ಹಳೆಯ ವಸ್ತುಗಳ ಮಾರಾಟ ”ಗ್ಯಾರೇಜ್ ಸೇಲ್” ವಿಶಿಷ್ಟಮಯ ಕಾರ್ಯಕ್ರಮ
http://www.vknews.in/2014/01/19/old-things/
ಮುಂಬಯಿ, ಜ.18: ದಿ ಅಸೋಸಿಯೇಶನ್ ಆಫ್ ಮೆಸಾನಿಕ್ ಲೇಡಿಸ್ ಮುಂಬಯಿ ಸೆಂಟರ್ ಸಂಸ್ಥೆಯು ಗ್ಯಾರೇಜ್ ಸೇಲ್ ಎನ್ನುವ ಸಮಾಜಪರ ಕಾಳಜಿಯ ವಿಶಿಷ್ಟಮಯ ಕಾರ್ಯಕ್ರಮವನ್ನು ಇಂದಿಲ್ಲಿ ಶನಿವಾರ ಪೂರ್ವಾಹ್ನ ಮಹಾಲಕ್ಷ್ಮೀ ಪಶ್ಚಿಮದಲ್ಲಿನ ಭುಲಭಾಯಿ ದೇಸಾಯಿ ರಸ್ತೆಯಲ್ಲಿನ ಶೆಥ್ ಜಮನ್‌ದಾಸ್ ವಸಂಜೀ ಸಭಾಗೃಹದಲ್ಲಿ ಆಯೋಜಿಸಿತ್ತು.
ನಗರದ ಅನೇಕ ಸಂಸ್ಥೆಗಳು, ವಿವಿಧೆಡೆಗಳಿಂದ ಸಂಗ್ರಹಿತ ಮಣ್ಣಿನ ಪಾತ್ರೆಗಳು, ಪಾತ್ರೆ ಪರಡಿಗಳು, ಉಪಯೋಗಿತ ಉಡಿಗೆ ತೊಡಿಗೆ, ಗೃಹಪಯೋಗಿ ವಸ್ತುಗಳು, ಮಕ್ಕಳ ಆಟಿಕೆಗಳು, ಬರವಣಿಗೆ ಸಾಮಾಗ್ರಿಗಳು ಇತ್ಯಾದಿ ಉಪಯೋಗಿಸಿ ಪುನರಪಿ ಕೆಲಸಕ್ಕೆ ಬರುವ ವಸ್ತುಗಳ ಮಾರಾಟ ಮತ್ತು ಪ್ರದರ್ಶನವನ್ನು ಆಯೋಜಿಸಿದ್ದು, ನಗರದ ಉದ್ಯಮಿ ಶೆಫಿ ನಸುರುಲ್ಲಾ ಅವರು ರಿಬ್ಬನ್ ಕತ್ತರಿಸಿ ಮೇಳವನ್ನು ಉದ್ಘಾಟಿಸಿದರು. ಬಳಿಕ ಮೆಸಾನಿಕ್ ಲೇಡಿಸ್ ಅಸೋಸಿಯೇಶನ್‌ನ ಅಧ್ಯಕ್ಷೆ ಅಸೀನಾ ನಸುರುಲ್ಲಾ ಅವರು ದೀಪ ಪ್ರಜ್ವಲಿಸಿ ವಿಧ್ಯುಕ್ತವಾಗಿ ಪ್ರದರ್ಶನಕ್ಕೆ ಚಾಲನೆಯನ್ನಿತ್ತರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕಿ ಹೀನ ಉದೇಶಿ, ಉಪಾಧ್ಯಕ್ಷೆ ಪ್ರಭಾ ಎನ್.ಸುವರ್ಣ ಸೇರಿದಂತೆ ಗೌತಮ್ ದಿವಾರ್, ಆದಿ ವಕೀಲ್, ವಿಜಯ್ ಧ್ರುವ್, ವಾಸುದೇವ್ ಮಸೂರೆಕರೆ, ಸಂಧ್ಯಾ ಧ್ರುವ್ ಮತ್ತಿತರರು ಉಪಸ್ಥಿತರಿದ್ದರು.
