ್ರ
ಪೀಡೆಕೀಟಗಳ ನಿರ್ವಹಣೆಯಾಗುತ್ತದೆ. ಕಪ್ಪೆಗಳು ತುಂಬಾ ಇವೆ ಅಂದರೆ ಆ ಪರಿಸರ ವಿಷ,
ವಿಕಿರಣದಂತಹ ಮಾಲಿನ್ಯದಿಂದ ಮುಕ್ತವಾಗಿದೆ ಎನ್ನಬಹುದು.
ಹೀಗೆಲ್ಲಾ
ಹೇಳುತ್ತಿರುವಾಗಲೇ ಅಡಿಕೆ, ತೆಂಗಿನಮರಗಳಲ್ಲಿ ಜೀ... ಎನ್ನುವ ಜೀರುಂಡೆಯ ಸ್ವರ
ಕೇಳತೊಡಗಿತು. ಹೊಟ್ಟೆ ಹರಿದು ಹೋಗುವಂತೆ ಕೂಗಿಕೊಳ್ಳುವ ಈ ಕೀಟಗಳು ದೊಡ್ಡವರ ಹೆಬ್ಬೆರಳ
ಗಾತ್ರದಷ್ಟಿರುತ್ತವೆ. ಜೀರುಂಡೆಗಳು ಕಿರುಚಿದಷ್ಟೂ ಮಳೆ ಹೆಚ್ಚಾಗುತ್ತದೆ ಎನ್ನುವ
ನಂಬಿಕೆ ಮಲೆನಾಡಿಗರದು.ಅಂತೆಯೇ ಕಪ್ಪುಮೋಡಗಳು ಹೆಚ್ಚಾಗಿ,ಮಳೆ ಸುರಿಯತೊಡಗಿತು. ಕತ್ತಲು
ತುಂಬತೊಡಗಿತು. ಹಗಲು ಬಂದ ನೆಂಟ ಸಂಜೆ ಹೋಗ್ತಾನಂತೆ. ರಾತ್ರಿ ಬಂದ ನೆಂಟ ಅಲ್ಲೇ
ಉಳಿತಾನಂತೆ ಎನ್ನುವ ಮಲೆನಾಡಿಗರ ನಂಬಿಕೆಯಂತೆ ರಾತ್ರಿಯೆಲ್ಲಾ ಮಳೆ ಹೆಚ್ಚಾಯಿತು.
ಕೆರೆಕೋಡಿ ಹರಿಯಿತು. ಕಟ್ಟಿದ ಒಡ್ಡುಗಳೆಲ್ಲಾ ಕೊಚ್ಚಿಹೋದವು. ಎರಡು ಮೈಲಿ ದೂರದ ಹೊಳೆ
ತುಂಬಿ, ದಾಟಲು ಹಾಕಿದ್ದ ಮರದ ತುಂಡುಗಳು ತೇಲಿಹೋದ ಸುದ್ದಿ ಬಂತು.
ಮಲೆನಾಡಿನ
ಎಷ್ಟೋ ಊರುಗಳು ಮಳೆಗಾಲದಲ್ಲಿ ದ್ವೀಪಗಳಾಗಿ ಬಿಡುತ್ತವೆ. ಬೆಳ್ಳಂಬೆಳಗ್ಗೆಯೇ ನಾವೆಲ್ಲ
ಹೊಳೆ ನೋಡಲು ಹೊರಟೆವು.ಕರಿಯ ಜಡ್ಡು ಕಂಬಳಿಯ ಒಂದು ತುದಿಯನ್ನು ತ್ರಿಕೋನದಲ್ಲಿ ಮಡಚಿ
ಅದಕ್ಕೆ ಕೊಟ್ಟೆ ಕಡ್ಡಿ ಚುಚ್ಚಿ ಕಂಬಳಿ ಕೊಪ್ಪೆ ತಯಾರಿ ಆಯಿತು. ಧೋ ಎಂದು ಸುರಿಯುವ
ಮಳೆಗೆ ಕೊಡೆಗಳು ತಡೆಯುವುದಿಲ್ಲ. ಮಂಡೆಯಿಂದ ಕಾಲಿನ ತುದಿಯವರೆಗೆ ಇಳಿಬಿಡುವ ಕಂಬಳಿ
ಕೊಪ್ಪೆಇದ್ದರೆ ಎಂತಹ ಮಳೆಯನ್ನು ಬೇಕಾದರೂ ಎದುರಿಸುವ ಧೈರ್ಯ ಬಂದುಬಿಡುತ್ತದೆ.
ನಾವೆಲ್ಲ
ಹೊಳೆ ರಸ್ತೆಯಲ್ಲಿ ಹೋಗುತ್ತಿರುವಾಗಲೇ ಅರುಣನಿಗೆ ಆಳೆತ್ತರದ ವರ್ಲೆ (ಗೆದ್ದಲು) ಹುತ್ತ
ಕಾಣಿಸಿತು. ಅದರಿಂದ ಸಾವಿರಾರು ಮಳೆಹುಳುಗಳು ಸೈನಿಕರಂತೆ ಒಂದರ ಹಿಂದೆ ಒಂದರಂತೆ
ಹೊರಡುತ್ತಿದ್ದವು. ಅವೆಲ್ಲಾ ರಕ್ಕೆ ಬಂದ ವರ್ಲೆ ಹುಳುಗಳು. ಹುತ್ತದ ಬುಡದ ಚಿಕ್ಕ
ಕಂಡಿಯಿಂದ ಹೊರಬಂದು ಬಾನಿಗೆ ದಾಳಿಯಿಡುತ್ತಿದ್ದವು. ಸುರಿವ ಮಳೆಯೊಂದಿಗೆ ಅವೂ ಪೈಪೋಟಿ
ನಡೆಸುತ್ತಿದ್ದವು. ಸ್ವಲ್ಪ ಹೊತ್ತಿನಲ್ಲಿಯೇ ಅಲ್ಲೆಲ್ಲಾ ಮಳೆಹುಳುಗಳೇ ತುಂಬಿಹೋದವು.
