ದೇರಳಕಟ್ಟೆ : “ಮೀಡಿಯಾ ಮಾರ್ಕ್’ ಉದ್ಘಾಟನೆ
ಮಂಗಳೂರು, ಆ.10: ದೇರಳಕಟ್ಟೆ ಮಸೀದಿ ಬಳಿಯಿರುವ ಅಲ್ ಮದೀನಾ ಕಾಂಪ್ಲೆಕ್ಸ್‌ನಲ್ಲಿ ತೆರೆಯಲ್ಪಟ್ಟ ಮುದ್ರಣ ಮತ್ತು ಜಾಹಿರಾತು ಸಂಸ್ಥೆಯಾದ “ಮೀಡಿಯಾ ಮಾರ್ಕ್’ ರವಿವಾರ ಉದ್ಘಾಟನೆಗೊಂಡಿತು.ಮಂಜನಾಡಿ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್‌ನ ಅಧ್ಯಕ್ಷ ಶೈಖುನಾ ಪಿ.ಎಂ. ಅಬ್ಬಾಸ್ ಮುಸ್ಲಿಯಾರ್ ದುಆ ಮಾಡಿ ಶುಭ ಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಭಾರತೀಯ ಕೃಷಿಕ ಸಮಾಜದ ದ.ಕ.ಜಿಲ್ಲಾಧ್ಯಕ್ಷ ಹಾಜಿ ಹೈದರ್ ಪರ್ತಿಪ್ಪಾಡಿ ವಹಿಸಿದ್ದರು.
ಸಮಾರಂಭದಲ್ಲಿ ಜಿ.ಪಂ. ಸದಸ್ಯರಾದ ಎನ್.ಎಸ್.ಕರೀಂ, ಸಂತೋಷ್ ಕುಮಾರ್ ರೈ ಬೋಳಿಯಾರು, ಮಾಜಿ ಜಿಪಂ ಸದಸ್ಯ ಅಝೀಝ್ ಮಲಾರ್, ಮಂಗಳೂರು ವಿ.ವಿ. ಪ್ರೊಫೆಸರ್ ಡಾ.ಪಿ.ಎಲ್.ಧರ್ಮ, ತಾ.ಪಂ.ಸದಸ್ಯ ಮುಸ್ತಫಾ ಮಲಾರ್, ಕೊಣಾಜೆ ಗ್ರಾ.ಪಂ. ಅಧ್ಯಕ್ಷ ಶೌಕತ್ ಅಲಿ, ಮಂಜನಾಡಿ ಗ್ರಾ.ಪಂ. ಅಧ್ಕಕ್ಷ ಮುಹಮ್ಮದ್ ಅಸೈ, ಬೆಳ್ಮ ಗ್ರಾಪಂ ಉಪಾಧ್ಯಕ್ಷ ಸಿ.ಎಂ.ಅಬ್ದುಲ್ ಸತ್ತಾರ್, ಗ್ರಾಪಂ ಸದಸ್ಯರಾದ ಇಸ್ಮಾಯೀಲ್ ದೊಡ್ಡಮನೆ, ಹಮೀದ್ ಕಿನ್ಯ, ಕುಂಞಿ ಬಾವಾ ಹಾಜಿ ಕಂಡಿಕ, ಉಸ್ಮಾನ್ ಅಕ್ಸಾ, ಹಾಜಿ ಕಬೀರ್, ಕುಂಞಿ ಬಾವಾ ಹಾಜಿ ಕಲ್ಕಟ್ಟ, ಹಿರಿಯ ಪತ್ರಕರ್ತ ಇಸ್ಮಾಯೀಲ್ ಶಾಫಿ, ಸಾಮಾಜಿಕ ಕಾರ್ಯಕರ್ತರಾದ ಎಚ್. ಇಸ್ಮಾಯೀಲ್ ಶಾಫಿ ಬಬ್ಬುಕಟ್ಟೆ, ಇಬ್ರಾಹೀಂ ಕೊಣಾಜೆ, ಉದ್ಯಮಿ ಕತರ್ ಬಾವಾ ಹಾಜಿ, ಹಾಜಿ ಹಸನಬ್ಬ ಕಲ್ಕಟ್ಟ, ಶಿಕ್ಷಣ ಪ್ರೇಮಿ ಹರೇಕಳ ಹಾಜಬ್ಬ, ಅಝೀಝ್ ಪರ್ತಿಪ್ಪಾಡಿ, ಹಮೀದ್ ಹಸನ್ ಮಾಡೂರು, ಜಲೀಲ್ ಬ್ರೈಟ್, ಹಸನ್ ಬ್ರೈಟ್ ಇಲೆಕ್ಟ್ರಿಕಲ್ ಮಾಲಕ ಹಸನ್ ಕೆಎಂಕೆ ಮಂಜನಾಡಿ, ಎಂ.ಎಚ್. ಮಲಾರ್, ಇಸ್ಮಾಯೀಲ್ ಪನೀರ್, ಇಸ್ಮತ್ ಪಜೀರ್, ಮಂಜನಾಡಿ ಗ್ರಾ.ಪಂ.ಸದಸ್ಯ ಅಶ್ರಫ್ ಕೆ.ಪಿ. ಶರೀಫ್ ಮಲಾರ್, ಹಾರಿಸ್ ಮಲಾರ್, ಎಂ.ಕೆ. ಕಮರ್ ಮಲಾರ್, ಅಬ್ಬಾಸ್ ಕಿನ್ಯ, ಬಶೀರ್ ಕಿನ್ಯ, ಪತ್ರಕರ್ತರಾದ ಮೂಸಾ ಕಲೀಂ, ವಸಂತ ಕೊಣಾಜೆ, ಮೋಹನ್ ಕುತ್ತಾರ್, ಅನ್ಸಾರ್ ಇನೋಳಿ, ಸತೀಶ್ ಕೊಣಾಜೆ ಉಪಸ್ಥಿತರಿದ್ದರು.
ಪತ್ರಕರ್ತ ಬಶೀರ್ ಕಲ್ಕಟ್ಟ ಸ್ವಾಗತಿಸಿದರು. ಪತ್ರಕರ್ತ ಆರೀಫ್ ಕಲ್ಕಟ್ಟ ವಂದಿಸಿದರು. ಪತ್ರಕರ್ತ ಹಂಝ ಮಲಾರ್ ಕಾರ್ಯಕ್ರಮ ನಿರೂಪಿಸಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ಮಹಮ್ಮದ್ ಆರೀಫ್ ಕಲ್ಕಟ್ಟ,