ಭಾನುವಾರ, ಜೂನ್ 22, 2014

M.Arif Kalkatta Photo's

Arif Kalkatta Photograpy

Arif Kalkatta Photograpy

Arif Kalkatta Photograpy

Dehali Varthe News paper office in Dadar Mumbai



Karnataka Shanga Panvel Navi Mumbai

KPSM MUMBAI PRESS CLUB



Mr. Oscar Fernandes & Arif Kalkatta


Arif Kalkatta Photograpy

taj mahal agra- 29-12-2012

ಸೋಮವಾರ, ಮೇ 5, 2014

ಸೋಮವಾರ, ಮಾರ್ಚ್ 3, 2014

ಜುಯಿನಗರದಲ್ಲಿನ ಬಂಟ್ಸ್ ಸೆಂಟರ್ ‍ನಲ್ಲಿ ನೆರವೇರಿದ ತುಳು-ಕನ್ನಡಿಗರ ಸ್ನೇಹ ಸಮ್ಮಿಲನ

ಕನ್ನಡವನ್ನು ಮರೆಯುವಂತಿಲ್ಲ, ತುಳು ಬಿಡುವಂತಿಲ್ಲ : ಗುರುದೇವಾನಂದ ಸ್ವಾಮಿಜಿ

http://www.vknews.in/2014/01/23/tulu-kannadigara-sneha-sammilana/



ಮುಂಬಯಿ : ಮುಂಬಯಿಯಲ್ಲಿನ ನನ್ನ ಆರಂಭದ ದಿನಗಳಲ್ಲಿ ನಾಟಕ ರಂಗಕ್ಕೆ ಸಿಗುತ್ತಿದ್ದ ಪ್ರೋತ್ಸಾಹವೇ ಅಭಿನಯಕ್ಕೆ ಉತ್ಸಾಹ ತರುತ್ತಿತ್ತು. ಅವಾಗಿನ ವಾತಾವರಣವೇ ಬೇರೆ ಕಲಾಕಾರರು ಮತ್ತು ಕಲಾಭಿಮಾನಿಗಳಲ್ಲಿ ಉಮೇದು ಎನ್ನುವುದು ಒಂದಿತ್ತು ಅದು ಪ್ರದರ್ಶನಗಳ ಹೌಸ್‍ಫುಲ್ ಮೂಲಕ ಉತ್ತರಿಸುತ್ತಿತ್ತು. ಆದರೆ ಈಗ ಕಾಲ ಬದಲಾಗಿ ಪ್ರೇಕ್ಷಕರ ಕೊರತೆಯೇ ಕಾಣುತ್ತಿದೆ. ಕಾರಣ ನವಪೀಳಿಗೆಯಲ್ಲಿ ಸಂಸ್ಕೃತಿ, ಭಾಷಾಭಿಮಾನದ ಕೊರತೆಯಾಗಿದೆ ಎಂದು ಖ್ಯಾತ ಚಲನಚಿತ್ರ ನಿರ್ಮಾಪಕ ಮತ್ತು ಹಿರಿಯ ರಂಗತಜ್ಞ  ಸದಾನಂದ ಸುವರ್ಣ ತಿಳಿದರು.
ಕಳೆದ ಆದಿತ್ಯವಾರ ಸಂಜೆ ನವಿಮುಂಬಯಿ ಜುಯೀ ನಗರದಲ್ಲಿನ ಬಂಟ್ಸ್ ಸೆಂಟರ್‍ನಲ್ಲಿ ಕನ್ನಡ ಕಲಾ ಕೇಂದ್ರ ಮುಂಬಯಿ ಮತ್ತು ಬೋಂಬೆ ಬಂಟ್ಸ್ ಅಸೋಸಿಯೇಶನ್ ಸಂಸ್ಥೆಗಳು ಆಯೋಜಿಸಿದ್ದ ನವಿಮುಂಬಯಿ`ತುಳು-ಕನ್ನಡಿಗರ ಸ್ನೇಹ ಸಮ್ಮಿಲನ’ದಲ್ಲಿ ಮುಖ್ಯ ಅತಿಥಿಯಾಗಿದ್ದು ಮಾತನಾಡಿ ಸುವರ್ಣರು ತಿಳಿದರು.
ಶ್ರೀ ಕ್ಷೇತ್ರ ಒಡಿಯೂರು ಇದರ ಶ್ರೀ ಗುರು ದೇವಾನಂದ ಸ್ವಾಮೀಜಿ ಅವರು ದೀಪ ಪ್ರಜ್ವಲಿಸಿ `ಸ್ನೇಹ ಸಮ್ಮಿಲನ’ ಉದ್ಘಾಟಿಸಿದರು. ನಮಗೆ ಎರಡು ತಾಯಂದಿರು. ಕನ್ನಡ ತಾಯಿ, ತುಳು ತಾಯಿ, ಅಜ್ಜಿಯಾರೆಂದರೆ ಹಿಂದಿ ಭಾಷೆಯಾಗಿರುತ್ತದೆ. ಕನ್ನಡವನ್ನು ಮರೆಯುವಂತಿಲ್ಲ, ತುಳು ಬಿಡುವಂತಿಲ್ಲ. ಹಿಂದಿ ಬೇಕೆ ಬೇಕು. ಭಾರತೀಯರು ಎಲ್ಲೇ ನೆಲೆಯಾದರೂ ತಮ್ಮ ಮಾತೃ ಸಂಸ್ಕೃತಿಯನ್ನು ಓಲೈಸುವಲ್ಲಿ ಸಕ್ರೀಯರಾಗಬೇಕು. ಭಾಷೆ ಬೆಳೆದರೆ ಸಂಸ್ಕೃತಿ ತನ್ನಷ್ಟಕ್ಕೆಯೇ ಬೆಳೆಯುತ್ತದೆ. ಮುಂಬಯಿಗರು ಸಾಂಘಿಕ ಚತುರರು. ಇವರೇ ನಿಜವಾದ ಸಂಸ್ಕೃತಿ ಪೋಷಕರು ಎಂದು ತುಳು ಭಾಷೆ, ಸಂಸ್ಕೃತಿಯ ಸೊಗಸನ್ನು ರಸವತ್ತಾಗಿ ತಿಳಿಸಿ ನೆರೆದ ಸಭಿಕರನ್ನು ಒಡಿಯೂರುಶ್ರೀ ಅನುಗ್ರಹಿಸಿದರು.