ಅದೆಲ್ಲಿದ್ದವೋ ಬಗೆಬಗೆಯ ಹಕ್ಕಿಗಳೂ ಸಹ ಸುತ್ತಲಿನ ಮರಗಳ ಮೇಲೆ ಜಮಾಯಿಸತೊಡಗಿದವು.
ನಮಗೂ
ಅವೆಲ್ಲಾ ಆಗ ಹೊರಗೆ ಬಂದು ಏನು ಮಾಡುತ್ತವೆ,! ಏನಾಗುತ್ತವೆ ಎಂದೆಲ್ಲಾ ಕುತೂಹಲ. ಸುಮಾರು
ಅರ್ಧ ತಾಸಿನವರೆಗೆ ಚಿಕ್ಕ ಕಿಂಡಿಯಿಂದ ರೆಕ್ಕೆ ಬಂದ ಮಳೆಹುಳುಗಳು ಹೊರಬರುತ್ತಲೇ
ಇದ್ದವು.ಹೀಗಿರುವಾಗ ಹುತ್ತದ ಕಿಂಡಿಯಿಂದ ವಿಭಿನ್ನವಾದ ರೆಕ್ಕೆಯ ಮಳೆಹುಳು ಹೊರಬಂತು.
ಮಣ್ಣುಕೆಂಪು ಬಣ್ಣದ ಪಾರದರ್ಶಕ ರೆಕ್ಕೆ. ದಪ್ಪ ಕೆಂಪು ಕುಂಡೆಯ ಮಳೆಹುಳ ಅದು. ಬೆಳಕನ್ನು
ಕಾಣುತ್ತಿದ್ದಂತೆಯೇ ರೊಯ್ಯನೆ ಆಕಾಶಕ್ಕೆ ಏರತೊಡಗಿತು. ಆಕಾಶದಲ್ಲಿ ತುಂಬಿದ್ದ
ಕಪ್ಪುಮೋಡಗಳನ್ನು ಚದುರಿಸಿಬಿಡುವ ವೇಗದಿಂದ ಕಣ್ಣಿಗೆ ಕಾಣದಷ್ಟು ಮೇಲೆ ಹೋಯಿತು.
ಆಗಲೇ
ವಿಚಿತ್ರ ಎನ್ನುವಂತೆ, ಅಲ್ಲಿ ಇಲ್ಲಿ ಸುತ್ತಾಡುತ್ತಾ ಪೆದ್ದುಗಳಂತೆ ಗಿರಕಿ
ಹೊಡೆಯುತ್ತಿದ್ದ ಉಳಿದ ಹುಳುಗಳೂ ಆ ದಪ್ಪನೆಯ ಕೆಂಪು ಕುಂಡೆಯ ಹುಳವನ್ನೇ ಅಟ್ಟಿಸಿಕೊಂಡು
ಮೇಲೇರತೊಡಗಿದವು. ಹಾಗೆ ಅದನ್ನು ಅಟ್ಟಿಸಿಕೊಂಡು ಓಡಿದ್ದರಿಂದ ಆ ದೃಶ್ಯ ಧೂಮಕೇತುವಿನ
ಬಾಲದಂತೆ ಕಂಡಿತು. ಸ್ವಲ್ಪ ಹೊತ್ತಿಗೆ ಒಂದಿಷ್ಟು ಹುಳುಗಳು ಪುತಪುತನೆ ಬೀಳತೊಡಗಿದವು.
ಕೆಲವು ರೆಕ್ಕೆ ಮುರಿದುಬಿದ್ದರೆ, ಕೆಲವು ಸುಸ್ತಾಗಿ ಬಿದ್ದಿದ್ದವು. ಹುತ್ತದ ಸುತ್ತಲೂ
ಬೃಹತ್ ಶ್ಮಶಾನವೇ ನಿರ್ಮಾಣವಾಗುತ್ತಿತ್ತು.
ಆಗಲೇ
ಯಾರೋ ಅಪ್ಪಣೆ ಕೊಟ್ಟಂತೆ ಹಕ್ಕಿಗಳು, ಕಪ್ಪೆಗಳು, ಹಲ್ಲಿ, ಓತಿಕ್ಯಾತ, ಹಾವುರಾಣಿ,
ನಾಯಿಗಳು ಮುಂತಾದವುಗಳೆಲ್ಲಾ ಅವನ್ನು ಕಬಳಿಸತೊಡಗಿದವು. ಅಷ್ಟೋ ಇಷ್ಟೋ
ಶಕ್ತಿಗೂಡಿಸಿಕೊಂಡು ಹಾರಲು ಹೊರಟ ಹುಳುಗಳು ಸಹ ಹಕ್ಕಿಗಳ ಡೈವ್ ಕ್ಯಾಚ್ಗೆ ಔಟ್ ಆದವು.
ಆಕಾಶದಿಂದ ಮಳೆಯಾಗಿ ಹುಳುಗಳೇ ಬೀಳುತ್ತಿವೆಯೇನೋ ಅನ್ನುವಂತೆ ಸಾವಿರ ಸಾವಿರ ಹುಳುಗಳು
ಬೀಳುತ್ತಿದ್ದವು. ಅವನ್ನೆಲ್ಲಾ ಆ ಎಲ್ಲಾ ಹೊಟ್ಟೆಬಾಕಗಳಿಂದಲೂ ಖಾಲಿ ಮಾಡಲು
ಆಗುತ್ತಿರಲಿಲ್ಲ. ಅವಕ್ಕಂತೂ ಹಬ್ಬವೋ ಹಬ್ಬ. ತಿನ್ನುವಷ್ಟು ಹುಳುಗಳು.
