ಶನಿವಾರ, ಸೆಪ್ಟೆಂಬರ್ 19, 2015

ಬ್ಯಾರಿ ಲೇಖಕರು, ಕಲಾವಿದರ `ಮೇಲ್ತೆನೆ’ ಅಸ್ತಿತ್ವಕ್ಕೆ

 

 

 

 

 

ದೇರಳಕಟ್ಟೆ: ಬ್ಯಾರಿ ಭಾಷೆ, ಸಾಹಿತ್ಯ, ಸಂಸ್ಕøತಿ, ಬೆಳವಣಿಗೆ ಹಾಗೂ ಯುವ ಕಲಾದವಿರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಬ್ಯಾರಿ ಲೇಖಕರು ಮತ್ತು ಕಲಾವಿದರನ್ನು ಒಳಗೊಂಡ `ಮೇಲ್ತೆನೆ’ ಸಂಘಟನೆ ಭಾನುವಾರ ದೇರಳಕಟ್ಟೆಯಲ್ಲಿ ಅಸ್ತಿತ್ವಕ್ಕೆ ತರಲಾಯಿತು.

13ullal3ಹಿರಿಯ ಕವಿ ಆಲಿಕುಂಞ ಪಾರೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಘಟನೆ ಉದ್ದೇಶದ ಬಗ್ಗೆ ಲೇಖಕ ಇಸ್ಮತ್ ಪಜೀರ್ ಹಾಗೂ ಪತ್ರಕರ್ತ ಹಂಝ ಮಲಾರ್ ವಿವರಿಸಿದರು. ಇದೇ ಸಂದರ್ಭದಲ್ಲಿ 2015-16ನೇ ಸಾಲಿಗೆ ಪದಾಧಿಕಾರಿಗಳನ್ನು ಆರಿಸಲಾಯಿತು.
ಅಧ್ಯಕ್ಷರಾಗಿ ಆಲಿಕುಂಞ ಪಾರೆ, ಉಪಾಧ್ಯಕ್ಷ ಟಿ.ಇಸ್ಮಾಯಿಲ್ ಮಾಸ್ಟರ್, ಸಂಚಾಲಕರಾಗಿ ಹಂಝ ಮಲಾರ್, ಪ್ರಧಾನ ಕಾರ್ಯದರ್ಶಿಯಾಗಿ ಇಸ್ಮತ್ ಪಜೀರ್, ಕಾರ್ಯದರ್ಶಿಯಾಗಿ ಅನ್ಸಾರ್ ಇನೋಳಿ, ಕೋಶಾಧಿಕಾರಿಯಾಗಿ ಅಬ್ಬಾಸ್ ಕಿನ್ಯ, ಸಂಘಟನಾ ಕಾರ್ಯದರ್ಶಿಯಾಗಿ ಆರಿಫ್ ಕಲ್ಕಟ್ಟ ಆಯ್ಕೆಗೊಂಡರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಡಾ.ಎನ್.ಇಸ್ಮಾಯಿಲ್, ಬಶೀರ್ ಅಹ್ಮದ್ ಕಿನ್ಯ, ಎಚ್.ಎಂ.ಮಹಮ್ಮದ್, ಎಂ.ಎಚ್.ಮಲಾರ್, ಮಜೀದ್ ಮಾಸ್ಟರ್ ಮಲಾರ್, ಮಹಮ್ಮದ್ ಮಾಸ್ಟರ್ ಕಲ್ಕಟ್ಟ, ಕೆ.ಎಂ.ಕೆ.ಮಂಜನಾಡಿ, ಸೈಫುಲ್ಲಾ ಕುತ್ತಾರ್ ಇವರನ್ನು ಆರಿಸಲಾಯಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಮಹಮ್ಮದ್‌ ಆರೀಫ್‌ ಕಲ್ಕಟ್ಟ,