ಬೋಂಬೆ ಬಂಟ್ಸ್ ಅಸೋಸಿಯೇಶನ್‍ನ ಅಧ್ಯಕ್ಷ ನ್ಯಾ| ರತ್ನಾಕರ ವಿ.ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರುಗಿಸಲಾದ ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ  ಕನ್ನಡ ಸಾಹಿತ್ಯ ಪರಿಷತ್ ದಕ್ಷಿಣ ಕನ್ನಡ ಮತ್ತು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್‍ಕುಮಾರ್ ಕಲ್ಕೂರ, ಸಂಶೋಧಕ-ಪ್ರಸಿದ್ಧ ಯಕ್ಷಗಾನ ವಿದ್ವಾಂಸ ಡಾ| ರಾಘವ ನಂಬಿಯಾರ್, ನಾದಬಿಂದು ಚಿನ್ಮಯ ಮಿಶನ್ ಕೋಲ್‍ವಾನ್‍ನ ನಿರ್ದೇಶಕಿ ಶ್ರೀಮತಿ ಪ್ರಮೋದಿನಿ ರಾವ್, ಉದಯ ಕಲಾನಿಕೇತನ ಸಾಗರ ಸಂಸ್ಥೆಯ ನಿರ್ದೇಶಕ ಎಸ್.ಬ್ರಹ್ಮಾಚಾರ್ ಉಪಸ್ಥಿತರಿದ್ದರು.
8ನೇ ಶತಮಾನದಲ್ಲಿ ಬದುಕನ್ನು ಬೆಳಗಿಸಿದ ಆದಿಶಂಕರಾಚಾರ್ಯರು ಹಿಂದೂ ಧರ್ಮವನ್ನು ಪ್ರತಿಪಾದಿಸಿದ ದಿಗ್ಗಜರು. ಅದಕ್ಕಾಗಿ ಮೂರು ಬಾರಿ ಕನ್ಯಾಕುಮಾರಿಯಿಂದ ಹಿಮಾಲಯದ ವರೆಗೆ  ಪಾದಯಾತ್ರೆಯನ್ನೂ ಕೈಗೊಂಡಿದ್ದರು.  ಎಂದು ಡಾ| ರಾಘವ ನಂಬಿಯಾರ್ ನುಡಿದರು.
ಪ್ರಮೋದಿನಿ ರಾವ್ ಮತ್ತು ಬ್ರಹ್ಮಾಚಾರ್ ಇಲ್ಲಿನ ತುಳು-ಕನ್ನಡಿಗರ ಸಾಂಸ್ಕೃತಿಕ ಉತ್ಸಹ ಮತ್ತು ಸಂಸ್ಕೃತಿ ಮೈಗೂಡಿಸುವಿಕೆಯನ್ನು ಪ್ರಶಂಸಿದರು.
ರಾಷ್ಟ್ರಾಭಿಮಾನ ಮತ್ತು ಸಂಸ್ಕಾರಯುತ ಬಾಳಿಗೆ ಇಂತಹ ಕಾರ್ಯಕ್ರಮಗಳು ಮಾದರಿಯಾಗಿದೆ. ಏಕತೆಯಿಂದ ಮುನ್ನಡೆದರೆ ಎಲ್ಲರ ಬದುಕೂ ಹಸನಾಗುವುದು ಎಂದು ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ನ್ಯಾ| ರತ್ನಾಕರ ಶೆಟ್ಟಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಬಂಟ್ಸ್ ಅಸೋಸಿಯೇಶನ್‍ನ ಗೌ| ಕಾರ್ಯದರ್ಶಿ ನ್ಯಾ| ಡಿ.ಕೆ ಶೆಟ್ಟಿ, ಕೋಶಾಧಿಕಾರಿ ಸಿಎ| ಸುರೇಂದ್ರ ಕೆ.ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಆಶಾ ಎಸ್.ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷೆ ನಿವೇದಿತಾ ಎ.ಶೆಟ್ಟಿ, ನ್ಯಾ| ಕೆ.ಪಿ ಪ್ರಕಾಶ್ ಎಲ್.ಶೆಟ್ಟಿ, ರಮೇಶ್ ಪೂಜಾರಿ, ಬಿ.ಹೆಚ್ ಕಟ್ಟಿ, ವಿ.ಕೆ ಸುವರ್ಣ, ಮಂಜುನಾಥ್ ಗೌಡ, ಪ್ರಸಾದ್ ನಿಂಜೂರು, ಜಗದೀಶ್ ಶೆಟ್ಟಿ ನಾಡಾಜೆಗುತ್ತು ಮತ್ತು ವಿಜಯ ಹೆಗ್ಡೆ, ಕರುಣಾಕರ ಆಳ್ವ, ಪ್ರಭಾಕರ್ ಹೆಗ್ಡೆ, ಜಿ.ಟಿ ಆಚಾರ್ಯ ಸೇರಿದಂತೆ  ನವಿಮುಂಬಯಿ ಆಸುಪಾಸಿನ  ಇತರ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದು, ಗುರು ದೇವಾನಂದ ಸ್ವಾಮೀಜಿ ಅವರನ್ನು ಗೌರವಿಸಿದರು.
ಕನ್ನಡ ಕಲಾ ಕೇಂದ್ರ ಮುಂಬಯಿ ತಂಡವು `ಶ್ರೀ ಆದಿಶಂಕರಾಚಾರ್ಯ’ ನಾಟಕದ 10ನೇ ಪ್ರದರ್ಶನವನ್ನು  ಸಾಂಸ್ಕೃತಿಕ ಕಾರ್ಯಕ್ರಮವನ್ನಾಗಿ ಸಾದರ ಪಡಿಸಿತು. ತುಳು ಕನ್ನಡಿಗರ ಸ್ನೇಹ ಸಮ್ಮಿಲನ ಸಮಿತಿಯ ಗೌರವಾಧ್ಯಕ್ಷ ಶ್ಯಾಮ್ ಎನ್.ಶೆಟ್ಟಿ  ಸ್ವಾಗತಿಸಿದರು.   ಕಲಾ ಕೇಂದ್ರದ ಅಧ್ಯಕ್ಷ ಬಿ.ಬಾಲಚಂದ್ರ ರಾವ್ ಪ್ರಾಸ್ತವಿಕ ನುಡಿಗಳನ್ನಾಡಿದರು. ಶಿಮುಂಜೆ ಪರಾರಿ ಮತ್ತು ಟಿ.ಆರ್ ಮಧುಸೂದನ್ ಕಾರ್ಯಕ್ರಮ ನಿರೂಪಿಸಿದರು.   ನಿವೇದಿತಾ ಎ.ಶೆಟ್ಟಿ ವಂದನಾರ್ಪಣೆಗೈದರು.
ಚಿತ್ರ / ವರದಿ : ಆರಿಫ್ ಕಲ್ಕಟ್ಟಾ.