ನೋಡು
ನೋಡು ಕೆಂಪು ಕುಂಡೆಯ ಹುಳ ರೊಯ್ಯನೆ ಹಿಂದಿರುಗಿ ಬರುತ್ತಿದೆ ಎನ್ನುತ್ತಾ ಸತೀಶ ತಲೆ
ಮೇಲೆತ್ತಿ ಕೂಗತೊಡಗಿದ.ಅದರ ಕುಂಡೆಗೆ ಒಂದು ಸಣ್ಣ ಹುಳು ಅಂಟಿಕೊಂಡಿದೆ. ಆ ಸಣ್ಣ ಹುಳುವೇ
ಅದನ್ನು ಗೂಡಿಗೆ ವಾಪಾಸು ಎಳಕೊಂಡು ಬಂತು ಎಂದು ವೀಕ್ಷಕ ವಿವರಣೆ ನೀಡಿದ.ನಾವೆಲ್ಲಾ
ಸೂಜಿಯಂತೆ ಚುಚ್ಚುವ ಮಳೆಯಲ್ಲಿಯೇ ತಲೆ ಎತ್ತಿ ಎಲ್ಲಿ.. ಎಲ್ಲಿ.. ಎಂದು ನೋಡತೊಡಗಿದೆವು.
ಅದು ರಾಣಿಹುಳ ಅನಸ್ತೈತಿ, ಇನ್ನಮ್ಯಾಲೆ ಅದು ಗೂಡೊಳಗೆ ಹೊಕ್ಕೊಂಡು ಒಂದೇ ಸಮನೆ ಹೆಣ್ಣು
ಮೊಟ್ಟೆ ಇಡೆತೈತಿ. ಈ ಸತ್ತೋದವೆಲ್ಲಾ ಗಂಡುಹುಳುಗಳು ಎಂದು ಮಂಜ ಏನೆಲ್ಲಾ ಹೇಳತೊಡಗಿದ.
ಶರವೇಗದಲ್ಲಿ
ಹಿಂದೆ ಬಂದ ಕೆಂಪು ಕುಂಡೆಯ ಹುಳು ತನಗಂಟಿದ್ದ ಆ ಸಣ್ಣಹುಳುವನ್ನು ಗೂಡಿನ ಬಳಿಯೇ
ಬೀಳಿಸಿ ತಾನು ಗಪ್ಪನೆ ಒಳಸೇರಿತು. ನಾವೆಲ್ಲಾ ನಾಟಕ ಮುಗಿದ ಮೇಲೆ ಕೊಂಕು ಹುಡುಕುವ
ಕುಟುಕಿಗಳಂತೆ ವಾದ ಮಾಡುತ್ತಾ ಹೊಳೆಯ ದಿಕ್ಕಿನಲ್ಲಿ ನಡೆಯತೊಡಗಿದೆವು.ಕೆಂಪಗಿನ ರಾಡಿ
ನೀರು, ಕಸಕಡ್ಡಿ ಸಹಿತವಾಗಿ ಹೊಳೆ ತುಂಬಿ ಹರಿಯುತ್ತಿತ್ತು. ಅಕ್ಕಪಕ್ಕದ ಭತ್ತದ
ಗದ್ದೆಗಳು ಮುಳುಗಿಹೋಗಿದ್ದವು. ನಮಗೆಲ್ಲಾ ಸುರಿವ ಮಳೆ, ಹರಿವ ಹೊಳೆ ಅದೇನೋ ಪುಳಕ
ತರುತ್ತಿತ್ತು. ಊರಿನ ದನಕರುಗಳನ್ನು ಅಟ್ಟಿಸಿಕೊಂಡು ಬಂದ ದನ ಕಾಯುವ ಶಣ್ಯ ನಮ್ಮನ್ನು
ಹೊಳೆಯಿಂದ ದೂರ ಇರಲು ಹೇಳಿದನು.
ನಾಲ್ಕು
ದಿನಗಳ ಹಿಂದೆ ಹೊಳೆ ಅಂಚಿನಲ್ಲಿ ಹುಲ್ಲು ಮೇಯುತ್ತಿದ್ದ ಎಮ್ಮೆ ಮಣಕವೊಂದು ಮಣ್ಣು
ಹಿಸಿದು ಹೊಳೆಗೆ ಬಿದ್ದಿತ್ತು. ತೇಲುತ್ತಾ,ಈಜುತ್ತಾ ಬಿದಿರು ಮಟ್ಟಿಯಲ್ಲಿ ಸಿಕ್ಕಿಕೊಂಡ
ಅದನ್ನು ಬದುಕಿಸಲು ಊರಿನವರೆಲ್ಲಾ ಸೇರಿ ಹರಸಾಹಸ ಮಾಡಬೇಕಾಯಿತು. ಶಣ್ಯನ ತಲೆಯ ಮೇಳೆ
ಬಿದಿರಿನ ಕಳಲೆಯ ನಾಲ್ಕು ತುಂಡುಗಳಿದ್ದವು. ಅಲ್ಲೇ ಇದ್ದ ಕೊಡಸಿನ ಮರದ ದಬ್ಬಣದಂತಹ
ಕಾಯನ್ನು ಕೀಳತೊಡಗಿದ. ಕೊಡಸು ಎಷ್ಟೆಲ್ಲಾ ಔಷಧಿಗಳ ಆಗರ.ಇದರ ತೊಗಟೆಯ ಕಷಾಯ
ಹೊಟ್ಟೆಯುರಿತ, ಭೇದಿ, ಜ್ವರ, ನಂಜು ಏನೆಲ್ಲಾ ಕಾಯಿಲೆಗಳಿಗೆ ರಾಮಬಾಣ. ಮಳೆಗಾಲದಲ್ಲಿ
ಇದು ಹೂ, ಕಾಯಿಗಳನ್ನು ಬಿಡುತ್ತದೆ.ಇದರ ಹೂವಿನ ತಂಬುಳಿ, ಕಾಯಿರಸಗಳು ತುಂಬಾ ರುಚಿ.
ಕೊಡಸಿನ ಕಾಯಿ ತುಂಬಾ ಕಹಿ. ಆದರೆ ಅದನ್ನು ಹುರಿದು ಮಾಡುವ ಪಲ್ಯ ನೆನೆಸಿಕೊಂಡರೆ
ಬಾಯಲ್ಲಿ ನೀರೂರುತ್ತದೆ.ವರ್ಷದಲ್ಲಿ ಒಮ್ಮೆ ಇದರ ಪದಾರ್ಥಗಳನ್ನ ಮಲೆನಾಡಿಗರು ತಿಂದೇ
ತಿನ್ನುತ್ತಾರೆ.
