ಗುರುವಾರ, ಜೂನ್ 21, 2012

ಮುಂದಿನ ದಶಕದಲ್ಲಿ ಅರಬ್ ಜಗತ್ತಿಗೆ 7.5 ಹುದ್ದೆಗಳ ಅವಶ್ಯಕತೆ

ಮನಾಮ: ಮುಂದಿನ ದಶಕದಲ್ಲಿ ಅರಬ್ ಜಗತ್ತು ಬರೋಬ್ಬರಿ 7.5 ಕೋಟಿ ಹುದ್ದೆಗಳನ್ನು ಸೃಷ್ಟಿಸಬೇಕಾಗುತ್ತದೆ. ಇದು ಈಗ ಇರುವುದಕ್ಕಿಂತ 40 ಶೇ. ಅಧಿಕವಾಗಿದೆ. ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆ ಹಾಗೂ ಯುವಜನತೆ ಕೆಲಸ ಮಾಡಲು ಸಿದ್ಧವಾಗುವ ಹೊತ್ತಿಗೆ ಉದ್ಯೋಗ ಸೃಷ್ಟಿ ನಡೆಸಬೇಕಾಗಿದೆ ಎನ್ನಲಾಗಿದೆ.ಆದಾಗ್ಯೂ, ಉದ್ಯೋಗಗಳು ಮತ್ತು ಕೌಶಲ್ಯಗಳಿಗೆ ಹೊಂದಾಣಿಕೆಯಿಲ್ಲದ ಪರಿಸ್ಥಿತಿ ಈಗ ಇರುವ ಹಿನ್ನೆಲೆಯಲ್ಲಿ ಬೃಹತ್ ಉದ್ಯೋಗ ಸೃಷ್ಟಿಯ ಗುರಿಯನ್ನು ಸಾಧಿಸುವುದು ಅಸಾಧ್ಯವೆಂದು ಭಾವಿಸಲಾಗಿದೆ.ಅರಬ್ ಜಗತ್ತಿನ ಯುವ ನಿರುದ್ಯೊಗ ಸಮಸ್ಯೆಯನ್ನು ಮುಂಚೂಣಿ ಉದ್ಯೋಗದಾತರು ಯಾವ ರೀತಿಯಲ್ಲಿ ಕಡಿಮೆ ಮಾಡಬಹುದು ಎಂಬ ಬಗ್ಗೆ ಮ್ಯಾನೇಜ್‌ಮೆಂಟ್ ಸಲಹಾ ಸಂಸ್ಥೆ ‘ಬೂಝ್ ಆ್ಯಂಡ್ ಕಂಪೆನಿ’ ವಿಶ್ವ ಹಣಕಾಸು ವೇದಿಕೆ ಮತ್ತು ಸೌದಿ ಬೇಸಿಕ್ ಇಂಡಸ್ಟ್ರಿಸ್ ಕಾರ್ಪೊರೇಶನ್ ಸಹಭಾಗಿತ್ವದಲ್ಲಿ ಅಧ್ಯಯನವೊಂದನ್ನು ಕೈಗೆತ್ತಿಕೊಂಡಿತು.
ಯುವಕರ ನಿರುದ್ಯೋಗ ಪ್ರಮಾಣ ಈಗ 24.9 ಶೇ. ದಷ್ಟಿದೆ.ಆರು ಜಿಸಿಸಿ ದೇಶಗಳು (ಬಹರೈನ್, ಕುವೈತ್, ಒಮನ್, ಕತರ್, ಸೌದಿ ಅರೇಬಿಯ ಮತ್ತು ಯುಎಇ) ವಿಶ್ವದಲ್ಲೇ ಅಧಿಕ ನಿರುದ್ಯೋಗ ದರವನ್ನು ಹೊಂದಿವೆ ಎಂದು ವಿಶ್ವಬ್ಯಾಂಕ್‌ನ ಅಂಕಿಅಂಶಗಳು ತಿಳಿಸುತ್ತವೆ.ಅರಬ್ ಜಗತ್ತಿನ ಅರ್ಧಕ್ಕೂ ಹೆಚ್ಚಿನ ಜನಸಂಖ್ಯೆ 25ವರ್ಷಕ್ಕಿಂತ ಕೆಳಗಿನದು. ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಪ್ರಮಾಣವನ್ನು ನಿಭಾಯಿಸಲು ಹೊಸ ಕಲ್ಪನೆಯೊಂದರ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಂಭಾವ್ಯ ಹುದ್ದೆಗಳನ್ನು ಗುರುತಿಸಬೇಕಾಗಿದೆ ಹಾಗೂ ಬಳಿಕ ಕೌಶಲವನ್ನು ನೀಡುವುದಕ್ಕಾಗಿ ಸೂಕ್ತ ತರಬೇತಿ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ.
ಈ ಕಾರ್ಯಕ್ರಮದಲ್ಲಿ ಸರಕಾರ,ವಾಣಿಜ್ಯೋದ್ಯಮ,ಮತ್ತು ಶೈಕ್ಷಣಿಕ ತಜ್ಞರು ಜೊತೆಗೂಡಿ ಕೌಶಲಗಳನ್ನು ಸಮನ್ವಯ ಗೊಳಿಸಬೇಕಾಗಿದೆ.ಹಾಗೂ ಆ ಮೂಲಕ ನೂತನ ಯೋಜನೆಗಳ ಗರಿಷ್ಠ ಪ್ರಯೋಜನಗಳಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡ ಬೇಕಾಗಿದೆ.ಉದ್ಯೋಗ ಸೃಷ್ಟಿಯಲ್ಲಿ ಸರಕಾರಗಳಲ್ಲದೆ ಬೃಹತ್ ಉದ್ಯೋಗದಾತರು ಮಹತ್ವದ ಪಾತ್ರಗಳನ್ನು ನಿರ್ವಹಣೆ ಮಾಡಬಹುದಾಗಿದೆ.
‘‘ತಮ್ಮ ಸಂಘಟನೆಗಳಲ್ಲಿ ಹಾಗೂ ತಮ್ಮ ಪೂರೈಕೆದಾರರ ನಿರ್ಧಾರಗಳಲ್ಲಿ ಪ್ರಭಾವ ಬೀರುವ ಅಧಿಕಾರವನ್ನು ಅವರು ಹೊಂದಿರುತ್ತಾರೆ ಹಾಗೂ ಆ ಮೂಲಕ ಅಗತ್ಯ ಹುದ್ದೆಗಳಿಗೆ ರಾಷ್ಟ್ರೀಯ ಪ್ರತಿಭೆಯನ್ನು ನಿರ್ಮಿಸುವ ಸಾಮರ್ಥ್ಯ ಅವರಲ್ಲಿದೆ’’ ಎಂದು ಬೂಝ್ ಆ್ಯಂಡ್ ಕಂಪನಿಯ ಪಾಲುದಾರ ಸಮೀರ್ ಬೊಹ್‌ಸಾಲಿ ಹೇಳುತ್ತಾರೆ.ಕ್ಷಿಪ್ರ ಉದ್ಯೋಗಾವಕಾಶವನ್ನು ಒದಗಿಸುವ ಹುದ್ದೆಗಳನ್ನು ಗುರುತಿಸಲು ವಾಣಿಜ್ಯೋದ್ಯಮಗಳು ಮತ್ತು ಶಿಕ್ಷಣ ಕ್ಷೇತ್ರಗಳು ಸರಕಾರದ ಜೊತೆಗೆ ಕೈಜೋಡಿಸಬೇಕಾಗುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಮಹಮ್ಮದ್‌ ಆರೀಫ್‌ ಕಲ್ಕಟ್ಟ,