ಶುಕ್ರವಾರ, ಮಾರ್ಚ್ 15, 2013

ಪ್ರತಿಯೊಬ್ಬರೂ ಸಮುದಾಯದ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು – ಶೈಖುನಾ ಪೇರೋಡ್ ಉಸ್ತಾದ್

 
ದುಬೈ : ಎಲ್ಲರೂ ಸಮುದಾಯಕ್ಕೆ ತಮ್ಮಿಂದ ಆಗುವ ಎಲ್ಲಾ ರೀತಿಯ ಸಹಾಯ, ಸಹಕಾರಗಳನ್ನು ಮಾಡಿ ಸಮುದಾಯದ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಒಬ್ಬ ಡಾಕ್ಟರ್ ಡಾಕ್ಟರ್ ಗೆ ತನ್ನಿಂದ ಆಗುವ ರೀತಿಯ ಸಹಾಯ ಮಾಡಬೇಕು, ಒಬ್ಬ ಇಂಜಿನಿಯರ್ ಇಂಜಿನಿಯರ್ ಗೆ ಆಗುವ ರೀತಿಯಲ್ಲಿ, ಅದೇ ರೀತಿ ಧನವಂತರು ಅದರ ಮೂಲಕ, ಸಾಮಾನ್ಯರು ತಮ್ಮ ದೇಹದ ಮೂಲಕ ಸಹಾಯ ಮಾಡಬೇಕು. ಎಲ್ಲರ ಮನಸ್ಸಲ್ಲಿ ಸಹಾಯ ಮಾಡಬೇಕು ಎಂಬ ಸಂಕಲ್ಪ ಇರಬೇಕು. ಈ ರೀತಿಯ ಒಳ್ಳೆಯ ಮನಸ್ಸು ಇಲ್ಲದಿದ್ದರೆ ನಮ್ಮ ಶರೀರವು ಪಕ್ಷಿ ಇಲ್ಲದ ಗೂಡಿನಂತೆ, ಹಣವಿಲ್ಲದ ಪೆಟ್ಟಿಗೆಯಂತೆ ಅಥವಾ ಮುತ್ತು ಇಲ್ಲದ ಚಿಪ್ಪಿನಂತೆ ವ್ಯರ್ಥವಾಗಿದೆ ಎಂದು ಬಹು ಪೇರೋಡ್  ಅಬ್ದುರಹ್ಮಾನ್ ಸಖಾಫಿ ಯವರು ಮನ್ ಶರ್ ಅಸ್ಸಖಾಫತಿಲ್ ಇಸ್ಲಾಮಿಯ್ಯಃ ಯು.ಎ.ಇ ಘಟಕದ ವತಿಯಿಂದ ದಿನಾಂಕ 01.03.2013 ರ  ಶುಕ್ರವಾರ ಮಗ್ರಿಬ್ ನಮಾಝಿನ ಬಳಿಕ ದೇರ ದುಬೈಯಲ್ಲಿರುವ ಹೋಟೆಲ್ ಮೆಲೋಡಿ ಕ್ವೀನ್ ಸಭಾಂಗಣದಲ್ಲಿ ನಡೆದ  “ಮನ್ ಶರ್ ಮಿಲನ್ “ಸಮಾವೇಶ  ಮತ್ತು 2013 ನೇ ಸಾಲಿನ ರಾಷ್ಟ್ರೀಯ ಸಮಿತಿಯ ಮಹಾಸಭೆಯಲ್ಲಿ ಸಮುದಾಯಕ್ಕೆ ಕರೆ ನೀಡಿದರು.


ಮನ್ ಶರ್ ಯು.ಎ.ಇ ಘಟಕದ ಅಧ್ಯಕ್ಷರಾದ ಬಹು: ಶೇಕ್ ಬಾವ ಹಾಜಿ ಮಂಗಳೂರು ರವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಮೊದಲಿಗೆ ಅಬುಧಾಬಿ ಜಅಫರ್ ನಿಝಾಮಿ ಮಲಪ್ಪುರಂ ಮತ್ತು ತಂಡದವರಿಂದ  ಬುರ್ದಾ ಆಲಾಪನೆ ಹಾಗೂ ಕರ್ನಾಟಕ ಕಲ್ಚರಲ್ ಫೌoಡೇಶನ್(KCF) ದುಬೈ ಸಮಿತಿಯಿಂದ  ನಅತೇ ಶರೀಫ್ ನಡೆಯಿತು. ಸಮಾರಂಭವನ್ನು ಸಂಸ್ಥೆಯ ಸಾರಥಿ ಸಯ್ಯದ್ ಸಿ.ಟಿ.ಎಂ. ಉಮರ್ ಅಸ್ಸಖಾಫ್ ತಂಙಳ್ ದುವಾ ನಡೆಸುವ ಮೂಲಕ  ಚಾಲನೆ ನೀಡಿದರು. ಬಹು ಪಿ.ಎಂ. ಹಮೀದ್ ಈಶ್ವರಮಂಗಿಲ ಸಮಾರಂಭವನ್ನು ಉದ್ಗಾಟಿಸಿದರು.