ನಮ್ಮಿಂದ
ತಪ್ಪಿಸಿಕೊಂಡಿದ್ದ ಮಂಜನನ್ನು ಕೂಗುತ್ತಾ ಸುತ್ತಲಿನ ಕಾಡಿನಲ್ಲಿ ಹುಡುಕತೊಡಗಿದೆವು.
ಮಂಜ ನಮ್ಮನ್ನೆಲ್ಲಾ ಬಿಟ್ಟು ಏನೋ ವಾಸನೆ ಹಿಡಿದು ಕಾಡಿನಲ್ಲಿ ಕಣ್ಮರೆಯಾಗಿದ್ದ. ನಾವು
ಕೂಕೂ ಎಂದು ಕೂಗು ಹಾಕುತ್ತಾ ಅವನ ಪ್ರತಿ ಸಿಳ್ಳೆಯನ್ನು ಅನುಸರಿಸಿ ಅವನಿದ್ದಲ್ಲಿಗೇ
ಹೋದೆವು. ಮುರಿದುಬಿದ್ದ ಕೊಳೆತ ಮರದ ಬಳಿ ಅದೇನೋ ಗೆಬರುತ್ತಿದ್ದ ಇಶ್ಶೀ. ‘‘ಆ ಕೊಳೆತ
ಮರದೊಳಗೆ ಏನೈತಿ ಅಂತ ಹುಡುಕಾಡುತ್ತೀಯೋ, ಹಾವಿನ ಮರಿ, ಚೇಳು ಎಂತಾರು ಕಚ್ಚುತ್ತೈತಿ
ನೋಡು’’ ಎಂದು ಹೇಳುತ್ತಾ ಅವನ ಸುತ್ತಲೂ ನಿಂತೆವು.
ಆದರೂ ಆತ
ಗೆಬರುತ್ತಲೇ ಇದ್ದ. ಅದೊಂದು ಕೊಳತು ಬಿದ್ದ ಕೌಲುಮರ. ಅದರೊಳಗೆಲ್ಲಾ ಗೆದ್ದಲು ತಿಂದು
ಬಿದ್ದಿರಬೇಕು. ಟೊಳ್ಳಾದ ಅದರ ಹೊಟ್ಟೆಯ ಒಳಗೆ ಬಿಳಿಬಿಳಿ ಪುಟ್ಟ ಪುಟ್ಟ ಅಣಬೆಗಳು
ಅರೆಬಿರಿದು ನಗುತ್ತಿದ್ದವು. ಮಂಜ ಒಂದೇ ಸಮನೆ ಅವನ್ನೆಲ್ಲಾ ಕೊಯ್ಯುತ್ತಾ ಕಂಬಳಿಯ
ಮಡಿಲೊಳಗೆ ಸೇರಿಸುತ್ತಿದ್ದ.‘‘ಇದು ತಿನ್ನಾ ಅಣಬಿ. ಇದರ ಸಾರು, ಪಲ್ಲೆ ಬಾಳ ರುಚಿ
ಆಕೈತಿ. ಇದನ್ನು ಇವತ್ತೇ ಕಿತ್ಕಣಾದಿದ್ರೆ ನಾಳಿ ಮುಂಜಾವಕ್ಕೆ ಇರಕಲ್ಲ’’ ಮಂಜ ನಮ್ಮನ್ನು
ನೋಡದೆ ಕೆಲಸ ಮುಂದುವರಿಸಿದ.
‘‘ಏಯ್ ಮಂಜ, ಇದು ಶಿಯ್ಯಿ (ಸಿಹಿ) ಇರೆತತನ’’ ಎನುತ್ತಾ ಅರುಣ ಒಂದು ಪುಟ್ಟ ಅಣಬೆಯನ್ನು ಕಿತ್ತು ಬಾಯಿಗೆ ಹಾಕಿಕೊಂಡ.
‘‘ಏಯ್ ಮಳ್ಳು, ತುಪ್ಪುತುಪ್ಪು.. ಹಸಿ ಅಣುಬಿ ತಿನ್ನಬಾರ್ದು, ತುಪ್ಪುತುಪ್ಪು....ಹಸಿ ಅಣಬಿ ವಿಷ ಇರೆತೈತಿ ತುಪ್ಪೊ ಪೂರ್ತಿ ತುಪ್ಪು’’ಎನ್ನುತ್ತಾ ಅದನ್ನು ಪೂರ್ತಿ ತುಪ್ಪಿಸಿದ ಮಂಜ ಮಳೆನೀರನ್ನು ಅರುಣನ ಬಾಯಿಗೆ ಹಾಕಿಸಿ ತುಪ್ಪಿಸಿದ.