ಸಮಾಜಪರ ಕಾಳಜಿಯ ಒಲವು ಕ್ಯಾನ್ಸರ್ ಪೀಡಿತರಿಗೆ ನೆರವು: ಪ್ರಭಾ ಸುವರ್ಣ

ಹಳೆಯ ವಸ್ತುಗಳ ಮಾರಾಟ ”ಗ್ಯಾರೇಜ್ ಸೇಲ್” ವಿಶಿಷ್ಟಮಯ ಕಾರ್ಯಕ್ರಮ

http://www.vknews.in/2014/01/19/old-things/


ಮುಂಬಯಿ, ಜ.18: ದಿ ಅಸೋಸಿಯೇಶನ್ ಆಫ್ ಮೆಸಾನಿಕ್ ಲೇಡಿಸ್ ಮುಂಬಯಿ ಸೆಂಟರ್ ಸಂಸ್ಥೆಯು ಗ್ಯಾರೇಜ್ ಸೇಲ್ ಎನ್ನುವ ಸಮಾಜಪರ ಕಾಳಜಿಯ ವಿಶಿಷ್ಟಮಯ ಕಾರ್ಯಕ್ರಮವನ್ನು ಇಂದಿಲ್ಲಿ ಶನಿವಾರ ಪೂರ್ವಾಹ್ನ ಮಹಾಲಕ್ಷ್ಮೀ ಪಶ್ಚಿಮದಲ್ಲಿನ ಭುಲಭಾಯಿ ದೇಸಾಯಿ ರಸ್ತೆಯಲ್ಲಿನ ಶೆಥ್ ಜಮನ್‌ದಾಸ್ ವಸಂಜೀ ಸಭಾಗೃಹದಲ್ಲಿ ಆಯೋಜಿಸಿತ್ತು.
ನಗರದ ಅನೇಕ ಸಂಸ್ಥೆಗಳು, ವಿವಿಧೆಡೆಗಳಿಂದ ಸಂಗ್ರಹಿತ ಮಣ್ಣಿನ ಪಾತ್ರೆಗಳು, ಪಾತ್ರೆ ಪರಡಿಗಳು, ಉಪಯೋಗಿತ ಉಡಿಗೆ ತೊಡಿಗೆ, ಗೃಹಪಯೋಗಿ ವಸ್ತುಗಳು, ಮಕ್ಕಳ ಆಟಿಕೆಗಳು, ಬರವಣಿಗೆ ಸಾಮಾಗ್ರಿಗಳು ಇತ್ಯಾದಿ ಉಪಯೋಗಿಸಿ ಪುನರಪಿ ಕೆಲಸಕ್ಕೆ ಬರುವ ವಸ್ತುಗಳ ಮಾರಾಟ ಮತ್ತು ಪ್ರದರ್ಶನವನ್ನು ಆಯೋಜಿಸಿದ್ದು, ನಗರದ ಉದ್ಯಮಿ ಶೆಫಿ ನಸುರುಲ್ಲಾ ಅವರು ರಿಬ್ಬನ್ ಕತ್ತರಿಸಿ ಮೇಳವನ್ನು ಉದ್ಘಾಟಿಸಿದರು. ಬಳಿಕ ಮೆಸಾನಿಕ್ ಲೇಡಿಸ್ ಅಸೋಸಿಯೇಶನ್‌ನ ಅಧ್ಯಕ್ಷೆ ಅಸೀನಾ ನಸುರುಲ್ಲಾ ಅವರು ದೀಪ ಪ್ರಜ್ವಲಿಸಿ ವಿಧ್ಯುಕ್ತವಾಗಿ ಪ್ರದರ್ಶನಕ್ಕೆ ಚಾಲನೆಯನ್ನಿತ್ತರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕಿ ಹೀನ ಉದೇಶಿ, ಉಪಾಧ್ಯಕ್ಷೆ ಪ್ರಭಾ ಎನ್.ಸುವರ್ಣ ಸೇರಿದಂತೆ ಗೌತಮ್ ದಿವಾರ್, ಆದಿ ವಕೀಲ್, ವಿಜಯ್ ಧ್ರುವ್, ವಾಸುದೇವ್ ಮಸೂರೆಕರೆ, ಸಂಧ್ಯಾ ಧ್ರುವ್ ಮತ್ತಿತರರು ಉಪಸ್ಥಿತರಿದ್ದರು.
ಉಪಯೋಗಿತ ಎಲ್ಲಾ ವಸ್ತುಗಳು ಗಾರ್ಬೆಜ್ ಅನ್ನುವಾಗಿಲ್ಲ. ಅವುಗಳಲ್ಲಿ ಸುಮಾರು 60%ದಷ್ಟು ವಸ್ತುಗಳು ಆಥಿಕ ಅಸಾಯಕರಿಗೆ ಉಪಯೋಗಕಾರಿ ಆಗುತ್ತವೆ. ಅಂತಹ ಬಿಸಾಡುವ ಯಾವುದೇ ವಸ್ತುಗಳನ್ನು ಸಂಗ್ರಹಿಸಿ ಜನಸಾಮಾನ್ಯರಿಗೆ ಉಪಯೋಗಿಸಲು ಅನುಕೂಲವಾಗುವಲ್ಲಿ ಈ ಸಂಸ್ಥೆ ಗ್ಯಾರೇಜ್ ಸೇಲ್ ಎನ್ನುವ ಸಮಾಜಪರ ಸೇವೆಯಲ್ಲಿ ತೊಡಗಿಸಿ ಕೊಂಡಿದೆ. ಈ ಮೂಲಕ ಬರುವ ಆದಾಯದ ಸಂಪೂರ್ಣ ಮೊತ್ತವನ್ನು ವಿಶೇಷವಾಗಿ ಕ್ಯಾನ್ಸರ್ ಪೀಡಿತರಿಗೆ ನೆರವು ನೀಡುತ್ತದೆ.
ಜೀವನ ಅನಾನುಕೂಲಸ್ಥರಿಗೆ ಆಧಾರವನ್ನು ನೀಡುವ ಸೇರಿದಂತೆ ಅನೇಕಾನೇಕ ಜನಮನ ಸ್ಪಂದನೆಯ ಸೇವೆಯನ್ನು ಈ ಸಂಸ್ಥೆ ನಡೆಸುತ್ತಿದೆ. ಸಮಾಜಪರ ಕಾಳಜಿಯ ಒಲವು ಮೂಡಿಸುವ ಉದ್ದೇಶವೇ ಈ ಸಂಸ್ಥೆಯ ಒಲವು ಆಗಿದ್ದು, ಕಳೆದ ಆರು ವರ್ಷಗಳಿಂದ ನಿರಂತರವಾಗಿ ಹಮ್ಮಿಕೊಂಡು ಬರುತ್ತಿರುವ ಈ ಕಾರ್ಯಕ್ರಮದಲ್ಲಿ ಕಳೆದ ವರ್ಷ ಸುಮಾರು ಒಂದು ಲಕ್ಷಕ್ಕೂ ಅಧಿಕ ಮೊತ್ತವನ್ನು ಸಂಗ್ರಹಿಸಿ ಗುಜರಾತ್, ಮುಂಬಯಿ ಮತ್ತಿತರ ಮಹಾ ನಗರ, ಗ್ರಾಮೀಣ ಪ್ರದೇಶದ ಕ್ಯಾನ್ಸರ್ ಪೀಡಿತ ಮಕ್ಕಳು, ಅನಾರೋಗ್ಯದಿಂದ ಬಳಲುತ್ತಿರುವ ಜನತೆಗೆ ನೆರವು ನೀಡಿದ್ದೇವೆ. ಈ ವರ್ಷ ಸುಮಾರು ಲಕ್ಷ ಎರಡು ಧನ ಸಂಗ್ರಹವಾಗಿದ್ದು ಇದನ್ನು ಜನಪರ ಯೋಜನೆ, ನಿರ್ಗತಿಕರ ಅನಾರೋಗ್ಯಕ್ಕಾಗಿ ಬಳಸುತ್ತಿದ್ದೇವೆ ಎಂದು ಕೊಡುಗೈದಾನಿ, ಹೆಸರಾಂತ ಸಮಾಜ ಸೇವಕಿ ಪ್ರಭಾ ಎನ್.ಸುವರ್ಣ ತಿಳಿಸಿದರು.
ಬಾಲಿವುಡ್ ನಟ ಮಿಲಿಂದ್ ಸೋಮನ್ ಅವರು ನಮ್ಮ ಸಂಸ್ಥೆಯೊಂದಿಗೆ ಜೊತೆಗೋಡಿದ್ದು, ಕಾಲೋಟ ಉತ್ಸಾಹ (ಮ್ಯಾರಥಾನ್ ಸ್ಪಿರಿಟ್) ಸಂಪೂರ್ಣವಾಗಿ ಪಾಲ್ಗೊಂಡು ನಮ್ಮ ಕಾರ್ಯಕ್ರಮದ ಅರಿವನ್ನು ಮೂಡಿಸಿರುವರು ಎಂದು ಸಂಸ್ಥಾಪಕಿ ಹೀನ ಉದೇಶಿ ತಿಳಿಸಿದರು.
- ಆರಿಫ್ ಕಲ್ಕಟ್ಟ