ವಿಶನ್ – 15 ಎಂಬ ಯೋಜನೆಯ ವರದಿ ಮಂಡಿಸಿ ಮಾತನಾಡಿದ ಮನ್ ಶರ್ ಯು.ಎ.ಇ ರಾಷ್ಟ್ರೀಯ ಕಮಿಟಿಯ ಅದ್ಯಕ್ಷ ಹಾಗೂ ಮನ್ ಶರ್ ಕೇಂದ್ರ ಸಮಿತಿಯ ಕೊಶಾಧಿಕಾರಿ ಕೂಡ ಆಗಿರುವ ಶೇಕ್ ಬಾವ ಹಾಜಿ ಮಂಗಳೂರು ರವರು ಸಮಾಜವು ಹಿಂದೆಂದೂ ಕಂಡಿರದ ಸಮಾಜೋದ್ಧಾರಕ ಯೋಜನೆಗಳನ್ನಿಟ್ಟುಕೊಂಡು ಅದರಂತೆ ಸುನ್ನೀ ಉಲೇಮಾಗಳ ಆಶೀರ್ವಾದದೊಂದಿಗೆ, ಯೋಜನೆಗಳೊಂದೊಂದು ಸಫಲವಾಗುತ್ತಲಿರುವುದು ಮನ್ ಶರ್ ನ ಹಿರಿಮೆಮಾತ್ರವಲ್ಲ, ಶಿಕ್ಷಣ, ಅರೋಗ್ಯ, ಸಾಮಾಜಿಕ ಏಳಿಗೆ ಹಾಗು ಮೂಲಭೂತ ಸೌಕರ್ಯ ಎಂಬ ನಾಲ್ಕು ಮುಖ್ಯ ಅಂಶಗಳಿಗೆ ಒತ್ತುಕೊಟ್ಟು ಯೋಜನೆಯೊಂದನ್ನು ರೂಪಿಸಿ ಅದನ್ನೇ ಮನ್ ಶರ್ ನ ಅಜೆಂಡಾವಾಗಿ ನಿರ್ಧರಿಸುವಲ್ಲಿ ಅಧ್ಯಕ್ಷರ ಶ್ರಮವು ಮಹತ್ತರವಾದುದು. ಮನ್ ಶರ್ ಕಿರು ವಯಸ್ಸಿನಲ್ಲೇ ಅದ್ಭುತ ಬೆಳವಣಿಗೆಯನ್ನು ಸಾಧಿಸುವುದರ ಹಿಂದಿನ ರಹಸ್ಯವು ಇದುವೇ ಆಗಿದೆ ಎಂದರು.

ನಂತರ  ಸಂಸ್ಥೆಯ ಸಾರಥಿ ಸಯ್ಯದ್ ಸಿ.ಟಿ.ಎಂ. ಉಮರ್ ಅಸ್ಸಖಾಫ್ ತಂಙಳ್ ರವರ ನೇತೃತ್ವದಲ್ಲಿ ಯು.ಎ.ಇ ರಾಷ್ಟ್ರೀಯ ಕಮಿಟಿಯನ್ನು ಪುನರ್ರಚಿಸಲಾಯಿತು. ಮನ್ ಶರ್ ನ ಸರ್ವತೋಮುಖ ಅಭಿವ್ರದ್ಧಿಯನ್ನೇ ಲಕ್ಷ್ಯವಾಗಿಟ್ಟುಕೊಂಡು ಸಾರಥ್ಯ ನೀಡುತ್ತಿರುವ ಶೇಕ್ ಬಾವ ಹಾಜಿ ಮಂಗಳೂರು ರವರು ಮನ್ ಶರ್ ಅಸ್ಸಖಾಫತಿಲ್ ಇಸ್ಲಾಮಿಯ್ಯಃ ಯು.ಎ.ಇ ರಾಷ್ಟ್ರೀಯ ಕಮಿಟಿಯ ಅಧ್ಯಕ್ಷರಾಗಿ ಸರ್ವಾನುಮತದಿಂದ ಪುನರಾಯ್ಕೆಗೊಂಡರು.