ಮಂಜ ಅಣಬಿಯ ಸಾರು, ಪಲ್ಯ ಮಾಡುವುದು ಹೇಗೆಂದು ಹೇಳತೊಡಗಿದ. ಈ ಅಣಬಿಗಳು ವಿಚಿತ್ರ ಜೀವಿಗಳು. ಒಂದರಿಂದ ನಾಲ್ಕು ದಿನಗಳಲ್ಲಿ ತಮ್ಮೆಲ್ಲಾ ಜೀವನವನ್ನೇ ಮುಗಿಸುತ್ತವೆ. ಇವುಗಳಲ್ಲಿ ಎಷ್ಟೊಂದು ಬಣ್ಣ, ಎಷ್ಟೊಂದು ವಿಧಗಳಿವೆ. ಬಹಳಷ್ಟು ವಿಷಮಯ.ಬಿಳಿ ಹೆಗ್ಗೆಲ್ಲು, ಕರೆ ಹೆಗ್ಗೆಲ್ಲು, ಎಣ್ಣ್‌ಣುಬೆಗಳನ್ನು ಮಾತ್ರ ಮಲೆನಾಡಿನಲ್ಲಿ ತಿನ್ನುತ್ತಾರೆ. ಎಣ್ಣ್‌ಣಬೆ, ಚೂರು ಮಾಡಿದ ಬ್ರೆಡ್ಡಿನ ತುಂಡಿನಂತಿರುತ್ತದೆ.ಇದನ್ನು ಕಿತ್ತು ತೊಳೆದು ಉಪ್ಪು, ಹುಳಿ, ಈರುಳ್ಳಿಯೊಂದಿಗೆ ಚೆನ್ನಾಗಿ ಹುರಿಯುತ್ತಾರೆ. ಅದಕ್ಕೆ ಸೂಜಿಮೆಣಸಿನ ಖಾರ, ಸಾಂಬಾರುಪುಡಿ ಹಾಕಿ ಅರೆದು ಬೇಯಿಸಿ ಸಾರು ಮಾಡುತ್ತಾರೆ. ಮೃದುವಾಗಿ ಬೇಯುವ ಈ ಅಣಬೆ ಸಾರು ಥೇಟ್ ಹೂಕೋಸಿನ ಸಾರಿನಂತಿರುತ್ತದೆ.
‘‘ಏಯ್ ಮಳ್ಳು, ತುಪ್ಪುತುಪ್ಪು.. ಹಸಿ ಅಣುಬಿ ತಿನ್ನಬಾರ್ದು, ತುಪ್ಪುತುಪ್ಪು....ಹಸಿ ಅಣಬಿ ವಿಷ ಇರೆತೈತಿ ತುಪ್ಪೊ ಪೂರ್ತಿ ತುಪ್ಪು’’ಎನ್ನುತ್ತಾ ಅದನ್ನು ಪೂರ್ತಿ ತುಪ್ಪಿಸಿದ ಮಂಜ ಮಳೆನೀರನ್ನು ಅರುಣನ ಬಾಯಿಗೆ ಹಾಕಿಸಿ ತುಪ್ಪಿಸಿದ.
ಮಂಜ ಅಣಬಿಯ ಸಾರು, ಪಲ್ಯ ಮಾಡುವುದು ಹೇಗೆಂದು ಹೇಳತೊಡಗಿದ. ಈ ಅಣಬಿಗಳು ವಿಚಿತ್ರ ಜೀವಿಗಳು. ಒಂದರಿಂದ ನಾಲ್ಕು ದಿನಗಳಲ್ಲಿ ತಮ್ಮೆಲ್ಲಾ ಜೀವನವನ್ನೇ ಮುಗಿಸುತ್ತವೆ. ಇವುಗಳಲ್ಲಿ ಎಷ್ಟೊಂದು ಬಣ್ಣ, ಎಷ್ಟೊಂದು ವಿಧಗಳಿವೆ. ಬಹಳಷ್ಟು ವಿಷಮಯ.ಬಿಳಿ ಹೆಗ್ಗೆಲ್ಲು, ಕರೆ ಹೆಗ್ಗೆಲ್ಲು, ಎಣ್ಣ್‌ಣುಬೆಗಳನ್ನು ಮಾತ್ರ ಮಲೆನಾಡಿನಲ್ಲಿ ತಿನ್ನುತ್ತಾರೆ. ಎಣ್ಣ್‌ಣಬೆ, ಚೂರು ಮಾಡಿದ ಬ್ರೆಡ್ಡಿನ ತುಂಡಿನಂತಿರುತ್ತದೆ.ಇದನ್ನು ಕಿತ್ತು ತೊಳೆದು ಉಪ್ಪು, ಹುಳಿ, ಈರುಳ್ಳಿಯೊಂದಿಗೆ ಚೆನ್ನಾಗಿ ಹುರಿಯುತ್ತಾರೆ. ಅದಕ್ಕೆ ಸೂಜಿಮೆಣಸಿನ ಖಾರ, ಸಾಂಬಾರುಪುಡಿ ಹಾಕಿ ಅರೆದು ಬೇಯಿಸಿ ಸಾರು ಮಾಡುತ್ತಾರೆ. ಮೃದುವಾಗಿ ಬೇಯುವ ಈ ಅಣಬೆ ಸಾರು ಥೇಟ್ ಹೂಕೋಸಿನ ಸಾರಿನಂತಿರುತ್ತದೆ.
ಬಿಳಿ
ಹೆಗ್ಗೆಲ್ಲು, ಕರೆ ಹೆಗ್ಗೆಲ್ಲು ಅಣಬೆಗಳು ವರ್ಲೆ ಹುತ್ತದ ಮೇಲೆ ಹೂವಿನಂತೆ
ಬೆಳೆಯುತ್ತವೆ. ಅದಕ್ಕಾಗಿಯೇ ಇದನ್ನು ‘ಹುತ್ತದ ಹೂವು’ ಎಂದೂ ಕರೆಯುತ್ತಾರೆ. ಹಿಂದಿನ
ದಿನ ಮೊಗ್ಗು ನೋಡಿದವರು ಮರುದಿನ ಮುಂಜಾನೆ ನಿಂಬೆಗಾತ್ರದಲ್ಲಿ ಅರೆಬಿರಿದ ಹೂವಿನಂತೆ
ನಳನಳಿಸುವ ಪುಟ್ಟ ಪುಟ್ಟ ನಕ್ಷತ್ರದಂತಿರುವ ಈ ಅಣಬೆಗಳನ್ನು ಕಿತ್ತು ಪಲ್ಯಕ್ಕೋಸ್ಕರ
ತರುತ್ತಾರೆ.
ಅದು
ಹಸಿಯಿರುವಾಗ ವಿಷವೆನ್ನುವ ಕಾರಣಕ್ಕೆ ಎಮ್ಮೆ, ದನಗಳು ತಿನ್ನುವುದಿಲ್ಲವಂತೆ.