“ಪತ್ರಕರ್ತರು ನಿಷ್ಪಕ್ಷವಾಗಿ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು : ಶಾಸಕ ಕೃಷ್ಣ ಹೆಗ್ಡೆ”

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯ ತೃತೀಯ ಕೈಪಿಡಿ – ವಾರ್ಷಿಕ ಡೈರೆಕ್ಟರಿಬಿಡುಗಡೆ




ಮುಂಬಯಿ : ತುಳು-ಕನ್ನಡಿಗರು ಸಾಧಕ ಸಮಾಜ ಸೇವಕರು. ತಾವು ಎಲ್ಲೆಲ್ಲೂ ನೆಲೆಸಿದರೂ ಅಲ್ಲಲ್ಲೇ ಲೋಕದ ಸೇವೆಯಲ್ಲಿ ತೊಡಗಿಸಿಕೊಳ್ಳಲು ಸಂಸ್ಥೆಗಳನ್ನು ಹುಟ್ಟುಹಾಕುತ್ತಾರೆ. ಆ ಮುಖೇನ ತಮ್ಮ ಮತ್ತು ಸ್ಥಾನೀಯ ಜನತೆಯ ಸೇವೆಗೆ ಪೂರಕವಾಗಿ ಶ್ರಮಿಸಿ ಇತರರಿಗೆ ಮಾರ್ಗದರ್ಶಕರಾಗಿ ಬಾಳುವ ವೈಖರಿ ವಿಶಿಷ್ಟ್ಯವಾದದ್ದು. ತುಳು-ಕನ್ನಡಿಗರ ಬಾಳ್ವೆಯ ಉತ್ಸಹವವೇ ಅನನ್ಯವಾದದ್ದು. ಮಹಾರಾಷ್ಟ್ರದ ವಿಧಾನಸಭೆಗೆ ಅದರಲ್ಲೂ ಬೃಹನ್ಮುಂಬಯಿಂದ ನಾಲ್ವರು ಶಾಸಕರು ಆಯ್ಕೆಯಾಗುವಲ್ಲಿ ಕನ್ನಡ ಪತ್ರಕರ್ತರ ಸಹಯೋಗವೂ ಪ್ರಮುಖವಾಗಿದೆ ಎಂದು ಮಹಾರಾಷ್ಟ್ರ ರಾಜ್ಯದ ವಿಲೇಪಾರ್ಲೆ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ಕೃಷ್ಣ ಎಸ್.ಹೆಗ್ಡೆ ಅಭಿಪ್ರಾಯಪಟ್ಟರು
ಕನ್ನಡಿಗ ಪತ್ರಕರ್ತರ ಸಂಘ, ಮಹಾರಾಷ್ಟ್ರ (ನೋ.) ಸಂಸ್ಥೆಯು ಇಂದಿಲ್ಲಿ ಆದಿತ್ಯವಾರ ಪೂರ್ವಾಹ್ನ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದಲ್ಲಿ ಸಂಘದ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಪತ್ರಕರ್ತರ ಸಂಘದ `ಡೈಯರಿ-ಡಿರೆಕ್ಟರಿ 2014′ ಬಿಡುಗಡೆ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಶಾಸಕ ಕೃಷ್ಣ ಹೆಗ್ಡೆ  ಮಾತನಾಡಿದರು.
ಸಂಘವು ಪ್ರಕಾಶಿತ ತೃತೀಯ ದಿನಚರಿ ಪುಸ್ತಕ-ಮಾಹಿತಿಸೂಚಿ ಕೈಪಿಡಿ ಬಿಡುಗಡೆ ಗೊಳಿಸಿ ಮಾತನಾಡಿದ  ಕೃಷ್ಣ ಹೆಗ್ಡೆ  ನಾನು ಕೂಡಾ ಕರ್ಮಭೂಮಿಯಲ್ಲಿ ಮಹಾರಾಷ್ಟ್ರೀಯನ್ನರ ಮಧ್ಯೆ, ಗುಜರಾತಿ, ಅಲ್ಪಸಂಖ್ಯಾಕರ ಕ್ಷೇತ್ರದಲ್ಲಿ ಜನಪ್ರತಿನಿಧಿಯಾಗಿ ಶಾಸಕನಾಗಿದ್ದೇನೆ ಎಂದರೆ ನನಗೆನೇ ಆಶ್ಚರ್ಯವಾಗುತ್ತದೆ. ಕಾರಣ, ನ್ಯಾಯಕ್ಕಾಗಿನ ಹೋರಾಟ ಆ ಮೂಲಕ ಜನನಾಯಕರೆಣಿಸುವ ಸಾಧನೆ ತಮ್ಮ ಹುಟ್ಟುಗುಣವಾಗಿಯೇ ಬೆಳೆಸಿಕೊಂಡಿರುವಂತಿದೆ. ನನಗೆ ನೂರಾರು ಪತ್ರಕರ್ತ ಮಿತ್ರರಿದ್ದಾರೆ ಆದುದರಿಂದ ನಾನೂ ಕೂಡಾ ಅರೆಕಾಲಿಕ ಪತ್ರಕರ್ತನೆಂದೇ ಭಾವಿಸಿದ್ದೇನೆ. ಈ ಸಂಘವು ಪತ್ರಕರ್ತ ಐಡಿ ಕಾರ್ಡ್ ನೀಡಿದರೆ ಪೂರ್ಣಪ್ರಮಾಣದ ಪತ್ರಕರ್ತನಾಗುವ ಸಂಶಯವಿಲ್ಲ ಎಂದರು.
