ಭಾವಾವೇಶ ಬೇಡ: ಅಭಿಮಾನಿಗಳಿಗೆ ಮಅದನಿ ಕರೆ
ಕೊಲ್ಲಂ,: ಸೆರೆಮನೆಯ ಕತ್ತಲೆಯಿಂದ ನ್ಯಾಯದ ಬೆಳಕಿನೆಡೆಗೆ ನಾನು ತಲುಪಿದರೂ ನಿರಾಶೆಯೋ
ದುಃಖವೋ ನನಗಿಲ್ಲ ಎಂದು ಪಿಡಿಪಿ ಮುಖಂಡ ಅಬ್ದುನ್ನಾಸರ್ ಮಅದನಿ ಹೇಳಿದ್ದಾರೆ. ಕೊಟ್ಟಿಯಂ
ಸುಮಯ್ಯಾ ಅಡಿಟೋರಿಯಂನಲ್ಲಿ ನಡೆದ ಮಗಳು ಷಮೀರ ಜೌಹರ್‌ಳ ವಿವಾಹ ಕಾರ್ಯಕ್ರಮಕ್ಕೆ
ನ್ಯಾಯಾಲಯದ ವಿಶೇಷ ಅನುಮತಿಯೊಂದಿಗೆ ಆಗಮಿಸಿದ ಸಂದರ್ಭದಲ್ಲಿ ಮಅದನಿ ಮಾತನಾಡಿದರು.ಕೇರಳದ
ಸ್ನೇಹ ಹಾಗೂ ಸಂತೋಷದಲ್ಲಿ ಭಾಗವಹಿಸಲು ಸಾಧ್ಯವಾದುದರಲ್ಲಿ ಸಂತಸವಿದೆ. ನನ್ನ ಮಾತಿನ
ಬಗ್ಗೆ ನಿಮ್ಮ ಪ್ರತಿಕ್ರಿಯೆಗಳನ್ನು ಎಲ್ಲರೂ ಅವರವರ ಹೃದಯದಲ್ಲಿ ಅದುಮಿಡಬೇಕು. ನೀವು
ತೋರಿಸುತ್ತಿರುವ ಅತಿಯಾದ ಭಾವಾವೇಶದಿಂದಾಗಿ ನಾನು ನಿಮ್ಮ ಬಳಿಗೆ ತಲುಪಲು
ತಡವಾಗುವುದಕ್ಕೆ ಕಾರಣವಾಗಬಹುದು. ನ್ಯಾಯದ ಬೆಳಕಿನ ಹತ್ತಿರ ತಲುಪಲೂ ನನ್ನಿಂದ
ಸಾಧ್ಯವಾಗುತ್ತಿಲ್ಲ ಎಂದು ಮಅದನಿ ಹೇಳಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ಮಹಮ್ಮದ್ ಆರೀಫ್ ಕಲ್ಕಟ್ಟ,