ಕಾಡುಮೇಡುಗಳಲ್ಲಿ ಬಿದ್ದು ಕೊಳೆತ ಮರಗಳನ್ನು, ಹುತ್ತಗಳನ್ನು ಹುಡುಕುತ್ತಾ ಕೆಲವರು
ದಿನವೆಲ್ಲಾ ಅಲೆಯುತ್ತಾರೆ.ಚಿಕ್ಕ ಕುರುಹುಗಳನ್ನು ಗುರುತಿಸಿ ಮರುದಿನವೇ ಬೆಳೆದು
ನಿಲ್ಲುವ ಅಣಬೆ ಹೂಗಳನ್ನು ಕಿತ್ತು ತರುತ್ತಾರೆ. ವರ್ಷಕ್ಕೊಮ್ಮೆ ಮಾತ್ರ ಅಪರೂಪವಾಗಿ
ಸಿಗುವ ಇದು ಅಷ್ಟೊಂದು ಇಷ್ಟದ ಪದಾರ್ಥ. ಇತ್ತೀಚೆಗೆ ಅದಕ್ಕೆ ಬೆಲೆಯೂ ಜಾಸ್ತಿಯಾದ ಕಾರಣ
ಮಾರಾಟಗಾರರೂ ಹೆಚ್ಚಿದ್ದಾರೆ.
ಅಷ್ಟರಲ್ಲಿ
ನಮ್ಮಂದಿಗೆ ಇದ್ದ ಚಂದ್ರಂಗೆ ಹೊಳೆಗೇರು ಮರದಾಗೆ ಚಿಗಳಿಗಳ ಗೂಡು ಕಾಣಿಸಿತು. ಸರಸರನೆ
ಮರ ಹತ್ತಿದ ಅವನು ಜಾರಿ ಕಂಬಳಕೊಪ್ಪೆಯೊಂದಿಗೆ ದಡ್ ಎಂದು ನೆಲಕ್ಕೆ ಬಿದ್ದ. ನಾವೆಲ್ಲಾ
ಅವನನ್ನು ಎತ್ತಿ ನಿಲ್ಲಿಸಿದೆವು. ಅಂಡು ಜಜ್ಜಿದಂತೆ ಆಗಿತ್ತು.ಪೆಟ್ಟೇನು
ಆಗಿರಲಿಲ್ಲ.ಮಂಜ ಅಣಬಿ ಕಿತ್ತಿದ್ದಕ್ಕಾಗಿ ತಾನೂ ಚಿಗಳಿ ಕೊಟ್ಟೆ ಕಿತ್ತು ಶೂರ
ಅನ್ನಿಸ್ಕೋಬೇಕಂತಿದ್ದ.ಪಾಪ, ನಾವೆಲ್ಲಾ ಮತ್ತೆ ಮರ ಹತ್ತದಂತೆ ತಡೆದೆವು.
ಹಾಂ..
ಚಿಗಳಿ ಚಟ್ನಿ, ಕಾರೇಡಿ ಚಟ್ನಿ, ಕ್ವಾರೆ ಮೀನಿನ ಸಾರು, ಆದ್ರೆ ಮಳೆ ಹಬ್ಬ, ಸೀತಾಳಿ
ದಂಡೆ, ವೆಲ್ವೆಟ್ ಹುಳು ಸಾಕಿದ್ದು, ನೀರಹಾವು ಹಿಡಿದಿದ್ದು, ಕಾಳಿಂಗನ ಮೊಟ್ಟೆ
ನೋಡಿದ್ದು, ದಾರಿ ತಪ್ಪಿಸೋ ಬಳ್ಳಿ ಮುಟ್ಟಿ ಇಡೀ ದಿನ ಕಾಡುಮೆಳೆಯೊಳಗೆ ಅಲೆದಾಡಿದ್ದು
ಇವೆಲ್ಲಾ. ಇನ್ನೂ ಏನೆಲ್ಲಾ ಮಳೆ ಬಂದ ಕಾರಣ ನೆನಪಾಗ್ತಾ ಇರ್ತದೆ. ಮುಂದಿನ ಮಳೆಗಾಲದಾಗೆ
ಅದ್ರ ಕತೆ ಹೇಳ್ತೀನಿ.
ಈ ವರ್ಷ ಮಳೆಗಾಲ್ದಾಗೆ ನಮ್ಮೂರಿಗೆ ಬಂದ್ರೆ ಬ್ಯಾರೆ ಕತೆ ಸಿಕ್ಕಬೋದು, ನೀವೆಲ್ಲಾ ಬರ್ರಿ.
ಈ ವರ್ಷ ಮಳೆಗಾಲ್ದಾಗೆ ನಮ್ಮೂರಿಗೆ ಬಂದ್ರೆ ಬ್ಯಾರೆ ಕತೆ ಸಿಕ್ಕಬೋದು, ನೀವೆಲ್ಲಾ ಬರ್ರಿ.
ಭಾರತೀಯ ವಿದ್ಯಾರ್ಥಿಯ ಚಿಕಿತ್ಸೆಗಾಗಿ ಶಾಲೆಯಲ್ಲಿ ಸಂಗೀತ ಕಾರ್ಯಕ್ರಮ
ದುಬೈ:ಇಲ್ಲಿನ
ರಶೀದ್ ಆಸ್ಪತ್ರೆಯಲ್ಲಿ ಎಂಟು ವರ್ಷ ಪ್ರಾಯದ ಭಾರತೀಯ ಹೈಸ್ಕೂಲ್ ವಿದ್ಯಾರ್ಥಿ ಸೌರವ್
ನಾಯರ್ ಒಂದು ತಿಂಗಳಿಂದ ಮೆದುಳಿನ ಗಡ್ಡೆಗೆ ಚಿಕಿತ್ಸೆ
ಪಡೆಯುತ್ತಿದ್ದಾನೆ.ಸೌರವ್‌ನನ್ನು ಕೇವಲ ಐದು ದಿನಗಳ ಕಾಲ ವೆಂಟಿಲೇಟರ್‌ನಿಂದ
ಹೊರಗಿಡಲಾಗಿತ್ತು.ಆಗ ಆತನಿಗೆ ಸಮಸ್ಯೆಗಳು ಎದುರಾಯಿತು. ಹಾಗಾಗಿ, ಮತ್ತೆ ಆತನನ್ನು
ವೆಂಟಿಲೇಟರ್‌ನಲ್ಲಿ ಇಡಲಾಯಿತು. ಆತನ ಚಿಕಿತ್ಸೆ ದುಬೈಯಲ್ಲಿ ಇನ್ನೂ ಸುದೀರ್ಘ ಸಮಯ
ನಡೆಯಬೇಕಾಗಿದೆ.ಚಿಕಿತ್ಸೆಗೆ ಹಣ ಹೊಂದಿಸುವುದಕ್ಕಾಗಿ ಆತನ ಶಾಲೆ ಜೂನ್ 15ರಂದು ತನ್ನ
ಅಲ್ ಗಾರ್ಹುಡ್ ಶಾಲಾ ಆಡಿಟೋರಿಯಂನಲ್ಲಿ ಸಂಗೀತ ಸಮ್ಮೇಳನವೊಂದನ್ನ್ನು
ಏರ್ಪಡಿಸಿದೆ.ಸಂಗಿತ ಸಮ್ಮೇಳನ ಸಂಜೆ 6:30ರಿಂದ 9 ಗಂಟೆಯವರೆಗೆ ನಡೆಯಲಿದೆ.