ನೂರಾರು ಹಗರಣಗಳನ್ನು ಬಯಲಿಗೆಳೆದು ಜನಸಾಮಾನ್ಯರಿಗೆ ನ್ಯಾಯ ಒದಗಿಸುವಲ್ಲಿ ಮಾಧ್ಯಗಳ ಪಾತ್ರ ಹಿರಿದಾಗಿದೆ. ಅದರಲ್ಲಿ ರಾಜಕಾರಣಿಗಳಿಗೆ ಅಸಮಾಧಾನವಾಗ ಬಹುದು ಆದರೆ ಸಮಾಜದ ಉದ್ಧಾರವಂತೂ ಖಂಡಿತಾ ಆಗುತ್ತದೆ. ಆದುದರಿಂದ ಪತ್ರಕರ್ತರು ನಿಷ್ಪಕ್ಷವಾಗಿ ಪತ್ರಿಕೋದ್ಯಮದ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ನನ್ನ ಪಕ್ಕದ ಕ್ಷೇತ್ರದಲ್ಲೇ ನಿಮ್ಮ ಸಂಘದ ಕನಸಿನ ಪತ್ರಕರ್ತರ ಭವನ ನಿರ್ಮಿಸುತ್ತಿರುವುದು ಅಭಿಮಾನ ಎಣಿಸುತ್ತಿದೆ. ನನ್ನ ಪಾಲಿನ 50,000 ರೂಪಾಯಿ ದೇಣಿಗೆಯನ್ನೂ ನೀಡುತ್ತೇನೆ. ನನ್ನ ಮಿತ್ರ ಶಾಸಕರಿಂದಲೂ ಪ್ರೋತ್ಸಾಹ ನೀಡಲು ಸಹಕರಿಸುತ್ತೇನೆ. ನಿಮ್ಮೆಲ್ಲಾ ಯೋಜನೆ-ಯೋಜನೆಗಳು ಫಪಲ್ರದವಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಎಲ್.ವಿ ಅಮೀನ್ ಮತ್ತು ಗೌರವ ಅತಿಥಿüಗಳಾಗಿ ಯುವ ಉದ್ಯಮಿ ಶಿವ ಶೆಟ್ಟಿ ಮೂಡಿಗೆರೆ, ದೇವಾಡಿಗರ ಸಂಘ ಮುಂಬಯಿ ಅಧ್ಯಕ್ಷ ವಾಸು ಎಸ್.ದೇವಾಡಿಗ, ಎಸ್.ಎಂ ಶೆಟ್ಟಿ ಶೈಕ್ಷಣಿಕ ಸಂಸ್ಥೆಯ ಕಾರ್ಯಾಧ್ಯಕ್ಷ ಜಯರಾಮ ಎನ್.ಶೆಟ್ಟಿ ಮತ್ತು ಪತ್ರಕರ್ತರ ಸಂಘದ ಲೆಕ್ಕಪರಿಶೋಧಕ ಸಿಎ| ಉಳ್ಳೂರುಗುತ್ತು ಶಂಕರ್ ಎಂ.ಶೆಟ್ಟಿ ಉಪಸ್ಥಿತರಿದ್ದು ಸಲಹಾ ಸಮಿತಿಯ ಸದಸ್ಯರುಗಳಾಗಿ ನೇಮಿತ ಸುರೇಂದ್ರ ಎ.ಪೂಜಾರಿ ಮತ್ತು ಗ್ರೆಗೋರಿ ಡಿ’ಅಲ್ಮೇಡಾ ಹಾಗೂ ಸದಸ್ಯರಿಗೆ ಸದಸ್ಯತ್ವ ಗುರುತುಪತ್ರ (ಐಡಿ ಕಾರ್ಡ್) ಪ್ರದಾನಿಸಿದರು.
ಜೀವನೋಪಾಯಕ್ಕೆ ಮುಂಬಯಿಗೆ ಬಂದ ನನ್ನ ಬಂಧುಗಳಂತಿರುವ ಕನ್ನಡ ಪತ್ರಕರ್ತರಲ್ಲಿ ನನಗೆ ಅಪಾರ ಗೌರವವಿದೆ. ತಾವೆಲ್ಲರೂ ಪತ್ರಕರ್ತರಕ್ಕಿಂತಲೂ ಆತ್ಮೀಯತೆಯನ್ನು ಮೈಗೂಡಿಸಿ ಗೌರವವನ್ನು ನೀಡುತ್ತಿರುವುದು ಅಭಿಮಾನ ಎಣಿಸುತ್ತಿದೆ. ಸದಾ ಒಳಿತಿನ ಚಿಂತಕರಾದ ತಾವುಗಳು ಯಾವುದೇ ಪ್ರಚೋದನೆಗಳಿಗೆ ಒತ್ತು ನೀಡದೆ ಸಮಾಜ ಮತ್ತು ಜನರನ್ನು ಬೆಸೆಯುವ ಕೊಂಡಿಗಳಾಗಿ ಸೇವಾ ನಿರತರಾಗಿದ್ದೀರಿ. ನಾವೆನೂ ಅಲ್ಲದ ನಮಗೆ ನಮ್ಮಲ್ಲಿನ ಸೇವಾ ಮನೋಧರ್ಮವನ್ನು ಗುರುತಿಸಿ ಜನನಾಯಕರನ್ನಾಗಿಸಿದ್ದೀರಿ. ಇಂತಹ ಸ್ಪಂದನಾತ್ಮಕ ಪತ್ರಕರ್ತರು ರಾಷ್ಟ್ರದ ಮತ್ತೆಲ್ಲೂ ಸಿಗುವುದು ಅಪರೂಪ ಎಂದೆಣಿಸಿದ್ದೇನೆ. ನಿಮ್ಮ ಎಲ್ಲಾ ಆಶಯಗಳು ಇಂತಹ ಸಂಘದ ಮೂಲಕ ಈಡೇರಲಿ ಎಂದು ಎಲ್.ವಿ ಅಮೀನ್ ನುಡಿದರು.
ಶಿವ ಮೂಡಿಗೆರೆ ಮಾತನಾಡಿ ಪತ್ರಕರ್ತರ ಸಾಂಘಿಕ ಶಕ್ತಿಗೆ ಇಂತಹ ವೇದಿಕೆ ಪೂರಕವಾಗಿದೆ.  ನಮಗೂ ಆದರ್ಶಪ್ರಾಯವಾದ ಈ ಸಂಘವು ಪತ್ರಕರ್ತರ ಶಕ್ತಿಯಾಗಿ ರೂಪುಗೊಳ್ಳಲಿ ಎಂದರು.
ಮಹಾರಾಷ್ಟ್ರದಲ್ಲಿನ ಪ್ರತಿಯೊಂದು ತುಳು-ಕನ್ನಡಿಗರ ಸಂಸ್ಥೆಗಳನ್ನು ಪೋಷಿಸಿ ಬೆಳೆಸುವಲ್ಲಿ ಕನ್ನಡ ಪತ್ರಕರ್ತರ ಕೊಡುಗೆ ಮಹತ್ವದ್ದಾಗಿದೆ. ತುಳು-ಕನ್ನಡಿಗರ ಸಮಸ್ಯೆಗಳನ್ನು ಸಂಬಂಧಿಕರಿಗೆ, ಸರಕಾರಕ್ಕೆ ತಿಳಿಸುವ ಕಾರ್ಯನಿರ್ವಹಿಸಿದ ಇಲ್ಲಿನ ಪತ್ರಿಕೆಗಳು ಬೆಳೆದಂತೆ ಸಮಾಜದ ಕನ್ನಡಿಯಾಗಿ ಈ ಕನ್ನಡ ಪತ್ರಕರ್ತರ ಸಂಘವೂ ಬೆಳೆಯಲಿ ಎಂದು ವಾಸು ದೇವಾಡಿಗ ನುಡಿದರು.

