ಮಾ.4: ಬಾಯಾರ್ ತಂಙಳ್ ಮುಂಬಯಿಗೆ
ಮುಂಬಯಿ (ವಿಶ್ವಕನ್ನಡಿಗ ನ್ಯೂಸ್): ಇತ್ತೀಚೆಗೆ ನಿಧನರಾದ ಉಳ್ಳಾಲ ಖಾಝಿ ತಾಜುಲ್ ಉಲಮಾ ಉಳ್ಳಾಲ ತಂಙಳ್(ನ.ಮ)ರವರ ಅನುಸ್ಮರಣೆ ಕಾರ್ಯಕ್ರಮ ಮಾ.4ರಂದು ರಾತ್ರಿ 9ಕ್ಕೆ ಸುನ್ನೀ ಗಾಂಜೀ ಜಮಾತ್ ಹಾಲ್ ಡೋಂಗ್ರಿಯಲ್ಲಿ ನಡೆಯಲಿದೆ.
ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಇಂಬಿಚ್ಛಿಕೋಯಮ್ಮ ತಂಙಳ್ ಬಾಯಾರ್ ನೇತ್ವತ್ವದಲ್ಲಿ ಸಿದ್ದೀಕ್ ಸಖಾಫಿ ಆವಾಲಂ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಹಾಗೂ ಇಸ್ಮಾಯೀಲ್ ಆಂಜದಿ, ಮೋಯ್ಯಿದ್ದೀನ್ ಸಖಾಫಿ ಉಳ್ವಾರ್, ಮೊಹಮ್ಮದ್ ಸಖಾಫಿ ತೋಕೆ, ಇಬ್ರಾಹೀಂ ಝುಹುರಿ ಹಾಗೂ ತಾಜುಲ್ ಉಲಮಾ ಅನುಸ್ಮರಣೆ ಸಮಿತಿ ಮುಂಬಯಿ ಇದರ ಪದಧಿಕಾರಿಗಳು ಉಪಸ್ಥಿತರಿರುವರು. ವರದಿ: ಆರೀಫ್ ಕಲ್ಕಟ್ಟ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ಮಹಮ್ಮದ್ ಆರೀಫ್ ಕಲ್ಕಟ್ಟ,