ಮುಂದಿನ ದಶಕದಲ್ಲಿ ಅರಬ್ ಜಗತ್ತಿಗೆ 7.5 ಹುದ್ದೆಗಳ ಅವಶ್ಯಕತೆ
ಮನಾಮ:
ಮುಂದಿನ ದಶಕದಲ್ಲಿ ಅರಬ್ ಜಗತ್ತು ಬರೋಬ್ಬರಿ 7.5 ಕೋಟಿ ಹುದ್ದೆಗಳನ್ನು
ಸೃಷ್ಟಿಸಬೇಕಾಗುತ್ತದೆ. ಇದು ಈಗ ಇರುವುದಕ್ಕಿಂತ 40 ಶೇ. ಅಧಿಕವಾಗಿದೆ. ವೇಗವಾಗಿ
ಬೆಳೆಯುತ್ತಿರುವ ಜನಸಂಖ್ಯೆ ಹಾಗೂ ಯುವಜನತೆ ಕೆಲಸ ಮಾಡಲು ಸಿದ್ಧವಾಗುವ ಹೊತ್ತಿಗೆ
ಉದ್ಯೋಗ ಸೃಷ್ಟಿ ನಡೆಸಬೇಕಾಗಿದೆ ಎನ್ನಲಾಗಿದೆ.ಆದಾಗ್ಯೂ, ಉದ್ಯೋಗಗಳು ಮತ್ತು
ಕೌಶಲ್ಯಗಳಿಗೆ ಹೊಂದಾಣಿಕೆಯಿಲ್ಲದ ಪರಿಸ್ಥಿತಿ ಈಗ ಇರುವ ಹಿನ್ನೆಲೆಯಲ್ಲಿ ಬೃಹತ್ ಉದ್ಯೋಗ
ಸೃಷ್ಟಿಯ ಗುರಿಯನ್ನು ಸಾಧಿಸುವುದು ಅಸಾಧ್ಯವೆಂದು ಭಾವಿಸಲಾಗಿದೆ.ಅರಬ್ ಜಗತ್ತಿನ ಯುವ
ನಿರುದ್ಯೊಗ ಸಮಸ್ಯೆಯನ್ನು ಮುಂಚೂಣಿ ಉದ್ಯೋಗದಾತರು ಯಾವ ರೀತಿಯಲ್ಲಿ ಕಡಿಮೆ ಮಾಡಬಹುದು
ಎಂಬ ಬಗ್ಗೆ ಮ್ಯಾನೇಜ್‌ಮೆಂಟ್ ಸಲಹಾ ಸಂಸ್ಥೆ ‘ಬೂಝ್ ಆ್ಯಂಡ್ ಕಂಪೆನಿ’ ವಿಶ್ವ ಹಣಕಾಸು
ವೇದಿಕೆ ಮತ್ತು ಸೌದಿ ಬೇಸಿಕ್ ಇಂಡಸ್ಟ್ರಿಸ್ ಕಾರ್ಪೊರೇಶನ್ ಸಹಭಾಗಿತ್ವದಲ್ಲಿ
ಅಧ್ಯಯನವೊಂದನ್ನು ಕೈಗೆತ್ತಿಕೊಂಡಿತು.
ಯುವಕರ
ನಿರುದ್ಯೋಗ ಪ್ರಮಾಣ ಈಗ 24.9 ಶೇ. ದಷ್ಟಿದೆ.ಆರು ಜಿಸಿಸಿ ದೇಶಗಳು (ಬಹರೈನ್, ಕುವೈತ್,
ಒಮನ್, ಕತರ್, ಸೌದಿ ಅರೇಬಿಯ ಮತ್ತು ಯುಎಇ) ವಿಶ್ವದಲ್ಲೇ ಅಧಿಕ ನಿರುದ್ಯೋಗ ದರವನ್ನು
ಹೊಂದಿವೆ ಎಂದು ವಿಶ್ವಬ್ಯಾಂಕ್‌ನ ಅಂಕಿಅಂಶಗಳು ತಿಳಿಸುತ್ತವೆ.ಅರಬ್ ಜಗತ್ತಿನ ಅರ್ಧಕ್ಕೂ
ಹೆಚ್ಚಿನ ಜನಸಂಖ್ಯೆ 25ವರ್ಷಕ್ಕಿಂತ ಕೆಳಗಿನದು. ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ
ನಿರುದ್ಯೋಗ ಪ್ರಮಾಣವನ್ನು ನಿಭಾಯಿಸಲು ಹೊಸ ಕಲ್ಪನೆಯೊಂದರ ಅಗತ್ಯವಿದೆ. ಈ ನಿಟ್ಟಿನಲ್ಲಿ
ಸಂಭಾವ್ಯ ಹುದ್ದೆಗಳನ್ನು ಗುರುತಿಸಬೇಕಾಗಿದೆ ಹಾಗೂ ಬಳಿಕ ಕೌಶಲವನ್ನು ನೀಡುವುದಕ್ಕಾಗಿ
ಸೂಕ್ತ ತರಬೇತಿ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ.