ಮುಂಬಯಿಯಲ್ಲಿನ ಕನ್ನಡ ಪತ್ರಕರ್ತರು ಒಳ್ಳೆಯ ಅಲೋಚನೆಗಾರರಾಗಿದ್ದಾರೆ. ಮಾಧ್ಯಮದ ಮೂಲಕ ಸಮಾಜವನ್ನು ಸದಾ ಜಾಗೃತರಾಗಿಸಿ ಸಮಾಜಪರ ಚಿಂತಕರಾಗಿ ಶ್ರಮಿಸುತ್ತಿದ್ದಾರೆ. ಕರ್ನಾಟಕದ ಜನತೆ ಮತ್ತು ಸಮಾಜದ ಸಂಬಂಧವನ್ನು ಸಮೀಪ್ಯಕ್ಕೆ ತರುವಲ್ಲಿ ಪ್ರಯತ್ನಿಸುವ ಕನ್ನಡಿಗ ಪತ್ರಕರ್ತರ ಸಂಘವು ಪತ್ರಕರ್ತರ ಶ್ರೇಯೋಭಿವೃದ್ಧಿಗಾಗಿ ರಾಷ್ಟ್ರದ ಆರ್ಥಿಕ ರಾಜಧಾನಿ ಬೃಹನ್ಮುಂಬಯಿಯಲ್ಲಿ ರಾಷ್ಟ್ರೀಯ ಮಾನ್ಯತೆ ಪಡೆದು ರಾಜ್ಯ ಮಟ್ಟದ ಸಂಘಟನೆಯಾಗಿ ಸೇವಾ ನಿರತವಾಗಿರುವುದು ಪ್ರಶಂಸನೀಯ ಇವರ ಸೇವೆಗೆ ತುಳು-ಕನ್ನಡಿಗರ ಪೆÇ್ರೀತ್ಸಹವ ಅಗತ್ಯವಾಗಿರಲಿ ಎಂದು ಜಯರಾಮ ಎನ್.ಶೆಟ್ಟಿ ಎಂದರು
ಮಹಾರಾಷ್ಟ್ರದಲ್ಲಿನ ಕನ್ನಡ ಪತ್ರಕರ್ತರು ಅಭಿಮಾನ ಪಡುವಂತಹ ಕಾಲವಿದು. ಒಂದನೆಯದಾಗಿ ಸಂಘವು ತೃತೀಯ ದಿನಚರಿ ಪುಸ್ತಕ-ಮಾಹಿತಿಸೂಚಿ ಕೈಪಿಡಿ ಪ್ರಕಾಶಿಸಿ ಕನ್ನಡ ಪತ್ರಕರ್ತರ ಅಸ್ಮಿತೆಯ ಸಾಂಘಿಕತೆಯನ್ನು ತೋರ್ಪಡಿಸಿದರೆ, ಎರಡನೇಯದು ತಮ್ಮ ಮಹತ್ವಕಾಂಕ್ಷೆಯ ಯೋಜನೆಯ ಪತ್ರಕರ್ತರ ಭವನವನ್ನು ಕರ್ಮಭೂಮಿಯಲ್ಲಿ ಮಾಧ್ಯಮ ಅನುಕೂಲತೆಗೆ ಸಿದ್ಧಗೊಳಿಸಿ ಸದಸ್ಯರುಗಳ ಹೆಚ್ಚುವರಿ ಸೇವೆಗೆ ತೊಡಗಿಸಿಕೊಳ್ಳುವ ಪರ್ವಕಾಲವಿದು. ಸಂಘದ ಉದ್ದೇಶಗಳನ್ನು ಪರಿಪೂರ್ಣವಾಗಿಸಿ ಫಲಾನುಭವ ಗಳಿಸಿಕೊಳ್ಳಲು ಸದಸ್ಯರ ಬೆಂಬಲ, ಪ್ರೋತ್ಸಾಹ, ಉತ್ತೇಜನವೂ ಅತ್ಯಗತ್ಯವಾಗಿದೆ. ಸಂಘದ ತೃತೀಯ ಮಹಾನ್ ಯೋಜನೆಯಾದ ಆರೋಗ್ಯನಿಧಿ ಬಳಕೆಯಾಗುವಂತೆಯೂ ಸದಸ್ಯರು ಸಂಸ್ಥೆಯನ್ನು ಬೆಳೆಸಲು ಕೈಜೋಡಿಸಬೇಕು ಎಂದು ಪಾಲೆತ್ತಾಡಿ ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ಸದಸ್ಯರಿಗೆ ಕರೆಯಿತ್ತರು.
ಕಾರ್ಯಕ್ರಮದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಪಿಲಾರು ಸುರೇಶ್ ಆಚಾರ್ಯ, ಬಾಬು ಕೆ.ಬೆಳ್ಚಡ, ಶ್ಯಾಮ್ ಎಂ.ಹಂಧೆ,  ಗುರುದತ್ತ್ ಎಸ್.ಪೂಂಜಾ ಮುಂಡ್ಕೂರು, ಲಾರೆನ್ಸ್ ಕುವೆಲ್ಲೋ, ಶ್ರೀಮತಿ ಸವಿತಾ ಎಸ್. ಶೆಟ್ಟಿ ಹಾಗೂ ಕ್ರೀಡಾ ಸಮಿತಿಯ ಕಾರ್ಯಧ್ಯಕ್ಷ ಜಯ ಸಿ.ಪೂಜಾರಿ, ವಿಶೇಷ ಆಮಂತ್ರಿತ ಸದಸ್ಯರುಗಳಾದ  ನ್ಯಾ| ವಸಂತ ಎಸ್. ಕಲಕೋಟಿ, ಸಲಹಾ ಸಮಿತಿಯ ಸದಸ್ಯರುಗಳಾದ ನ್ಯಾ| ಬಿ.ಮೋಹಿದ್ಧೀನ್ ಮುಂಡ್ಕೂರು ಮತ್ತಿತರು ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ದಯಾಸಾಗರ್ ಚೌಟ ಸ್ವಾಗತಿಸಿದರು. ಕೋಶಾಧಿಕಾರಿ ಜಿ.ಪಿ.ಕುಸುಮಾ ಪ್ರಾರ್ಥನೆ ಗೈದರು. ಡಿರೆಕ್ಟರಿ ಪ್ರಕಾಶಕ-ಸಂಪಾದಕ ಮತ್ತು ಗೌ| ಪ್ರ| ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ ಪ್ರಸ್ತಾವಿಕ ನುಡಿಗಳನ್ನಾಡಿದರು. ಗೌ|  ಕಾರ್ಯದರ್ಶಿ ಹರೀಶ್ ಕೆ.ಹೆಜ್ಮಾಡಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ  ಜನಾರ್ಧನ ಎಸ್. ಪುರಿಯಾ ವಂದನಾರ್ಪಣೆಗೈದರು.
ಚಿತ್ರ / ವರದಿ: ಅರೀಫ್ ಕಲ್ಕಟ್ಟ.

