ಮಂಗಳವಾರ, ಜೂನ್ 19, 2012

ಕಿಡ್ನಿ ತೊಂದರೆ ಬಾರದಿರಲು ಇಷ್ಟು ಮಾಡಿದರೆ ಸಾಕು!

3
ಕಿಡ್ನಿ ತೊಂದರೆ ಬಾರದಿರಲು ಇಷ್ಟು ಮಾಡಿದರೆ ಸಾಕು!
ಉತ್ತಮ ಜೀವನ ಪದ್ಧತಿಗೆ ಸ್ಪಂದಿಸದ ತೊಂದರೆಗಳೇ ಇರಲಿಕ್ಕಿಲ್ಲ. ಆರೋಗ್ಯಕರ ಆಹಾರ ಸೇವನೆ, ಹವ್ಯಾಸ, ನಿಗದಿತ ವ್ಯಾಯಾಮ, ಉತ್ತಮ ಚಿಂತನೆಗಳಿಂದ ಮನಸ್ಸನ್ನು ಮಾತ್ರವಲ್ಲ, ದೇಹದ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು. ಇದಕ್ಕೆ ಕಿಡ್ನಿ ಸಮಸ್ಯೆಯೂ ಹೊರತಾಗಿಲ್ಲ.

ಕಿಡ್ನಿ ತೊಂದರೆ ಅಪಾಯಕಾರಿಯೇನೋ ನಿಜ. ಆದರೆ, ಉತ್ತಮ ಜೀವನ ಪದ್ಧತಿಯಿಂದ ಇದನ್ನು ದೂರವಿಡಬಹುದು. ತೊಂದರೆ ಬಂದ ಮೇಲೆ ಔಷಧಗಳು, ಕೊನೆಗೆ ಡಯಾಲಿಸಿಸ್ ಮೊರೆ ಹೋಗುವ ಬದಲು ಬಾರದಂತೆ ನೋಡಿಕೊಳ್ಳುವುದು ಉತ್ತಮ, ಅಲ್ವೇ?

ಅದಕ್ಕಾಗಿ ಹೀಗೆ ಮಾಡಿ...

* ಆರೋಗ್ಯಕರ ಉತ್ತಮ ಜೀವನ ಪದ್ಧತಿ ರೂಢಿಸಿಕೊಳ್ಳಿ. ಪೌಷ್ಟಿಕಾಂಶವಿರುವ ಆಹಾರ ಸೇವಿಸಿ. ಆಲ್ಕೋಹಾಲ್, ಧೂಮಪಾನದಿಂದ ದೂರವಿರಿ. ಉಪ್ಪು ಸೇವನೆ ಕಡಿಮೆಯಿರಲಿ.

* ರಕ್ತದೊತ್ತಡ ಇದ್ದರೆ ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಿ. ಅದನ್ನು ನಿಯಂತ್ರಿಸಲು ಸೂಕ್ತ ಔಷಧ ಪಡೆದುಕೊಳ್ಳಿ. ಬೊಜ್ಜು ಬಾರದಂತೆ ನೋಡಿಕೊಳ್ಳಿ. ಆಗಾಗ ಡಯಟಿಷಿಯನ್ ಸಲಹೆ ಪಡೆದುಕೊಳ್ಳಿ. ಕುಟುಂಬದಲ್ಲಿ ಯಾರಿಗಾದರೂ ಮೂತ್ರಪಿಂಡ ತೊಂದರೆಯ ಹಿನ್ನೆಲೆಯಿದ್ದರೆ ಎಚ್ಚರ ವಹಿಸಿ.

* ಎಲ್ಲಕ್ಕಿಂತ ಹೆಚ್ಚಾಗಿ ಮೂತ್ರದಲ್ಲಿ ಆಗುವ ಬದಲಾವಣೆಯನ್ನ ಗಮನಿಸಿ. ಹೆಚ್ಚು ಹಳದಿಯಾಗಿ ಬರುತ್ತಿದ್ದರೆ, ವಾಸನೆಯಿಂದ ಕೂಡಿದ್ದರೆ, ಕೋಲಾ ಕಲರ್‌ನಲ್ಲಿದ್ದರೆ ಅಥವಾ ರಕ್ತ ಒಸರುತ್ತಿದ್ದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ.

* ಅನೀಮಿಯಾ ಲಕ್ಷಣಗಳಿವೆಯಾ ಎಂದು ಪರೀಕ್ಷಿಸಿಕೊಳ್ಳಿ. ಸುಸ್ತು, ನೀರವವಾಗಿ ಕಾಣುವುದು, ತಲೆಸುತ್ತು, ಚಿಕ್ಕ ಉಸಿರು ಪದೇಪದೆ ಅನುಭವಕ್ಕೆ ಬಂದರೆ ನಿರ್ಲಕ್ಷಿಸಬೇಡಿ.

* ಚಟುವಟಿಕೆಯಿಂದ ಇರಿ. ನಿಯಮಿತ ವ್ಯಾಯಾಮ ರೂಢಿಸಿಕೊಳ್ಳಿ.

* ದೇಹಕ್ಕೆ ಬೇಕಾಗುವಷ್ಟು, ಸಾಕಾಗುವಷ್ಟು ನೀರು ಕುಡಿಯಿರಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಮಹಮ್ಮದ್‌ ಆರೀಫ್‌ ಕಲ್ಕಟ್ಟ,