ಈ
ಕಾರ್ಯಕ್ರಮದಲ್ಲಿ ಸರಕಾರ,ವಾಣಿಜ್ಯೋದ್ಯಮ,ಮತ್ತು ಶೈಕ್ಷಣಿಕ ತಜ್ಞರು ಜೊತೆಗೂಡಿ
ಕೌಶಲಗಳನ್ನು ಸಮನ್ವಯ ಗೊಳಿಸಬೇಕಾಗಿದೆ.ಹಾಗೂ ಆ ಮೂಲಕ ನೂತನ ಯೋಜನೆಗಳ ಗರಿಷ್ಠ
ಪ್ರಯೋಜನಗಳಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡ ಬೇಕಾಗಿದೆ.ಉದ್ಯೋಗ ಸೃಷ್ಟಿಯಲ್ಲಿ
ಸರಕಾರಗಳಲ್ಲದೆ ಬೃಹತ್ ಉದ್ಯೋಗದಾತರು ಮಹತ್ವದ ಪಾತ್ರಗಳನ್ನು ನಿರ್ವಹಣೆ ಮಾಡಬಹುದಾಗಿದೆ.
‘‘ತಮ್ಮ
ಸಂಘಟನೆಗಳಲ್ಲಿ ಹಾಗೂ ತಮ್ಮ ಪೂರೈಕೆದಾರರ ನಿರ್ಧಾರಗಳಲ್ಲಿ ಪ್ರಭಾವ ಬೀರುವ ಅಧಿಕಾರವನ್ನು
ಅವರು ಹೊಂದಿರುತ್ತಾರೆ ಹಾಗೂ ಆ ಮೂಲಕ ಅಗತ್ಯ ಹುದ್ದೆಗಳಿಗೆ ರಾಷ್ಟ್ರೀಯ ಪ್ರತಿಭೆಯನ್ನು
ನಿರ್ಮಿಸುವ ಸಾಮರ್ಥ್ಯ ಅವರಲ್ಲಿದೆ’’ ಎಂದು ಬೂಝ್ ಆ್ಯಂಡ್ ಕಂಪನಿಯ ಪಾಲುದಾರ ಸಮೀರ್
ಬೊಹ್‌ಸಾಲಿ ಹೇಳುತ್ತಾರೆ.ಕ್ಷಿಪ್ರ ಉದ್ಯೋಗಾವಕಾಶವನ್ನು ಒದಗಿಸುವ ಹುದ್ದೆಗಳನ್ನು
ಗುರುತಿಸಲು ವಾಣಿಜ್ಯೋದ್ಯಮಗಳು ಮತ್ತು ಶಿಕ್ಷಣ ಕ್ಷೇತ್ರಗಳು ಸರಕಾರದ ಜೊತೆಗೆ
ಕೈಜೋಡಿಸಬೇಕಾಗುತ್ತದೆ.
ಮಂಗಳವಾರ, ಜೂನ್ 19, 2012
Mangalore: Police Nab Inter-state Gang of Thieves, Recover Stolen Goods
Mangalore, Jun 19: Police have arrested seven persons, including three women, in connection with recent inter-state thefts, informed SP Abhishek Goyal at a press meet here on Tuesday June 19.
Mangalore, Jun 19: Police have arrested seven persons, including three women, in connection with recent inter-state thefts, informed SP Abhishek Goyal at a press meet here on Tuesday June 19.
Three special police squads formed by SP Abhishek Goyal arrested the
seven near Bantwal-Kadur highway near Charmady village of Beltangady
taluk on June 4, he said.
The arrested are N Basavaraj (23), N Lokesh (24), Saroja (44),
Kavitha (28), Ratna (35), Shreenivas (25) and Ganesh (25), all residents
of Tamil Nadu.
SP Goyal said that the arrested were involved in a robbery case wherein complainant Bharath Singh, while traveling from Dharmasthala to Ujire on May 30, was looted of Rs 6,640, an ATM card and a Samsung mobile phone.
SP Goyal said that the arrested were involved in a robbery case wherein complainant Bharath Singh, while traveling from Dharmasthala to Ujire on May 30, was looted of Rs 6,640, an ATM card and a Samsung mobile phone.
Goyal also said that the accused were involved in dacoity cases in
states like Tamil Nadu, Andra Pradesh and Maharashtra. Also, the accused
were charged under 229/2007 Sec 41(1)(D), 102 CRPC and Sec 379 IPC in
Maloor poice station of Kolar district.
Inter-state thief arrested
SP Abhishek Goyal informed that DCIB police have arrested K R
Santanam alias Chandran alias Antony (47), resident of Coimbatore
district of Tamil Nadu on charges of looting houses in and around
Puttur. One-and-a-half kg of silver, 70 grams gold, a mobile handset, a
laptop, a gas cutter and a weighing machine have been seized from his
possession. The police recovered the stolent items from a house in
Kannur where the accused had taken refuge. The total value of the
recovered materials is estimated at Rs 3,50,000. He is now lodged in
Puttur town police station.
From the records, the SP said, it was revealed that the accused was
involved in temple theft cases that took place in Moodbidri in 2003, and
that he was housed in Mysore jail three years ago. He was released in
2007, after which he began thieving houses in Puttur in the year
2010-2011.
The SP said warrants were issued against him by the Vittal police and Kasargod police on charges of theft.
The SP said warrants were issued against him by the Vittal police and Kasargod police on charges of theft.
When enquired about the Sullia Meera Balakrishnan murder case of
2008, Goyal said the police arrested five in connection with the case,
and that they have been handed over to the CID which is handling the
investigation.
On the recent murders in Puttur of a woman and three children
allegedly by the head of the family Venkataramana Bhat, Goyal said
investigations are on but no progress had been made yet.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)