ಮಾ.4: ಬಾಯಾರ್ ತಂಙಳ್ ಮುಂಬಯಿಗೆ

ಮಾ.4: ಬಾಯಾರ್ ತಂಙಳ್ ಮುಂಬಯಿಗೆ


ಮುಂಬಯಿ (ವಿಶ್ವಕನ್ನಡಿಗ ನ್ಯೂಸ್): ಇತ್ತೀಚೆಗೆ ನಿಧನರಾದ ಉಳ್ಳಾಲ ಖಾಝಿ ತಾಜುಲ್ ಉಲಮಾ ಉಳ್ಳಾಲ ತಂಙಳ್(ನ.ಮ)ರವರ ಅನುಸ್ಮರಣೆ ಕಾರ್ಯಕ್ರಮ ಮಾ.4ರಂದು ರಾತ್ರಿ 9ಕ್ಕೆ  ಸುನ್ನೀ ಗಾಂಜೀ ಜಮಾತ್ ಹಾಲ್ ಡೋಂಗ್ರಿಯಲ್ಲಿ ನಡೆಯಲಿದೆ.
ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಇಂಬಿಚ್ಛಿಕೋಯಮ್ಮ ತಂಙಳ್ ಬಾಯಾರ್ ನೇತ್ವತ್ವದಲ್ಲಿ ಸಿದ್ದೀಕ್ ಸಖಾಫಿ ಆವಾಲಂ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಹಾಗೂ ಇಸ್ಮಾಯೀಲ್ ಆಂಜದಿ, ಮೋಯ್ಯಿದ್ದೀನ್ ಸಖಾಫಿ ಉಳ್ವಾರ್, ಮೊಹಮ್ಮದ್ ಸಖಾಫಿ ತೋಕೆ, ಇಬ್ರಾಹೀಂ ಝುಹುರಿ ಹಾಗೂ ತಾಜುಲ್ ಉಲಮಾ ಅನುಸ್ಮರಣೆ ಸಮಿತಿ ಮುಂಬಯಿ ಇದರ ಪದಧಿಕಾರಿಗಳು ಉಪಸ್ಥಿತರಿರುವರು.  ವರದಿ: ಆರೀಫ್ ಕಲ್ಕಟ್ಟ.