ಉಪಯೋಗಿತ ಎಲ್ಲಾ ವಸ್ತುಗಳು ಗಾರ್ಬೆಜ್ ಅನ್ನುವಾಗಿಲ್ಲ. ಅವುಗಳಲ್ಲಿ ಸುಮಾರು 60%ದಷ್ಟು ವಸ್ತುಗಳು ಆಥಿಕ ಅಸಾಯಕರಿಗೆ ಉಪಯೋಗಕಾರಿ ಆಗುತ್ತವೆ. ಅಂತಹ ಬಿಸಾಡುವ ಯಾವುದೇ ವಸ್ತುಗಳನ್ನು ಸಂಗ್ರಹಿಸಿ ಜನಸಾಮಾನ್ಯರಿಗೆ ಉಪಯೋಗಿಸಲು ಅನುಕೂಲವಾಗುವಲ್ಲಿ ಈ ಸಂಸ್ಥೆ ಗ್ಯಾರೇಜ್ ಸೇಲ್ ಎನ್ನುವ ಸಮಾಜಪರ ಸೇವೆಯಲ್ಲಿ ತೊಡಗಿಸಿ ಕೊಂಡಿದೆ. ಈ ಮೂಲಕ ಬರುವ ಆದಾಯದ ಸಂಪೂರ್ಣ ಮೊತ್ತವನ್ನು ವಿಶೇಷವಾಗಿ ಕ್ಯಾನ್ಸರ್ ಪೀಡಿತರಿಗೆ ನೆರವು ನೀಡುತ್ತದೆ.
ಜೀವನ ಅನಾನುಕೂಲಸ್ಥರಿಗೆ ಆಧಾರವನ್ನು ನೀಡುವ ಸೇರಿದಂತೆ ಅನೇಕಾನೇಕ ಜನಮನ ಸ್ಪಂದನೆಯ ಸೇವೆಯನ್ನು ಈ ಸಂಸ್ಥೆ ನಡೆಸುತ್ತಿದೆ. ಸಮಾಜಪರ ಕಾಳಜಿಯ ಒಲವು ಮೂಡಿಸುವ ಉದ್ದೇಶವೇ ಈ ಸಂಸ್ಥೆಯ ಒಲವು ಆಗಿದ್ದು, ಕಳೆದ ಆರು ವರ್ಷಗಳಿಂದ ನಿರಂತರವಾಗಿ ಹಮ್ಮಿಕೊಂಡು ಬರುತ್ತಿರುವ ಈ ಕಾರ್ಯಕ್ರಮದಲ್ಲಿ ಕಳೆದ ವರ್ಷ ಸುಮಾರು ಒಂದು ಲಕ್ಷಕ್ಕೂ ಅಧಿಕ ಮೊತ್ತವನ್ನು ಸಂಗ್ರಹಿಸಿ ಗುಜರಾತ್, ಮುಂಬಯಿ ಮತ್ತಿತರ ಮಹಾ ನಗರ, ಗ್ರಾಮೀಣ ಪ್ರದೇಶದ ಕ್ಯಾನ್ಸರ್ ಪೀಡಿತ ಮಕ್ಕಳು, ಅನಾರೋಗ್ಯದಿಂದ ಬಳಲುತ್ತಿರುವ ಜನತೆಗೆ ನೆರವು ನೀಡಿದ್ದೇವೆ. ಈ ವರ್ಷ ಸುಮಾರು ಲಕ್ಷ ಎರಡು ಧನ ಸಂಗ್ರಹವಾಗಿದ್ದು ಇದನ್ನು ಜನಪರ ಯೋಜನೆ, ನಿರ್ಗತಿಕರ ಅನಾರೋಗ್ಯಕ್ಕಾಗಿ ಬಳಸುತ್ತಿದ್ದೇವೆ ಎಂದು ಕೊಡುಗೈದಾನಿ, ಹೆಸರಾಂತ ಸಮಾಜ ಸೇವಕಿ ಪ್ರಭಾ ಎನ್.ಸುವರ್ಣ ತಿಳಿಸಿದರು.
ಬಾಲಿವುಡ್ ನಟ ಮಿಲಿಂದ್ ಸೋಮನ್ ಅವರು ನಮ್ಮ ಸಂಸ್ಥೆಯೊಂದಿಗೆ ಜೊತೆಗೋಡಿದ್ದು, ಕಾಲೋಟ ಉತ್ಸಾಹ (ಮ್ಯಾರಥಾನ್ ಸ್ಪಿರಿಟ್) ಸಂಪೂರ್ಣವಾಗಿ ಪಾಲ್ಗೊಂಡು ನಮ್ಮ ಕಾರ್ಯಕ್ರಮದ ಅರಿವನ್ನು ಮೂಡಿಸಿರುವರು ಎಂದು ಸಂಸ್ಥಾಪಕಿ ಹೀನ ಉದೇಶಿ ತಿಳಿಸಿದರು.
- ಆರಿಫ್ ಕಲ್ಕಟ್ಟ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ಮಹಮ್ಮದ್ ಆರೀಫ್ ಕಲ್ಕಟ್ಟ,