ಮನ್ ಶರ್ ಅಸ್ಸಖಾಫತಿಲ್ ಇಸ್ಲಾಮಿಯ್ಯಃ ಯು.ಎ.ಇ ರಾಷ್ಟ್ರೀಯ ಸಮಿತಿಯ 2013 ನೇ ಸಾಲಿನ ಪದಾಧಿಕಾರಿಗಳು ಇಂತಿವೆ:
  • ಅಧ್ಯಕ್ಷರು : ಶೇಕ್ ಬಾವ ಹಾಜಿ, ಮಂಗಳೂರು.
  • ಉಪಾಧ್ಯಕ್ಷರುಗಳು : ಇಬ್ರಾಹೀಂ ಹಾಜಿ ಶಾರ್ಜಾ, ರಫೀಕ್ ಆತೂರ್, ಅಶ್ರಫ್ ಸತ್ತಿಕಲ್ ಶಾರ್ಜಾ. 
  • ಪ್ರಧಾನ ಕಾರ್ಯದರ್ಶಿ : ಕೆ.ಎಂ ಮುಹಮ್ಮದ್ ಇಕ್ವಾಲ್ ಕಾಜೂರ್. 
  • ಕಾರ್ಯದರ್ಶಿಗಳು : ಕೆ.ಎಚ್.ಮುಹಮ್ಮದ್ ಸಖಾಫಿ, ಯಾಸೀರ್ ವಿಟ್ಲ ಶಾರ್ಜಾ, ಇಸ್ಮಾಯಿಲ್ ಅನ್ಸಾರ್.
  • ಸಂಚಾಲಕರು : ಇಬ್ರಾಹೀಂ ನಾಳ, ಹಸೈನಾರ್ ಅಮಾನಿ ಅಜ್ಜಾವರ, ಅಬ್ದುಲ್ ಹಮೀದ್ ಗಂಟಾಲ್ ಕಟ್ಟೆ.
  • ಕೋ-ಆರ್ಡಿನೇಟರ್ : ಅಮೀರ್ ಹಸನ್ ಕನ್ಯಪ್ಪಾಡಿ, ಮುಹಮ್ಮದ್ ಹನೀಫ್ ಕೆಮ್ಮಾರ ಶಾರ್ಜಾ.
  • ವಕ್ತಾರ : ಹುಸೈನ್ ಇನೋಳಿ.
  • ಖಜಾಂಚಿ: ಇಸ್ಮಾಈಲ್ ಹಾಜಿ ನಾಳ.
  • ಜಂಟಿ ಖಜಾಂಚಿ : ಅಬ್ದುಲ್ಲ ನಲ್ಕೆ.
  • ಸಲಹೆಗಾರರು : ಮುಹಿಯದ್ದೀನ್ ಕುಟ್ಟಿ ಹಾಜಿ ದಿಬ್ಬ, ಪಿ.ಎಂ. ಹಮೀದ್ ಈಶ್ವರಮಂಗಿಲ, ಮಹಬೂಬ್ ಸಖಾಫಿ ಕಿನ್ಯ, ಅಬ್ದುಲ್ ಲತೀಫ್ ಸಖಾಫಿ.
  • ಲೆಕ್ಕ ಪರಿಶೋಧಕ : ಶಾಕೀರ್ ಹುಸೈನ್.
  • ಸಹಾಯಕ ಲೆಕ್ಕ ಪರಿಶೋಧಕ : ಅಹ್ಮದ್ ಬಾವ.
  • ಕಾರ್ಯಕಾರಿ ಸಮಿತಿ ಸದಸ್ಯರು : ಡಾ.ಯು.ಎಂ ಇಕ್ಬಾಲ್, ರಿಯಾಜ್ ಕಲ್ಲಡ್ಕ, ಝಕರಿಯ ಕುಂತೂರ್, ಕರೀಂ ಮುಸ್ಲಿಯಾರ್ ಉರುವಾಲ್ ಪದವು, ಅಬ್ದುಲ್ ಹಮೀದ್ ಕಾಜೂರು, ಅಕ್ಬರ್ ಪಲ್ಲಮಜಲ್, ರಫೀಕ್ ಜೆಪ್ಪು, ಆತಿಶ್ ವಿಟ್ಲ, ಉಸ್ಮಾನ್ ಕೃಷ್ಣಾಪುರ, ಇಬ್ರಾಹೀಂ ಗಡಿಯಾರ್, ಇಬ್ರಾಹೀಂ ಸಖಾಫಿ, ಆಸಿಫ್ ಸಜಿಪ, ಗಫೂರ್ ಸಂಪಾಜೆ, ಶಾಫಿ ಮಡಿಕೇರಿ, ಶಹೀರ್ ಕರಾಯ, ರಫೀಕ್ ಜೌಹರಿ ಮತ್ತು ಇಬ್ರಾಹೀಂ ಫೈಝಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಮಹಮ್ಮದ್‌ ಆರೀಫ್‌ ಕಲ್ಕಟ್ಟ,