ಶನಿವಾರ, ಮಾರ್ಚ್ 1, 2014

ಇಂದಿನಿಂದ ಮಾ.1 ತನಕ ಕಲ್ಕಟ್ಟ ಇಲ್ಯಾಸ್ ಮಸ್ಜಿದ್ ವಠಾರದಲ್ಲಿ ಬಹೃತ್ ಧಾರ್ಮಿಕ ಪ್ರವಚನ

ಇಂದಿನಿಂದ ಮಾ.1 ತನಕ ಕಲ್ಕಟ್ಟ ಇಲ್ಯಾಸ್ ಮಸ್ಜಿದ್ ವಠಾರದಲ್ಲಿ ಬಹೃತ್ ಧಾರ್ಮಿಕ ಪ್ರವಚನ

ಮಂಗಳೂರು (ವಿಶ್ವಕನ್ನಡಿಗ ನ್ಯೂಸ್): ತಖ್ವಿಯ್ಯತುಲ್ ಇಸ್ಲಾಂ ಯಂಗ್‍ಮೆನ್ಸ್ ಅಸೋಸಿಯೇಶನ್ ಮತ್ತು ಎಸೆಸ್ಸೆಫ್. ಕಲ್ಕಟ್ಟ, ಮಂಜನಾಡಿ ಇದರ ಜಂಟಿ ಅಶ್ರಯದಲ್ಲಿ ಫೆ.25ರಿಂದ ಮಾ.1ವರೆಗೆ ನಿರಂತರ 5ದಿನಗಳ ಧಾರ್ಮಿಕ ಕಾರ್ಯಕ್ರಮ ಮರ್ಹೂಂ ಮಂಜನಾಡಿ ಉಸ್ತಾದ್ ವೇದಿಕೆ ಕಲ್ಕಟ್ಟ ಇಲ್ಯಾಸ್ ಮಸ್ಜಿದ್ ವಠಾರದಲ್ಲಿ ನಡೆಯಲಿದೆ.
ಫೆ.25 ಮಂಗಳವಾರ ಅಸ್ತಮಿಸಿದ ಬುಧವಾರ ರಾತ್ರಿ ಶೈಖುನಾ ಎನ್.ಎಂ ಅಬ್ದುರ್ರಹ್ಮಾನ್ ಮುಸ್ಲಿಯರ್ ಉದ್ಟಾಟಿಸಿ, ಅಬ್ದುಲ್ ಖಾದಿರ್ ಅಹ್ಸನಿ ಮಂಬೀದಿರವರು ‘ಕುಟುಂಬ ಜೀವನ” ಎಂಬ ವಿಷಯದ ಕುರಿತು ಮುಖ್ಯ ಭಾಷಣ ಮಾಡಲಿದ್ದಾರೆ.
ಫೆ.26 ಬುಧವಾರ ಅಸ್ತಮಿಸಿದ ಗುರುವಾರ ರಾತ್ರಿ “ದಾರಿ ತಪ್ಪುತ್ತಿರುವ ಮುಸ್ಲಿಂ ಸಮೂಹ” ಎಂಬ ವಿಷಯದ ಕುರಿತು ಹನಸ್ ಸಿದ್ದೀಖಿ ಅಲ್-ಕಾಮಿಲ್‍ರವರು ಭಾಷಣ ಮಾಡಲಿದ್ದಾರೆ.
ಫೆ.27 ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ “ಸ್ವರ್ಗ ಮತ್ತು ನರಕ” ಎಂಬ ವಿಷಯದ ಕುರಿತು ಆಸ್ಸಯ್ಯಿದ್ ಅಬ್ದುರ್ರಹ್ಮಾನ್ ಎ.ಪಿ.ಎ ತಂಙಳ್ ದಾರಿಮಿರವರು ಮಾತನಾಡಲ್ಲಿದ್ದಾರೆ,
ಫೆ.28 ಶುಕ್ರವಾರ ಅಸ್ತಮಿಸಿದ ಶನಿವಾರ ರಾತ್ರಿ ನೌಫಲ್ ಸಖಾಫಿ ಕಳಸ “ಇಸ್ಲಾಮಿನಲ್ಲಿ ಮಹಿಳೆ ಎಂಬ ವಿಷಯದ ಕುರಿತು ಮುಖ್ಯ ಭಾಷಣ ಮಾಡಲಿದ್ದಾರೆ.
ಮಾ.1 ಶನಿವಾರ ಅಸ್ತಮಿಸಿದ ಅದಿತ್ಯವಾರ ರಾತ್ರಿ ಸ್ವಲಾತ್ ವಾರ್ಷಿಕ ಹಾಗೂ ಇತ್ತೀಚೆಗೆ ನಿಧಾನರಾದ ತಾಜುಲ್ ಉಲಮಾ ಉಳ್ಳಾಲ ತಂಙಳ್(ನ.ರ)ರವರ ಅನುಸ್ಮರಣೆ ಕಾರ್ಯಕ್ರಮ ಅಸ್ಸಯ್ಯಿದ್ ಜಲಾಲುದ್ದೀನ್ ತಂಙಳ್ ಅಲ್-ಹಾದಿ ಮದನಿ ಉಜಿರೆ ತಂಙಳ್ ನೇತ್ವತ್ವದಲ್ಲಿ ಶೈಖುನ ಅಬ್ಬಾಸ್ ಮುಸ್ಲಿಯಾರ್ ಮಂಜನಾಡಿ ದುಅ ನೆರೆವೆರಿಸಲಿದ್ದಾರೆ. ಕೆ.ಪಿ ಹುಸೈನ್ ಸಹದಿ ಕೆಸಿರೋಡ್ ಮುಖ್ಯ ಭಾಷಣ ಮಾಡಲಿದ್ದಾರೆ ಹಾಗೂ ರಾಜಕೀಯ, ಸಾಮಾಜಿಕ ನೇತರಾhttp://www.vknews.in/2014/02/25/kalkatta-ilyas-masjid/ರು ಭಾಗವಹಿಸಲಿದ್ದಾರೆ.
ವರದಿ : ಆರಿಫ್ ಕಲ್ಕಟ್ಟ.

ಫೆ.22(ನಾಳೆ) ಮುಂಬೈಯಲ್ಲಿ ತಾಜುಲ್ ಉಲಮಾ ಅನುಸ್ಮರಣೆ ಮತ್ತು ಸ್ವಲಾತ್ ಮಜ್ಲಿಸ್

ಫೆ.22(ನಾಳೆ) ಮುಂಬೈಯಲ್ಲಿ ತಾಜುಲ್ ಉಲಮಾ ಅನುಸ್ಮರಣೆ ಮತ್ತು ಸ್ವಲಾತ್ ಮಜ್ಲಿಸ್

ಮುಂಬಯಿ (ವಿಶ್ವಕನ್ನಡಿಗ ನ್ಯೂಸ್): ಮಳ್‍ಹರ್ ನೂರುಲ್ ಇಸ್ಲಾಮಿಯ ಪೊಸೋಟ್ ಕಾಸರಕೋಡು ಇದರ ಮುಂಬಯಿ ಘಟಕ ಅಶ್ರಯದಲ್ಲಿ ಇತ್ತೀಚೆಗೆ ನಿಧನರಾದ ತಾಜುಲ್ ಉಲಮ ಅಬ್ದುರಹ್ಮಾನ್ ಇಂಬಿಚ್ಛಿಕೋಯ ತಂಙಳ್ ಉಳ್ಳಾಲ್‍ ರವರ ಅನುಸ್ಮರಣೆ ಮತ್ತು ಸ್ವಲಾತ್ ಮಜ್ಲಿಸ್ ಕಾರ್ಯಕ್ರಮವು ಫೆ.22 (ನಾಳೆ)ರಂದು ರಾತ್ರಿ 9ಗಂಟೆಗೆ ದಾದರ್(ಪೂ)ದಲ್ಲಿರುವ ಸುನ್ನೀ ಹನಫೀ ಮಸೀದಿಯಲ್ಲಿ ನಡೆಯಲಿದೆ.
ಕಾರ್ಯಕ್ರಮದ ದುಆವನ್ನು ಸೈಯ್ಯದ್ ಫಝಾಲ್ ಕೋಯಮ್ಮ ತಂಙಳ್ ಮಳ್‍ಹರ್ ವಹಿಸಲಿದ್ದಾರೆ ಎಂದು ಸಿದ್ದೀಕ್ ಮುಸ್ಲಿಯಾರ್ (9995777557) ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ವರದಿ: ಆರೀಫ್ ಕಲ್ಕಟ್ಟ.

ಫೆ.23(ನಾಳೆ) ಮುಂಬೈಯಲ್ಲಿ ಸ್ವಲಾತ್ ಮಜ್ಲಿಸ್

http://www.vknews.in/2014/02/22/swalath-majlis/

ಫೆ.23(ನಾಳೆ) ಮುಂಬೈಯಲ್ಲಿ ಸ್ವಲಾತ್ ಮಜ್ಲಿಸ್

ಮುಂಬಯಿ (ವಿಶ್ವಕನ್ನಡಿಗ ನ್ಯೂಸ್): ಜಾಮಿಯ್ಯಾ ಸಹದಿಯಾ ಅರಬೀಯಾ ಇದರ ಮುಂಬಯಿ ಘಟಕವು ಪ್ರತಿ ತಿಂಗಳು ನಡೆಸಿ ಬರುವ ಸ್ವಲಾತ್ ಮಜ್ಲಿಸ್ ಅದಿತ್ಯವಾರ ಫೆ.23ರಂದು ರಾತ್ರಿ 9ಗಂಟೆಗೆ ಡೊಂಗ್ರಿ ಸಹದಿಯಾ ಕಚೇರಿಯಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಮೊಯ್ಯದೀನ್ ಸಖಾಫಿ, ಇಸ್ಮಾಯೀಲ್ ಅಂಜದಿ, ಮಹಮ್ಮದ್ ಸಖಾಫಿ ಅಲ್-ಮದೀನ ಮತ್ತಿತರು ಉಪಸ್ಥಿತರಿರುವರು.
ವರದಿ: ಆರಿಫ್ ಕಲ್ಕಟ್ಟ.